ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ-ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ಮುರಿದು ಬಿತ್ತಾ?; ನಟಿಯ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಂದ ಶುರುವಾಯ್ತು ಭಾರಿ ಚರ್ಚೆ

ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಪೃಥ್ವಿ ಶಾ (Prithvi Shaw) ಮತ್ತು ಅವರ ಭಾವಿ ಪತ್ನಿ, ನಟಿ ಆಕೃತಿ ಅಗರ್ವಾಲ್ (Aakriti Agarwal) ನಡುವೆ ಎಲ್ಲವೂ ಸರಿಯಿಲ್ಲವಾ? ಇಬ್ಬರ ಸಂಬಂಧವೂ ಮುರಿದುಬೀಳುವ ಹಂತಕ್ಕೆ ತಲುಪಿದೆಯಾ? ಇಂತಹದ್ದೊಂದು ಬಲವಾದ ಶಂಕೆ ಮತ್ತು ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗೆ ಆಕೃತಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಕೆಲವು ಆಘಾತಕಾರಿ ಪೋಸ್ಟ್‌ಗಳೇ ಈ ಎಲ್ಲ ಅನುಮಾನಗಳಿಗೆ ಮುಖ್ಯ ಕಾರಣವಾಗಿವೆ.

ಮಾರ್ಚ್ 2026 ರಲ್ಲಿ ಅತ್ಯಂತ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಕೇವಲ ನಾಲ್ಕೇ ತಿಂಗಳಲ್ಲಿ ಬೇರ್ಪಡುವ ಹಾದಿ ಹಿಡಿದಿದೆಯೇ ಎಂಬ ಅನುಮಾನಗಳನ್ನು ಈ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಹುಟ್ಟುಹಾಕಿವೆ.

Advertisement

ನನಗೆ ಹಲವು ಬಾರಿ ಮೋಸವಾಗಿದೆ

ನಟಿ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಆಕೃತಿ ಅಗರ್ವಾಲ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನೋವಿನ ಸಾಲುಗಳನ್ನು ಬರೆದುಕೊಂಡಿದ್ದಾರೆ. “ನನಗೆ ತುಂಬಾ ಬಾರಿ ಮೋಸ ಮಾಡಲಾಗಿದೆ, ಆದರೂ ನಾನು ಎಂದಿಗೂ ಒಂದು ಮಾತನ್ನೂ ಆಡಲಿಲ್ಲ. ಜೀವನದಲ್ಲಿ ಒಂದು ದೊಡ್ಡ ಹೆಜ್ಜೆ ಮುಂದೆ ಇಟ್ಟ ಮೇಲೂ (ನಿಶ್ಚಿತಾರ್ಥದ ನಂತರ) ಹೀಗಾಗುತ್ತದೆ ಎಂಬುದನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ! ಸಚಿನ್ ತೆಂಡೂಲ್ಕರ್ ಅವರ 37 ವರ್ಷಗಳ ಹಳೇ ದಾಖಲೆ ಉಡೀಸ್

ಈ ಪೋಸ್ಟ್​ನ ಮುಂದುವರಿದ ಭಾಗವಾಗಿ ಮತ್ತೊಂದು ಶಾಕಿಂಗ್ ಲೈನ್ ಬರೆದಿರುವ ಆಕೃತಿ, “ಎಲ್ಲವೂ ನಿಜ, ಸೋಶಿಯಲ್ ಮೀಡಿಯಾದಲ್ಲಿ ಆತನ ಬಗ್ಗೆ ನೀವು ಕಾಣುತ್ತಿರುವ ಪ್ರತಿಯೊಂದು ವದಂತಿಯೂ 100% ನಿಜ” ಎಂದು ಉಲ್ಲೇಖಿಸಿದ್ದಾರೆ.

ಈ ಪೋಸ್ಟ್‌ನಲ್ಲಿ ಅವರು ಎಲ್ಲೂ ನೇರವಾಗಿ ಕ್ರಿಕೆಟಿಗ ಪೃಥ್ವಿ ಶಾ ಹೆಸರನ್ನು ಬಳಸದಿದ್ದರೂ, ‘ಆತ’ ಎಂದು ಸಂಬೋಧಿಸಿರುವುದರಿಂದ ನೆಟ್ಟಿಗರು ಇದು ಪೃಥ್ವಿ ಶಾ ಅವರಿಗೇ ಹೇಳಿದ್ದು ಎಂದು ಬಲವಾಗಿ ನಂಬಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೃಥ್ವಿ ಶಾ ಅವರ ವೈಯಕ್ತಿಕ ಜೀವನದ ಕುರಿತು ಹರಿದಾಡುತ್ತಿದ್ದ ನೆಗೆಟಿವ್ ವದಂತಿಗಳಿಗೆ ಆಕೃತಿ ಅವರ ಈ ಪೋಸ್ಟ್ ಪರೋಕ್ಷವಾಗಿ ಮುದ್ರೆ ಒತ್ತಿದಂತಾಗಿದೆ. ಕೇವಲ ನಾಲ್ಕು ತಿಂಗಳಲ್ಲೇ ಈ ಜೋಡಿಯ ನಡುವೆ ಇಷ್ಟೊಂದು ದೊಡ್ಡ ಬಿರುಕು ಮೂಡಿರುವುದು ಉಭಯ ರಂಗದ ಅಭಿಮಾನಿಗಳಿಗೆ ಭಾರಿ ಆಘಾತ ನೀಡಿದೆ.

ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *