Breaking News

T20 Worldcup: ಓಮನ್ ವಿರುದ್ಧ ಗೆಲುವಿನ ಮೂಲಕ ಶುಭಾರಂಭ ಮಾಡಿದ ಜಿಂಬಾಬ್ವೆ

ಕೊಲೊಂಬೊ: ಜಿಂಬಾಬ್ವೆ ತನ್ನ ಟಿ-20 ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ‌. ಇಂದಿನ ಪಂದ್ಯದಲ್ಲಿ ಓಮನ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಇಲ್ಲಿನ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಓಮನ್ ವಿರುದ್ಧ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆಯ್ಕೆ‌ ಮಾಡಿಕೊಂಡಿತು. ಜಿಂಬಾಬ್ವೆ ತಂಡದ ಕಾರಕುವಕ್ಕು ದಾಳಿಗೆ ಸಿಲುಕಿ ಓಮನ್ ತಂಡ 19.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 103 ರನ್ ಗಳಿಸಲಷ್ಟೇ ಶಕ್ತವಾಯ್ತು.

Advertisement

ಇದನ್ನೂ ಓದಿ: “ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ” ನೀಡಿದ್ರೆ ಉತ್ತಮ ಎಂಬ ಮೋಹನ್ ಭಾಗ್ವತ್ ಹೇಳಿಕೆಗೆ ಬೆಂಬಲ ನೀಡಿ ನಟಿ ಕಂಗನಾ ರಣಾವತ್

ಓಮನ್ ಪರ ವಿನಾಯಕ್ ಶುಕ್ಲ 28, ಸುಫಿಯಾನ್ ಮೆಹ್ಮೂದ್ 25, ನದೀಮ್ ಶಾನ್ 20 ರನ್ ಗಳಸಿದ್ದು ಬಿಟ್ಟರೆ ಉಳಿದವರಾರೂ ಎರಡಂಕಿ ದಾಟಲಿಲ್ಲ. ಜಿಂಬಾಬ್ವೆ ಪರ ರಿಚರ್ಡ್ ಎಂಗಾವರ, ಬ್ಲೆಸಿಂಗ್ ಮುಜರ್‌ಬನಿ, ಬ್ರಾಡ್ ಈವನ್ಸ್ ತಲಾ 3, ಸಿಕಂದರ್ ರಾಜಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಜಿಂಬಾಬ್ವೆ 13.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಜಿಂಬಾಬ್ವೆ ಪರ ಬ್ರಿಯಾನ್ ಬೆನ್ನೆಟ್ 48*, ಬ್ರೆಂಡನ್ ಟೈಲರ್ 31, ತಡಿವನಾಶೆ ಮರುಮಾನಿ 21 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಓಮನ್ ಪರ ಸೂಫಿ ಮೆಹ್ಮೂದ್ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು