ಕಸದಿಂದ ರಸ: ಭವಿಷ್ಯದಲ್ಲಿ ದೆಹಲಿ ಬಸ್‌ಗಳು ಘನತ್ಯಾಜ್ಯದಿಂದ ಉತ್ಪಾದಿಸಿದ ‘ಹೈಡ್ರೋಜನ್’ ಇಂಧನದಿಂದ ಚಲಿಸಲಿವೆ ; ನಿತಿನ್ ಗಡ್ಕರಿ

ದೆಹಲಿ: ಭವಿಷ್ಯದಲ್ಲಿ ದೆಹಲಿಯ ಸಾರ್ವಜನಿಕ ಸಾರಿಗೆ ಬಸ್‌ಗಳು ನಗರದ ಘನತ್ಯಾಜ್ಯದಿಂದ (Garbage) ಉತ್ಪಾದಿಸಿದ ಹೈಡ್ರೋಜನ್ ಇಂಧನವನ್ನು ಬಳಸಿ ಚಲಿಸಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಆಯೋಜಿಸಿದ್ದ ಯುವ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ನಗರಗಳಲ್ಲಿ ದಿನನಿತ್ಯ ಸಂಗ್ರಹವಾಗುವ ಮುನ್ಸಿಪಲ್ ಘನತ್ಯಾಜ್ಯವನ್ನು (Municipal Solid Waste) ಬಳಸಿಕೊಂಡು ‘ಹಸಿರು ಹೈಡ್ರೋಜನ್’ (Green Hydrogen) ಇಂಧನವನ್ನು ಉತ್ಪಾದಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು. ಇದರಿಂದ ಒಂದು ಕಡೆ ಕಸದ ವಿಲೇವಾರಿ ಸಮಸ್ಯೆಯೂ ಬಗೆಹರಿಯಲಿದ್ದು, ಮತ್ತೊಂದೆಡೆ ವಾಹನಗಳಿಗೆ ಪರಿಸರಸ್ನೇಹಿ ಇಂಧನವೂ ಸಿಗಲಿದೆ ಎಂದು ಸಚಿವರು ವಿವರಿಸಿದರು.

Advertisement

“ನಾನು ದೆಹಲಿ ಬಸ್‌ಗಳನ್ನು ಕಸದಿಂದ ತಯಾರಿಸಿದ ಹೈಡ್ರೋಜನ್ ಮೂಲಕ ಓಡಿಸುತ್ತೇನೆ ಎಂದಾಗ ಜನ ನನ್ನನ್ನು ನೋಡಿ ನಗುತ್ತಾರೆ, ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ. ಆದರೆ, ಕಳೆದ 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ನಾನು ಒಮ್ಮೆ ಹೇಳಿದ ಮಾತು ಜಾರಿಯಾಗದೇ ಉಳಿದ ಇತಿಹಾಸವೇ ಇಲ್ಲ. ನಾನು ಯಾವುದನ್ನೂ ಸುಮ್ಮನೆ ಹೇಳುವುದಿಲ್ಲ, ಆಳವಾಗಿ ಅಧ್ಯಯನ ಮಾಡಿದ ಬಳಿಕವೇ ಹೇಳುತ್ತೇನೆ” ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಇವಿ ಮಾರುಕಟ್ಟೆಯಲ್ಲಿ ಪೇಟೆಂಟ್ ವಾರ್!; ಆನ್‌ಲೈನ್‌ನಲ್ಲಿ ಲೀಕ್ ಆಯ್ತು ಅಥರ್ ಮತ್ತು ಸಿಂಪಲ್ ಎನರ್ಜಿಯ ಹೊಸ ಫ್ಯಾಮಿಲಿ ಸ್ಕೂಟರ್‌ಗಳ ಲುಕ್

ಯೋಜನೆಯ ಕಾರ್ಯವಿಧಾನ ಹೇಗೆ?

ದೆಹಲಿಯಲ್ಲಿ ಬೆಟ್ಟದಂತೆ ರಾಶಿ ಬಿದ್ದಿರುವ ಕಸವೇ ಇನ್ಮುಂದೆ ಇಂಧನವಾಗಲಿದ್ದು, ಈ ಯೋಜನೆ ಹೀಗೆ ಕೆಲಸ ಮಾಡಲಿದೆ:

ತ್ಯಾಜ್ಯ ವಿಂಗಡಣೆ: ಮೊದಲು ಕಸವನ್ನು ಆರ್ಗಾನಿಕ್ ಮತ್ತು ಇನ್-ಆರ್ಗಾನಿಕ್ ಎಂದು ಪ್ರತ್ಯೇಕಿಸಲಾಗುತ್ತದೆ.

ಬಯೋ-ಡೈಜೆಸ್ಟರ್ ತಂತ್ರಜ್ಞಾನ: ಪ್ರತ್ಯೇಕಿಸಿದ ತ್ಯಾಜ್ಯವನ್ನು ಬಯೋ-ಡೈಜೆಸ್ಟರ್ ತಂತ್ರಜ್ಞಾನಕ್ಕೆ ಒಳಪಡಿಸಿ ಹಸಿರು ಹೈಡ್ರೋಜನ್ (Green Hydrogen) ಗ್ಯಾಸ್ ಉತ್ಪಾದಿಸಲಾಗುವುದು.

ಮಾಲಿನ್ಯ ಮುಕ್ತ ಸಾರಿಗೆ: ಇದೇ ಗ್ಯಾಸ್ ಅನ್ನು ಇಂಧನವಾಗಿ ತುಂಬಿಸಿ ದೆಹಲಿಯ ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ಓಡಿಸಲಾಗುವುದು.

ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *