ಯಾದಗಿರಿ: ಸಣ್ಣ ಮಗುವಿನ ಮೇಲೆ ಕಾಲಿಟ್ಟು ಆಶೀರ್ವಾದ ಮಾಡಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ದೇವಮಾನವ ಎಂದು ಕರೆಸಿಕೊಳ್ಳುವ ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ಮಕಾರ್ಜುನ ಮುತ್ಯಾ, ಅಪ್ರಾಪ್ತ ಬಾಲಕಿಯನ್ನು ತಬ್ಬಿಕೊಂಡು ಮುದ್ದಾಡಿ ಅನುಚಿತವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ. ಈ ಪ್ರಕರಣ ಸಂಬಂಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕಠಿಣ ಕ್ರಮಕ್ಕೆ ಮುಂದಾಗಿದೆ.
ಅಪ್ರಾಪ್ತ ಬಾಲಕಿಯನ್ನು ತಬ್ಬಿಕೊಂಡಿದ್ದಾನೆ. ಅಲ್ಲದೆ, ಆಕೆಯನ್ನು ಎತ್ತಿ ಬೆಡ್ ಮೇಲೆ ನಿಲ್ಲಿಸಿದ್ದಲ್ಲದೆ, ಬೆಡ್ ಮೇಲೆ ಕುಳಿತುಕೊಂಡು ಆಕೆಯನ್ನು ಮುದ್ದಿಸಿದ್ದಾನೆ. ಬಲವಂತವಾಗಿ ನೃತ್ಯ ಮಾಡಿಸುವುದು, ಜಡೆ ಎಳೆಯುವುದನ್ನು ಮಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ಕೊಡಗು: ಅಪರಿಚಿತ ವ್ಯಕ್ತಿ ಹಾರಿಸಿದ ಗುಂಡು ತಾಗಿ ವ್ಯಕ್ತಿ ಗಂಭೀರ
ವಿಡಿಯೋ ವೈರಲ್ ಬೆನ್ನಲ್ಲೇ ಭಕ್ತ ವರ್ಗದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದು, ಈತ ದೇವರಲ್ಲ, ಈತನ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಕ್ಕಳ ಆಯೋಗ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಇಲಾಖೆಗೆ ಪತ್ರ ಬರೆದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

