ಮದುವೆಯಾಗಿ ಕೇವಲ ಮೂರೇ ದಿನಕ್ಕೆ ನವವಿವಾಹಿತೆಯೊಬ್ಬಳು ತನ್ನ ಪ್ರೇಮಿ (Lover) ಜೊತೆ ಹೋಟೆಲ್ ರೂಮ್‌ನಲ್ಲಿ ಸಮಯ ಕಳೆಯುತ್ತಿದ್ದಾಗ, ಪತಿ ತನ್ನ ಕುಟುಂಬಸ್ಥರೊಂದಿಗೆ ದಾಳಿ ನಡೆಸಿ ರೆಡ್‌ಹ್ಯಾಂಡ್ ಆಗಿ ಹಿಡಿದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ನಡವಳಿಕೆಯನ್ನು ಕಂಡು ಆಕ್ರೋಶಗೊಂಡ ಪತಿ ಹೋಟೆಲ್ ಆವರಣದಲ್ಲೇ ಭಾರಿ ರಂಪಾಟ ಸೃಷ್ಟಿಸಿದ್ದಾನೆ. ಮದುವೆಯ ಸಂಭ್ರಮದ ಬೆನ್ನಲ್ಲೇ ನಡೆದಿರುವ ಈ ಹೈಡ್ರಾಮಾ ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತಿ ಪೊಲೀಸ್ ಸಮೇತ ರೂಮ್‌ಗೆ ಬಂದಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಅವರೇ ಕ್ರಿಯೆಟ್ ಮಾಡಿರುವುದು ಎಂದು ಹೇಳಿದ್ದಾರೆ. ಒಟ್ಟಿನ ಈ ವಿಡಿಯೋ ಎಕ್ಸ್ ಖಾತೆಯಲ್ಲಿ ಭಾರೀ ವೈರಲ್ ಆಗಿದೆ.
ಮೂಲಗಳ ಪ್ರಕಾರ, ಕೇವಲ ಮೂರು ದಿನಗಳ ಹಿಂದಷ್ಟೇ ಇಬ್ಬರ ಮದುವೆ ಸಂಪ್ರದಾಯಬದ್ಧವಾಗಿ ನಡೆದಿತ್ತು. ಆದರೆ, ಮದುವೆಯಾದ ಬೆನ್ನಲ್ಲೇ ಪತ್ನಿಯು ಶಾಪಿಂಗ್ ನೆಪವೊಡ್ಡಿ ಮನೆಯಿಂದ ಹೊರಟಿದ್ದಾಳೆ. ಅನುಮಾನಗೊಂಡ ಪತಿ ಆಕೆಯನ್ನು ಹಿಂಬಾಲಿಸಿಕೊಂಡು ಹೋದಾಗ, ಆಕೆ ಸ್ಥಳೀಯ ಪ್ರಸಿದ್ಧ ಹೋಟೆಲ್ ಒಂದರಲ್ಲಿ ತನ್ನ ಹಳೆಯ ಪ್ರೇಮಿಯನ್ನು ಭೇಟಿಯಾಗಿರುವುದು ತಿಳಿದುಬಂದಿದೆ.
ಇಲ್ಲಿದೆ ನೋಡಿ ವಿಡಿಯೋ:
शादी के तीन बाद ही पत्नी होटल में प्रेमी के साथ के देखकर पति ने हंगामा किया
ऐसी लड़कियां रोड पर ही अच्छी लगती घर जो लाते खुद के साथ परिवार का भी नाम हसांते pic.twitter.com/sHtqGvvZ7s
— ROHIT SINGH (@desHi__chora) July 9, 2026
ಅವರಿಬ್ಬರೂ ಒಟ್ಟಿಗೆ ಹೋಟೆಲ್ ರೂಮ್‌ಗೆ ತೆರಳಿದ್ದನ್ನು ಖಚಿತಪಡಿಸಿಕೊಂಡ ಪತಿ, ತಕ್ಷಣವೇ ಹೋಟೆಲ್ ಸಿಬ್ಬಂದಿ ಹಾಗೂ ತನ್ನ ಕುಟುಂಬದವರೊಂದಿಗೆ ರೂಮ್ ಬಳಿ ಹೋಗಿದ್ದಾರೆ. ಈ ವೇಳೆ ಪತ್ನಿ ಮತ್ತು ಆಕೆಯ ಪ್ರೇಮಿ ಇಬ್ಬರೂ ಒಟ್ಟಿಗೆ ಇರುವುದನ್ನು ಕಂಡು ಪತಿ ಕೋಪಗೊಂಡಿರುವುದು ಈ ವಿಡಿಯೋದಲ್ಲಿ ನೋಡಬಹುದು.
ಪತ್ನಿಯ ಈ ದ್ರೋಹದಿಂದ ತೀವ್ರ ಮನನೊಂದ ಪತಿ ಹೋಟೆಲ್ ಆವರಣದಲ್ಲೇ ಸಾರ್ವಜನಿಕರ ಸಮ್ಮುಖದಲ್ಲಿ ಆಕೆಗೆ ಛೀಮಾರಿ ಹಾಕಿದ್ದಾನೆ. “ಇಂತಹ ಹೆಣ್ಣುಮಕ್ಕಳು ಕೇವಲ ರಸ್ತೆಯಲ್ಲಿದ್ದರೆ ಮಾತ್ರ ಚಂದ. ಇವರನ್ನು ಮನೆಗೆ ಕರೆದುಕೊಂಡು ಬಂದರೆ ಇವರ ಹೆಸರಷ್ಟೇ ಅಲ್ಲ, ಇಡೀ ಕುಟುಂಬದ ಗೌರವ, ಮರ್ಯಾದೆ ಹರಾಜಾಗುತ್ತದೆ. ಮೂರು ದಿನದ ಸಂಸಾರದಲ್ಲೇ ಇಂತಹ ದ್ರೋಹ ಎಸಗುವ ಇವರನ್ನು ನಂಬುವುದಾದರೂ ಹೇಗೆ?” ಎಂದು ಆಕ್ರೋಶ ಹೊರ ಹಾಕಿದ್ದಾನೆ.
ಇದನ್ನೂ ಓದಿ: ಪ್ರವಾಹದ ನೀರಿನಲ್ಲಿ ತೇಲಿಬಂದ 900ಕ್ಕೂ ಹೆಚ್ಚು ನಾಗರಹಾವುಗಳು; ವಿಷಸರ್ಪ ಕಚ್ಚಿ ಮಹಿಳೆ ಸಾವು
ಸ್ಥಳದಲ್ಲಿ ಭಾರಿ ಗಲಾಟೆ ಸೃಷ್ಟಿಯಾಗುತ್ತಿದ್ದಂತೆ ಹೋಟೆಲ್ ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದೆ. ಸದ್ಯ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮದುವೆಯ ಮಧುಚಂದ್ರದ ದಿನಗಳಲ್ಲೇ ಪತ್ನಿಯ ಅನೈತಿಕ ಸಂಬಂಧ ಬೀದಿಗೆ ಬಂದಿರುವುದು ಎರಡೂ ಕುಟುಂಬಗಳಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

