ಜ. 8 ರಂದು ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಸಾವಿಗೆ ಕಾಲೇಜಿನ ಉಪನ್ಯಾಸಕರೇ ಕಾರಣ ಎಂದು ಕೆಲ ಉಪನ್ಯಾಸಕರು ಮತ್ತು ಆಕೆಯ ಸಹಪಾಠಿಗಳು ಆರೋಪಿಸಿದ್ದಾರೆ. ಉಪನ್ಯಾಸಕರು ಮಾಡಿದ ಜನಾಂಗೀಯ ನಿಂದನೆ, ಕಿರುಕುಳದಿಂದ ನೊಂದು, ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ :ಶ್ವಾನದ ಹೆಸರಿಗೆ ರಾಮ ಹೆಸರಿನ ಆಯ್ಕೆ ಕೊಟ್ಟ ಶಿಕ್ಷಕಿ ಅಮಾನತು

ಈ ಹಿನ್ನೆಲೆ ಕಾಲೇಜಿನ ಪ್ರಾಂಶುಪಾಲರೂ ಸೇರಿದಂತೆ ಒಟ್ಟು ಐವರು ಉಪನ್ಯಾಸಕರ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬೆನ್ನಲ್ಲೇ ಕಾಲೇಜಿನ ಆಡಳಿತ ಮಂಡಳಿ ಆರು ಮಂದಿ ಉಪನ್ಯಾಸಕರನ್ನು ಕರ್ತವ್ಯದಿಂದ ವಜಾ ಮಾಡಿದೆ. ಮೃತ ಯಶಸ್ವಿನಿ ತಾಯಿ ಪರಿಮಳ ತಮ್ಮ ಮಗಳ ಸಾವಿಗೆ ಸಿಗುವ ನ್ಯಾಯ ಎಲ್ಲರಿಗೂ ಸಂದೇಶವಾಗಬೇಕು ಎಂದು ಹೇಳಿದ್ದಾರೆ. ಆಕೆಯ ಸಾವಿಗೆ ಕಾರಣರಾದವರ ವಿರುದ್ಧ ಆಕೆಯ ಸಹಪಾಠಿಗಳು ಪ್ರತಿಭಟನೆ ನಡೆಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

