ರಜತ ಮಹೋತ್ಸವ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಿಂದ ಬೆಂಗಳೂರಿನಲ್ಲಿ ಬೆಳ್ಳಿ ಬೆಳಕು ಆಚರಣೆ

ಬೆಂಗಳೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತವು ತನ್ನ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಬೃಹತ್ “ಬೆಳ್ಳಿ ಬೆಳಕು” ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮವನ್ನು ಆಯೋಜಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ರಾಜ್ಯಾದ್ಯಂತ 22ಶಾಖೆಗಳನ್ನು ಹೊಂದಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಭಾಗೀಯ ಕಚೇರಿ ಸಹಿತ 4 ಶಾಖೆಗಳನ್ನು ಹೊಂದಿ ಸದಸ್ಯರಿಗೆ ನಿರಂತರ ಸೇವೆ ನೀಡುತ್ತಿದೆ.

ಸಹಕಾರಿಯ ರಜತ ಮಹೋತ್ಸವದ ಪ್ರಯುಕ್ತ ಸಂಸ್ಥೆಯ ಬೆಂಗಳೂರಿನ ಸದಸ್ಯ ಕೇಂದ್ರಿತ ಸಾಂಸ್ಕೃತಿಕ ಮತ್ತು ಸಾಭಾ ಕಾರ್ಯಕ್ರಮ “ಬೆಂಗಳೂರಿನಲ್ಲಿ ಬೆಳ್ಳಿ ಬೆಳಕು” ಅನ್ನು
ದಿನಾಂಕ 12-07-2026ರ ಭಾನುವಾರದಂದು ಆರ್.ಎಸ್.ಬಿ. ಸಭಾಭವನ, ಕಾಮತ್ ಲೇಔಟ್, ಫಾರೆಸ್ಟ್ ಗೇಟ್, ಮಾಗಡಿ ರಸ್ತೆ, ಮಾಚೋಹಳ್ಳಿ, ಬೆಂಗಳೂರಿನಲ್ಲಿ ಆಯೋಜಿಸಿದೆ.

ಸಹಕಾರಿ ಸಂಘದ ಪ್ರಧಾನ ಕಚೇರಿ ಪುತ್ತೂರಿನ ದರ್ಬೆಯಲ್ಲಿ ಇದ್ದು, ಆಡಳಿತ ಕಚೇರಿ ಎಂ.ಎಸ್. ರಸ್ತೆ, ಪುತ್ತೂರಿನಲ್ಲಿದೆ. ಸಂಘವು 2001ರಲ್ಲಿ ಸ್ಥಾಪನೆಯಾಗಿ ಈ ವರ್ಷ 25 ವರ್ಷಗಳನ್ನು ಪೂರೈಸುತ್ತಿದೆ‌.

ಸಾಂಸ್ಕೃತಿಕ ಕಾರ್ಯಕ್ರಮವು ಪೂರ್ವಾಹ್ನ 10.00 ರಿಂದ 11.15ರವರೆಗೆ ಸ್ಥಳಿಯ ಕಲಾವಿದರಿಂದ ನಡೆಯಲಿವೆ. ಸಭಾ ಕಾರ್ಯಕ್ರಮವು ಪೂರ್ವಾಹ್ನ 11.15 ರಿಂದ 1.00ರವರೆಗೆ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಎಸ್.ಆರ್. ಸತೀಶ್ಚಂದ್ರ ವಹಿಸಲಿದ್ದಾರೆ.

ಇದನ್ನೂ ಓದಿ: ಪುತ್ತೂರಿನ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 22ನೇ ಶಾಖೆ ಜುಲೈ 15ಕ್ಕೆ ಉಳ್ಳಾಲದಲ್ಲಿ ಶುಭಾರಂಭ

ಕಾರ್ಯಕ್ರಮವನ್ನು ಮಾಜಿ ಸಚಿವರಾದ ಎಸ್. ಸುರೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ

–  ಜಿ. ನಂಜನಗೌಡ – ಅಧ್ಯಕ್ಷರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು
ನಾಗೇಂದ್ರ ಕಾಮತ್ ಡಿ. ಟ್ರಸ್ಟಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಮಾಚೋಹಳ್ಳಿ, ಬೆಂಗಳೂರು, ನಿರ್ದೇಶಕರು ಶ್ರೀ ದುರ್ಗಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಉಡುಪಿ
ರಾಮಕೃಷ್ಣ ನಾಯಕ್ – ವಿಸ್ರಾಂತ ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ಮಾಜಿ ನಿರ್ದೇಶಕರು, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪುತ್ತೂರು
ಕೇಶವ ಎಲ್. ಪಾಟ್ಕರ್ – ಅಧ್ಯಕ್ಷರು, ರಾಜಾಪುರ ಸಾರಸ್ವತ ಸಮಾಜ(ರಿ.)ಬೆಂಗಳೂರು
ಶಂಕರ ನಾಯಕ್ ಬಿ. -ವಿಶ್ವಸ್ಥರು, ಜನಸೇವಾ ವಿಶ್ವಸ್ಥ ಮಂಡಲಿ, ಧರ್ಮದರ್ಶಿಗಳು, ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಬೆಂಗಳೂರು
ಚಂದ್ರಶೇಖರ್ ಎನ್. – ನ್ಯಾಯವಾದಿಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಕೊಡಿಗೇಹಳ್ಳಿ, ಬೆಂಗಳೂರು
ಡಾ|ಎಸ್. ವಿದ್ಯಾಧರ್ – ಖ್ಯಾತ ವೈದ್ಯರು, ಮಣಿಪಾಲ್ ಆಸ್ಪತ್ರೆ, ಬೆಂಗಳೂರು ಇವರು ಭಾಗವಹಿಸಲಿದ್ದಾರೆ.

ಸನ್ಮಾನ:

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಪ್ರಖ್ಯಾತ ಮೂಳೆ ತಜ್ಞರಾದ ಡಾ. ರವಿರಾಜ್ ಎ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ‌.

ಸಾಂಸ್ಕೃತಿಕ ಕಾರ್ಯಕ್ರಮಗಳು

ಅಪರಾಹ್ನ 2.00 ರಿಂದ 4.00ರವರೆಗೆ ಪ್ರಖ್ಯಾತ ಹಾಸ್ಯ ಕಲಾವಿದ ಪ್ರೊ. ಕೃಷ್ಣೇಗೌಡ ಮತ್ತು ಅವರ ತಂಡದಿಂದ “ನಗೆ ಹಬ್ಬ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿಶೇಷ ಆಹ್ವಾನಿತರಾಗಿ ಈ ಕಾರ್ಯಕ್ರಮದಲ್ಲಿ ಕಲಾವಿದರಾದ ವಿಲಾಸ್ ನಾಯಕ್, ಸುಕೃತಾ ವಾಗ್ಲೆ, ಸಹನಾ ಸುಳ್ಯ, ದಿವ್ಯಶ್ರೀ ನಾಯಕ್, ಪ್ರಿಯಾಂಕ ಕಾಮತ್, ದೀಪಕ್ ಹೆಚ್ ಮತ್ತು ರಾಘವೇಂದ್ರ ಭಟ್ ಭಾಗವಹಿಸಲಿದ್ದಾರೆ.

ಶ್ರೀ ಸರಸ್ವತಿ ಸಹಕಾರಿ ಸಂಘದ 25 ವರ್ಷಗಳ ಸಾಧನೆಯನ್ನು ಸ್ಮರಿಸುವ ಈ ವಿಶೇಷ ಕಾರ್ಯಕ್ರಮಕ್ಕೆ ಸರ್ವ ಸದಸ್ಯರು ಮತ್ತು ಸಾರ್ವಜನಿಕರಿಗೆ ಹಾರ್ದಿಕ ಸ್ವಾಗತವನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *