ಮಂಗಳೂರಿನ ಯೆನೆಪೋಯ ‘ಯಾಸಿಮ್’ ಸಂಸ್ಥೆಗೆ ಅಂತಾರಾಷ್ಟ್ರೀಯ IATA ಮಾನ್ಯತೆಯ ಗರಿ: ಕರಾವಳಿ ಕರ್ನಾಟಕದಲ್ಲೇ ಇಂತಹ ಹೆಗ್ಗಳಿಕೆ ಪಡೆದ ಮೊದಲ ವಿಶ್ವವಿದ್ಯಾಲಯ

ಮಂಗಳೂರು: ಕರಾವಳಿಯ ಮುಂಚೂಣಿಯ ಶಿಕ್ಷಣ ಸಂಸ್ಥೆಯಾದ ಯೆನೆಪೋಯ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ಕೂಳೂರಿನ ’ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್’ (ಯಾಸಿಮ್) ಕಾಲೇಜು ಜಾಗತಿಕ ಮಟ್ಟದಲ್ಲಿ ಭಾರಿ ಸಾಧನೆ ಮಾಡಿದೆ.

ಕೆನಡಾದ ಮಾಂಟ್ರಿಯಲ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರತಿಷ್ಠಿತ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯು (International Air Transport Association – IATA) ಯಾಸಿಮ್ ಸಂಸ್ಥೆಯನ್ನು ತನ್ನ ಅಧಿಕೃತ ಜಾಗತಿಕ ತರಬೇತಿ ಕೇಂದ್ರವಾಗಿ (Authorized Training Center) ಅಂಗೀಕರಿಸಿ ಅಧಿಕೃತ ಮಾನ್ಯತೆ ನೀಡಿದೆ.

Advertisement

ಈ ಮೂಲಕ ಇಡೀ ಕರಾವಳಿ ಕರ್ನಾಟಕದಲ್ಲೇ ತನ್ನ ಅಂಗಸಂಸ್ಥೆಯ ಮೂಲಕ ಅಧಿಕೃತ ಜಾಗತಿಕ IATA ತರಬೇತಿ ಕೇಂದ್ರವನ್ನು ಹೊಂದಿದ ಪ್ರಪ್ರಥಮ ವಿಶ್ವವಿದ್ಯಾಲಯ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಯೆನೆಪೋಯ ಪಾತ್ರವಾಗಿದೆ.

ಇದನ್ನೂ ಓದಿ: ಶನಿವಾರದ ಶಾಲಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ರಾಜ್ಯಾದ್ಯಂತ ಏಕರೂಪದ ಸಮಯ!

ಜಾಗತಿಕ ಮಟ್ಟದ ಉದ್ಯೋಗಾವಕಾಶಗಳಿಗೆ ಹೆಬ್ಬಾಗಿಲು:

ಭಾರತದ ವಾಯುಯಾನ ಉದ್ಯಮವು ಪ್ರಸ್ತುತ ದಿನಗಳಲ್ಲಿ ಅತ್ಯಂತ ವೇಗವಾಗಿ ಮತ್ತು ಗಣನೀಯವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಾಯುಯಾನ, ವಿಮಾನ ನಿಲ್ದಾಣಗಳ ಕಾರ್ಯಾಚರಣೆ , ಪ್ರಯಾಣ ಮತ್ತು ಪ್ರವಾಸೋದ್ಯಮ , ಕಾರ್ಗೋ ಮತ್ತು ಲಾಜಿಸ್ಟಿಕ್ಸ್ ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ತರಬೇತಿ ಪಡೆದ ವೃತ್ತಿಪರರ ಬೇಡಿಕೆ ಜಾಗತಿಕವಾಗಿ ನಿರಂತರವಾಗಿ ಹೆಚ್ಚುತ್ತಿದೆ.

ಯೆನೆಪೋಯ ಯಾಸಿಮ್ ಸಂಸ್ಥೆಗೆ ಸಿಕ್ಕಿರುವ ಈ ಅಂತರರಾಷ್ಟ್ರೀಯ ಮಾನ್ಯತೆಯಿಂದಾಗಿ, ಇನ್ಮುಂದೆ ಇಲ್ಲಿನ ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ವಾಯುಯಾನ ಪಠ್ಯಕ್ರಮ ಮತ್ತು ಉದ್ಯಮದ ಅತ್ಯುನ್ನತ ತರಬೇತಿ ಲಭ್ಯವಾಗಲಿದೆ. ಇದು ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಏರ್‌ಲೈನ್ಸ್‌ ಹಾಗೂ ವಿಮಾನ ನಿಲ್ದಾಣಗಳಲ್ಲಿ ಅತ್ಯುತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ನೆರವಾಗಲಿದೆ.

ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಗುಣಮಟ್ಟವನ್ನು ಕರಾವಳಿಗೆ ತಂದಿರುವ ಯೆನೆಪೋಯ ಸಂಸ್ಥೆಯ ಈ ಸಾಧನೆಗೆ ಶೈಕ್ಷಣಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *