Breaking News

ಇತಿಹಾಸದಲ್ಲೇ ಗರಿಷ್ಠ ದಾಖಲೆ ಬರೆದ‌ ಜೊಮ್ಯಾಟೋ ಹಾಗೂ ಬ್ಲಿಂಕಿಟ್ ಸಂಸ್ಥೆ !

Zomato and Blinkit set the highest record in history!

ನವದೆಹಲಿ : ಡಿಸೆಂಬರ್ 31ರಂದು ಡೆಲಿವರಿ ಪಾಲುದಾರರು ಅಂದ್ರೆ, ಗಿಗ್ ಕಾರ್ಮಿಕರು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರೂ, ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಜೊಮ್ಯಾಟೋ ಮತ್ತು ಬ್ಲಿಂಕಿಟ್, ದಾಖಲೆ ಮಟ್ಟದಲ್ಲಿ ಆರ್ಡರ್‌ಗಳನ್ನು ವಿತರಿಸಿವೆ ಎಂದು ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಮುಷ್ಕರದ ಕರೆಗಳು ಕೇಳಿಬಂದರೂ, ಅದರ ಪರಿಣಾಮವು ತಾವು ಮಾಡುವ ಸೇವೆಗಳ ಮೇಲೆ ಬೀಳದಂತೆ ಎಚ್ಚರ ವಹಿಸಿದ್ದಾರೆ. ವ್ಯವಸ್ಥೆಯು ಮೂಲತಃ ಅನ್ಯಾಯಕರವಾಗಿದ್ದರೆ, ಅದರೊಳಗೆ ಕೆಲಸ ಮಾಡಲು ಆಯ್ಕೆಮಾಡಿದ ವ್ಯಕ್ತಿಗಳು, ಇದರಲ್ಲಿ ದೀರ್ಘಕಾಲ ಉಳಿಯುವ ಹಾಗೂ ಎಲ್ಲಾ ಜನರನ್ನು ಆಕರ್ಷಿಸಿ ಈ ರೀತಿ ಮೆಚ್ಚುಗೆ ಗಳಿಸಿಕೊಳ್ಳೋದಿಕ್ಕೆ ಆಗುತ್ತಿರಲಿಲ್ಲ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಇದು ಸಂಸ್ಥೆಯ ಇತಿಹಾಸದಲ್ಲೇ ಗರಿಷ್ಠ ದಾಖಲೆ ;

Advertisement

ಇದರ ಫಲವಾಗಿ, ಜೊಮ್ಯಾಟೋ ಹಾಗೂ ಬ್ಲಿಂಕಿಟ್ ಆನ್ಲೈನ್ ಸೈಟ್ ಗಳಲ್ಲಿ ಆಹಾರ ಸಪ್ಲೈ ಮಾಡುತ್ತಿರುವ ಎರಡೂ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುವ 4.5 ಲಕ್ಷಕ್ಕೂ ಹೆಚ್ಚು ಡೆಲಿವರಿ ಪಾಲುದಾರರು ದಿನವಿಡೀ ಸೇವೆ ಸಲ್ಲಿಸಿದರು ಎಂದು ಅವರು ತಿಳಿಸಿದರು. ಈ ಅವಧಿಯಲ್ಲಿ, ಡೆಲಿವರಿ ಪಾಲುದಾರರು 63 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ 75 ಲಕ್ಷಕ್ಕೂ ಅಧಿಕ ಆರ್ಡರ್‌ಗಳನ್ನು ವಿತರಿಸಿದ್ದು, ಇದು ಸಂಸ್ಥೆಯ ಇತಿಹಾಸದಲ್ಲೇ ಎಲ್ಲಾ ಕಾಲಗಳ ಗರಿಷ್ಠ ದಾಖಲೆ ಆಗಿದೆ ಎಂದು ಗೋಯಲ್ ಹೇಳಿದರು. ದೀಪಿಂದರ್ ಗೋಯಲ್ ಇನ್ನೂ ಮುಂದುವರೆದು, “ಸ್ಪಷ್ಟ ಕಾನೂನು ಜಾರಿ ಹಾಗೂ ತ್ವರಿತ ಸಂಯೋಜನೆಗಾಗಿ ದೇಶದಾದ್ಯಂತ ಇರುವ ಸ್ಥಳೀಯ ಆಡಳಿತಗಳಿಗೆ ಮತ್ತು ನೆಲಮಟ್ಟದಲ್ಲಿ ಕೆಲಸ ಮಾಡಿದ ನಮ್ಮ ತಂಡಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದರು.

ಡಿಸೆಂಬರ್ 31ರಂದು ಗಿಗ್ ಕಾರ್ಮಿಕರು ಮುಷ್ಕರಕ್ಕೆ ಏಕೆ ಕರೆ ನೀಡಿದರು?
ದೇಶಾದ್ಯಂತ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಹಕ್ಕುಗಳು, ಕಲ್ಯಾಣ ಮತ್ತು ಗೌರವ ಸಂಬಂಧಿತ ಬೇಡಿಕೆಗಳನ್ನು ಒಟ್ಟಾಗಿ ಮುಂದಿಡುವ ಉದ್ದೇಶದಿಂದ, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸರ್ವಿಸ್ ವರ್ಕರ್ಸ್ ಯೂನಿಯನ್ 2025ರ ಡಿಸೆಂಬರ್ 31ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು. ಮುಷ್ಕರಕ್ಕೆ ಕರೆ ನೀಡುತ್ತಾ ಸಂಘಟನೆ, “ಎಲ್ಲಾ ಗಿಗ್ ಕಾರ್ಮಿಕರು, ಪ್ಲಾಟ್‌ಫಾರ್ಮ್ ಕಾರ್ಮಿಕರು, ಡಿಜಿಟಲ್ ಪ್ಲಾಟ್‌ಫಾರ್ಮ್ ಕಾರ್ಮಿಕರು, ಆ್ಯಪ್ ಆಧಾರಿತ ಕಾರ್ಮಿಕರು ಹಾಗೂ ಆನ್‌ಲೈನ್ ಫ್ರೀಲಾನ್ಸರ್‌ಗಳು ಡಿಸೆಂಬರ್ 31, 2025ರಂದು ಎಲ್ಲಾ ಕೆಲಸ ಸಂಬಂಧಿತ ಅಪ್ಲಿಕೇಶನ್‌ಗಳನ್ನು ಬಂದ್ ಮಾಡಿ, ಸೇವೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಮೂಲಕ ರಾಷ್ಟ್ರೀಯ ಮುಷ್ಕರದಲ್ಲಿ ಭಾಗವಹಿಸಬೇಕು. ಇದರಿಂದ ಮುಷ್ಕರ ಏಕತೆಯಿಂದ ಹಾಗೂ ಪರಿಣಾಮಕಾರಿಯಾಗಿ ನಡೆಯಲಿದೆ” ಎಂದು ಮನವಿ ಮಾಡಿತು. ಈ ಮುಷ್ಕರದ ಮೂಲಕ ಗಿಗ್ ಆರ್ಥಿಕತೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸಮಸ್ಯೆಗಳತ್ತ ಸರ್ಕಾರ ಮತ್ತು ಕಂಪನಿಗಳ ಗಮನ ಸೆಳೆಯುವ ಉದ್ದೇಶವಿತ್ತು.

News Source : Times Now

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು