ಆಭರಣ ಪ್ರಿಯರಿಗೆ ಶಾಕ್: ಜುಲೈ 1ರಂದು ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಏರಿಕೆ

ಬೆಂಗಳೂರು: ನಿನ್ನೆ ಭರ್ಜರಿ ಇಳಿಕೆ ಕಂಡು ನಿರಾಳತೆ ತಂದಿದ್ದ ಹಳದಿ ಲೋಹದ ಬೆಲೆ, ಇಂದು ಬುಧವಾರ ಜುಲೈ ತಿಂಗಳ ಮೊದಲ ದಿನವೇ ಸಾರ್ವಜನಿಕರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕೊಂಚ ಹೆಚ್ಚಳ ದಾಖಲಾಗಿದೆ.

ಬಂಗಾರದ ದರ ಇಂದು ಪ್ರತಿ ಗ್ರಾಮ್‌ಗೆ 60 ರೂಪಾಯಿಗಳಷ್ಟು ಏರಿಕೆಯಾಗಿದೆ. ಇದರೊಂದಿಗೆ ಆಭರಣ ಚಿನ್ನದ ಬೆಲೆ 12,900 ರೂಪಾಯಿಗಳ ಗಡಿಯನ್ನು ದಾಟಿದೆ. ಇನ್ನು ನಿನ್ನೆ 5 ರೂಪಾಯಿ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆಯು, ಇವತ್ತು ಅಷ್ಟೇ ಮೊತ್ತದ (5 ರೂ) ಏರಿಕೆಯನ್ನು ಕಂಡಿದೆ.

Advertisement

ಬೆಂಗಳೂರು ಹಾಗೂ ದೇಶದ ಪ್ರಮುಖ ನಗರಗಳ ಇಂದಿನ ದರ (10 ಗ್ರಾಮ್‌ಗೆ):

ಭಾರತದಲ್ಲಿ ಇಂದು 10 ಗ್ರಾಮ್ ತೂಕದ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,29,050 ರುಪಾಯಿ ತಲುಪಿದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,40,780 ರುಪಾಯಿ ಆಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರ 1,29,050 ರೂಪಾಯಿಗಳಲ್ಲಿದೆ.

ದೇಶದ ವಿವಿಧ ನಗರಗಳಲ್ಲಿ 1 ಗ್ರಾಮ್ (22 ಕ್ಯಾರಟ್) ಚಿನ್ನದ ದರ ಪಟ್ಟಿ:

ಬೆಂಗಳೂರು, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರ್: ₹12,905

ಚೆನ್ನೈ: ₹13,100 (ಇತರ ನಗರಗಳಿಗಿಂತ ಹೆಚ್ಚು)

ದೆಹಲಿ, ಜೈಪುರ್, ಲಕ್ನೋ: ₹12,920

ಅಹ್ಮದಾಬಾದ್: ₹12,910

ಬೆಳ್ಳಿ ದರದಲ್ಲೂ ಏರಿಕೆ:

ದೇಶಾದ್ಯಂತ ಬೆಳ್ಳಿ ಬೆಲೆಯೂ ಇವತ್ತು ಏರಿಕೆಯ ಹಾದಿಯಲ್ಲಿದೆ. ಭಾರತದಲ್ಲಿ ಪ್ರಸ್ತುತ 1 ಗ್ರಾಮ್ ಬೆಳ್ಳಿ ಬೆಲೆ 240 ರೂಪಾಯಿ ಆಗಿದ್ದು, 100 ಗ್ರಾಮ್ ಬೆಳ್ಳಿ ಖರೀದಿಗೆ 24,000 ರೂಪಾಯಿ ತಗಲುತ್ತದೆ. ಬೆಂಗಳೂರು, ದೆಹಲಿ, ಮುಂಬೈ ಮತ್ತು ಕೋಲ್ಕತಾಗಳಲ್ಲಿ 1 ಗ್ರಾಮ್ ಬೆಳ್ಳಿ ದರ 240 ರೂಪಾಯಿ ಇದ್ದರೆ, ತಮಿಳುನಾಡು (ಚೆನ್ನೈ), ಕೇರಳ ಮತ್ತು ಭುವನೇಶ್ವರದಲ್ಲಿ ಇದರ ಬೆಲೆ ಕೊಂಚ ಹೆಚ್ಚಾಗಿದ್ದು, ಪ್ರತಿ ಗ್ರಾಮ್‌ಗೆ 245 ರೂಪಾಯಿ (100 ಗ್ರಾಮ್‌ಗೆ ₹24,500) ಆಗಿದೆ.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಮೇಲಿನ ತಾತ್ಕಾಲಿಕ ನಿಯಂತ್ರಣ ಅಂತ್ಯ: ಜುಲೈ 1ರಿಂದ ಹೊಸ ವ್ಯವಸ್ಥೆ

ವಿದೇಶಗಳಲ್ಲೂ ಬಂಗಾರ ದುಬಾರಿ:

ಜಾಗತಿಕವಾಗಿ ಬಹುತೇಕ ಎಲ್ಲಾ ಪ್ರಮುಖ ದೇಶಗಳಲ್ಲೂ ಇಂದು ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಭಾರತೀಯ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ ವಿದೇಶಗಳಲ್ಲಿ 1 ಗ್ರಾಮ್ (24 ಕ್ಯಾರಟ್) ಚಿನ್ನದ ದರ ಹೀಗಿದೆ:

ಸಿಂಗಾಪುರ: 176.10 ಸಿಂಗಾಪುರ್ ಡಾಲರ್ (₹12,874)

ಓಮನ್: 51.80 ಒಮಾನಿ ರಿಯಾಲ್ (₹12,746)

ಕತಾರ್: 488 ಕತಾರಿ ರಿಯಾಲ್ (₹12,684)

ಸೌದಿ ಅರೇಬಿಯಾ: 502 ಸೌದಿ ರಿಯಾಲ್ (₹12,658)

ಅಮೆರಿಕ: 133 ಡಾಲರ್ (₹12,600)

ಕುವೇತ್: 40.78 ಕುವೇತಿ ದಿನಾರ್ (₹12,547)

ದುಬೈ: 485.25 ಡಿರಾಮ್ (₹12,515)

ಮಲೇಷ್ಯಾ: 537 ರಿಂಗಿಟ್ (₹12,422)

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *