ಮಂಗಳವಾರದ ದಿನವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಮಹತ್ವದ್ದಾಗಿದೆ. ಗ್ರಹಗತಿಗಳ ಬದಲಾವಣೆ ಮತ್ತು ನಕ್ಷತ್ರಗಳ ಸ್ಥಾನದ ಆಧಾರದ ಮೇಲೆ ನಿಮ್ಮ ಇಂದಿನ ದಿನದ ಆರ್ಥಿಕ ಹಾಗೂ ವೃತ್ತಿ ಜೀವನ ಹೇಗಿರಲಿದೆ ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ
ಮೇಷ ರಾಶಿ: ಮೇಷ ರಾಶಿಯವರಿಗೆ ಜೂನ್ 30 ಅತ್ಯಂತ ಅದ್ಭುತವಾದ ದಿನವಾಗಿದೆ. ನೀವು ಕೈಗೆತ್ತಿಕೊಳ್ಳುವ ಪ್ರತಿಯೊಂದು ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ನಿಮ್ಮ ಉತ್ತಮ ಕಾರ್ಯಕ್ಷಮತೆಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದ್ದು, ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದ್ದರೂ, ಆತುರದ ಹೂಡಿಕೆಗಳನ್ನು ತಪ್ಪಿಸಿ ಮಾರುಕಟ್ಟೆಯ ಟ್ರೆಂಡ್ ಗಮನಿಸುವುದು ಒಳ್ಳೆಯದು.

ವೃಷಭ ರಾಶಿ: ವೃಷಭ ರಾಶಿಯವರಿಗೂ ಈ ಮಂಗಳವಾರ ಯಶಸ್ಸು ತರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಶ್ರಮವನ್ನು ಗುರುತಿಸಲಾಗುತ್ತದೆ. ಹೊಸ ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಇಂದು ಸೂಕ್ತ ಅವಕಾಶಗಳು ಸಿಗಲಿವೆ. ಆರ್ಥಿಕ ಹರಿವು ಉತ್ತಮವಾಗಲಿದ್ದು, ದೀರ್ಘಕಾಲದ ಹಳೆಯ ಸಾಲಗಳು ಮರುಪಾವತಿಯಾಗುವ ಮೂಲಕ ಆರ್ಥಿಕ ಅಡೆತಡೆಗಳು ನಿವಾರಣೆಯಾಗಲಿವೆ.
ಮಿಥುನ ರಾಶಿ :ಮಿಥುನ ರಾಶಿಯವರಿಗೆ ಇಂದು ಆಂಜನೇಯ ಸ್ವಾಮಿಯ ವಿಶೇಷ ಅನುಗ್ರಹ ದೊರೆಯಲಿದೆ. ಇದರಿಂದಾಗಿ ವ್ಯಾಪಾರ ಮತ್ತು ಕಚೇರಿ ಕೆಲಸಗಳಲ್ಲಿ ಅಪಾರ ಲಾಭವನ್ನು ಗಳಿಸುವಿರಿ. ಆದರೆ, ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇರುವುದರಿಂದ ವಾದ-ವಿವಾದಗಳಿಂದ ದೂರವಿರಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಲು ಬಜೆಟ್ ರೂಪಿಸಿಕೊಳ್ಳುವುದು ಒಳಿತು.
ಕಟಕ ರಾಶಿ; ಕಟಕ ರಾಶಿಯವರು ಇಂದು ಕೆಲಸದ ಸ್ಥಳದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಯಾವುದೇ ರೀತಿಯ ನಿರ್ಲಕ್ಷ್ಯತನ ತೋರಿದರೆ ನಷ್ಟ ಅನುಭವಿಸಬೇಕಾಗಬಹುದು. ಉದ್ಯೋಗದಲ್ಲಿ ಬಡ್ತಿ (Promotion) ಅಥವಾ ಇನ್ಕ್ರಿಮೆಂಟ್ ನಿರೀಕ್ಷೆಯಲ್ಲಿದ್ದವರಿಗೆ ಇಂದು ಶುಭ ಸುದ್ದಿ ಸಿಗಲಿದೆ. ಊಹಾಪೋಹಗಳ ಆಧಾರದ ಮೇಲೆ ದೊಡ್ಡ ಹೂಡಿಕೆ ಮಾಡಬೇಡಿ, ಉಳಿತಾಯಕ್ಕೆ ಆದ್ಯತೆ ನೀಡಿ.
ಸಿಂಹ ರಾಶಿ ಮತ್ತು ಕನ್ಯಾ ರಾಶಿ: ಸಿಂಹ ಮತ್ತು ಕನ್ಯಾ ರಾಶಿಯವರಿಗೆ ಇಂದು ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ನಿಮ್ಮ ದೀರ್ಘಕಾಲದ ಯೋಜನೆಗಳು ವೇಗವನ್ನು ಪಡೆದುಕೊಳ್ಳಲಿವೆ. ಕನ್ಯಾ ರಾಶಿಯವರಿಗೆ ಆರ್ಥಿಕವಾಗಿ ಭರ್ಜರಿ ಆದಾಯ ಹರಿದುಬರುವ ಲಕ್ಷಣಗಳಿವೆ. ನಿಮ್ಮ ವೃತ್ತಿಪರ ನಡವಳಿಕೆಯಿಂದ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ತುಲಾ ರಾಶಿ ಮತ್ತು ವೃಶ್ಚಿಕ ರಾಶಿ: ತುಲಾ ಮತ್ತು ವೃಶ್ಚಿಕ ರಾಶಿಯವರಿಗೆ ಇಂದು ಮಿಶ್ರಫಲ ತರಲಿದೆ. ನಿಮ್ಮ ಕೌಶಲ್ಯದ ಆಧಾರದ ಮೇಲೆ ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ವೃಶ್ಚಿಕ ರಾಶಿಯವರು ಯಾವುದೇ ಪ್ರಮುಖ ಆಸ್ತಿ ಅಥವಾ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹಿರಿಯರ ಅಥವಾ ತಜ್ಞರ ಸಲಹೆ ಪಡೆಯುವುದು ಉತ್ತಮ.
ಧನು , ಮಕರ , ಕುಂಭ ಮತ್ತು ಮೀನ ರಾಶಿ: ಉಳಿದ ರಾಶಿಯವರಿಗೆ ಇಂದಿನ ದಿನವು ಸ್ಥಿರವಾಗಿರಲಿದೆ. ಮಕರ ಮತ್ತು ಕುಂಭ ರಾಶಿಯವರು ತಮ್ಮ ಕಠಿಣ ಪರಿಶ್ರಮದಿಂದ ನಿಧಾನವಾಗಿ ಪ್ರಗತಿಯತ್ತ ಹೆಜ್ಜೆ ಇಡಲಿದ್ದಾರೆ. ಮೀನ ರಾಶಿಯವರು ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಜಾಗರೂಕರಾಗಿರಬೇಕು. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ.

