ಗಂಡಂದಿರನ್ನು ‘ನಡೆದಾಡುವ ಎಟಿಎಂ’ ಮಾಡಿಕೊಂಡ ಮಹಿಳೆ!; 6 ಮದುವೆ ಮುರಿದು, 7ನೇ ಗಂಡನ ವಿರುದ್ಧವೂ ಜೀವನಾಂಶಕ್ಕೆ ಅರ್ಜಿ; ಹೈಕೋರ್ಟ್ ಜಡ್ಜ್‌ಗೆ ಶಾಕ್

ಬೆಂಗಳೂರು: ಒಬ್ಬ ಮಾಜಿ ಪತಿಯನ್ನು ನಿಭಾಯಿಸುವುದೇ ಕಷ್ಟ ಎನ್ನುವ ಕಾಲದಲ್ಲಿ, ಬರೋಬ್ಬರಿ ಆರು ಜನರನ್ನು ಮದುವೆಯಾಗಿ, ಅವರೆಲ್ಲರಿಂದಲೂ ಜೀವನಾಂಶ (Alimony) ವಸೂಲಿ ಮಾಡುವುದನ್ನೇ ಮಹಿಳೆಯೊಬ್ಬಳು ವೃತ್ತಿಯನ್ನಾಗಿಸಿಕೊಂಡಿರುವ ವಿಲಕ್ಷಣ ಘಟನೆಯೊಂದು ಕರ್ನಾಟಕ ಹೈಕೋರ್ಟ್‌ನಲ್ಲಿ (Karnataka High Court) ಬೆಳಕಿಗೆ ಬಂದಿದೆ. ತನ್ನ ಏಳನೇ ಪತಿಯ ವಿರುದ್ಧವೂ ಈಕೆ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದಾಗ, ವಕೀಲರು ಬಿಚ್ಚಿಟ್ಟ ಸತ್ಯ ಕಂಡು ನ್ಯಾಯಾಧೀಶರೇ ಒಂದು ಕ್ಷಣ ಶಾಕ್​ ಆಗಿದ್ದಾರೆ.

ಸಮಾಜದಲ್ಲಿ ಮದುವೆಯನ್ನು ಪವಿತ್ರ ಬಂಧ ಎಂದು ಪರಿಗಣಿಸಿದರೆ, ಈ ಮಹಿಳೆ ಮಾತ್ರ ಪುರುಷರನ್ನು ಬರೀ ‘ನಡೆದಾಡುವ ಎಟಿಎಂ’ (Walking ATMs) ಯಂತ್ರಗಳಂತೆ ಬಳಸಿಕೊಂಡಿರುವುದು ವಿಚಾರಣೆ ವೇಳೆ ಸಾಬೀತಾಗಿದೆ. ಈ  ಕಿಲಾಡಿ ಮಹಿಳೆ ಈ ಹಿಂದೆ ಆರು ಜನರನ್ನು ಮದುವೆಯಾಗಿದ್ದು, ಪ್ರತಿಯೊಬ್ಬರಿಂದಲೂ ವಿಚ್ಛೇದನ ಪಡೆದು ಭಾರಿ ಮೊತ್ತದ ಜೀವನಾಂಶವನ್ನು ನಿಯಮಿತವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಳ್ಳುತ್ತಿದ್ದಳು.

Advertisement

ಇಲ್ಲಿದೆ ನೋಡಿ ಎಕ್ಸ್​​​ ವಿಡಿಯೋ:

ಇಷ್ಟಕ್ಕೇ ನಿಲ್ಲದ ಈಕೆಯ ‘ಮದುವೆ ಸರಣಿ’ ಏಳನೇ ವ್ಯಕ್ತಿಯ ವರೆಗೂ ಮುಂದುವರಿದಿದೆ. ಸದ್ಯ ಈಕೆ ತನ್ನ ಏಳನೇ ಪತಿಯ ವಿರುದ್ಧವೂ ಕೌಟುಂಬಿಕ ದೌರ್ಜನ್ಯ ಮತ್ತು ಜೀವನಾಂಶದ ಕ್ಲೈಮ್ ಹೂಡಿ ಹೈಕೋರ್ಟ್ ಕದ ತಟ್ಟಿದ್ದಳು.

ಇದನ್ನೂ ಓದಿ:ಒಂದೇ ವಾರದಲ್ಲಿ 3ನೇ ಬಾರಿ ಉಡುಪಿ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್!; ಪೊಲೀಸರಿಂದ ಬಿಗಿ ತಪಾಸಣೆ; ತನಿಖೆಯಲ್ಲಿ ಬಯಲಾಯ್ತು ಹುಸಿ ಬೆದರಿಕೆ!

ನ್ಯಾಯಾಲಯದಲ್ಲಿ ರಹಸ್ಯ ಬಯಲು ಮಾಡಿದ ವಕೀಲರು:

ಏಳನೇ ಪತಿಯ ಪರ ವಾದ ಮಂಡಿಸಿದ ವಕೀಲರು, ಮಹಿಳೆಯ ಹಿಂದಿನ ಇತಿಹಾಸದ ಸಂಪೂರ್ಣ ಜಾತಕವನ್ನು ನ್ಯಾಯಾಧೀಶರ ಮುಂದೆ ತೆರೆದಿಟ್ಟರು. “ಈಕೆಗೆ ಮದುವೆ ಮಾಡಿಕೊಳ್ಳುವುದು ಮತ್ತು ಪತಿ ಸಾಲದವನಾಗುತ್ತಿದ್ದಂತೆ ಆತನ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ಹಾಕಿ ಜೀವನಾಂಶ ವಸೂಲಿ ಮಾಡುವುದೇ ಒಂದು ವ್ಯವಸ್ಥಿತ ಉದ್ಯೋಗವಾಗಿದೆ” ಎಂದು ಪುರಾವೆ ಸಮೇತ ವಾದಿಸಿದರು.

ಈ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು ತೀವ್ರ ಆಶ್ಚರ್ಯ ಮತ್ತು ಅಸಮಾಧಾನ ವ್ಯಕ್ತಪಡಿಸಿದರು. ಕಾನೂನನ್ನು ದುರುಪಯೋಗಪಡಿಸಿಕೊಂಡು ಪುರುಷರನ್ನು ವಂಚಿಸುತ್ತಿರುವ ಈ ‘ಲವ್ ಆಕ್ಟಾಗನ್’ (ಎಂಟು ಕೋನಗಳ ಪ್ರೇಮ ಜಾಲ) ಮಿತಿಮೀರಿ ಹೋಗುತ್ತಿರುವುದನ್ನು ಗಮನಿಸಿದ ನ್ಯಾಯಪೀಠ, ಈ ಅಸಂಬದ್ಧ ನಡವಳಿಕೆಗೆ ಇದು ಎಂಟನೇ ಅಥವಾ ಒಂಬತ್ತನೇ ಮದುವೆಯಾಗಿ ರೂಪಾಂತರಗೊಳ್ಳುವ ಮುನ್ನವೇ ತಡೆಯೊಡ್ಡಬೇಕು ಎಂದು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *