NEET UG 2026: ಕಲ್ಲಡ್ಕ ಶ್ರೀರಾಮ ಪ.ಪೂ. ವಿದ್ಯಾಲಯದ ವಿದ್ಯಾರ್ಥಿನಿ ವಾಸವಿ ಕೆ.ಸಿ. ಅದ್ವಿತೀಯ ಸಾಧನೆ

ಬಂಟ್ವಾಳ: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET UG) 2026ರ ಫಲಿತಾಂಶದಲ್ಲಿ ಶ್ರೀರಾಮ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ವಾಸವಿ ಕೆ.ಸಿ. ಅತ್ಯುತ್ತಮ ಸಾಧನೆ ಮಾಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.

ಕಲ್ಲಡ್ಕದ ದಾಸಕೋಡಿಯ ಚಂದ್ರಶೇಖರ ಮತ್ತು ಸೌಮ್ಯ ದಂಪತಿಯ ಪುತ್ರಿಯಾಗಿರುವ ವಾಸವಿ, ಪರೀಕ್ಷೆಯಲ್ಲಿ ಒಟ್ಟು 720 ಅಂಕಗಳಲ್ಲಿ 630 ಅಂಕಗಳನ್ನು ಪಡೆದು, ದೇಶ ಮಟ್ಟದಲ್ಲಿ 3494ನೇ ಆಲ್ ಇಂಡಿಯಾ ರ್ಯಾಂಕ್ ಗಳಿಸಿದ್ದಾರೆ.

ಇದನ್ನೂ ಓದಿ: ಶ್ರೀರಾಮ ಪದವಿ ಪೂರ್ವ ವಿದ್ಯಾಲಯ: ಚದುರಂಗದಲ್ಲಿ ಜಾಗತಿಕ ಮಟ್ಟದ ಸಾಧನೆ, ಎನ್‌ಸಿಸಿ ರ‍್ಯಾಂಕ್ ವಿತರಣೆ ಹಾಗೂ ಸಹಸ್ರ ವೃಕ್ಷರೋಹಣ ಸಂಭ್ರಮ

ವಿಷಯವಾರುವಾಗಿ ಅವರು ಭೌತಶಾಸ್ತ್ರದಲ್ಲಿ (Physics) 99.917 ಪರ್ಸೆಂಟೈಲ್, ರಸಾಯನಶಾಸ್ತ್ರದಲ್ಲಿ (Chemistry) 98.966 ಪರ್ಸೆಂಟೈಲ್ ಹಾಗೂ ಜೀವಶಾಸ್ತ್ರದಲ್ಲಿ (Biology) 98.792 ಪರ್ಸೆಂಟೈಲ್ ಅಂಕಗಳನ್ನು ದಾಖಲಿಸಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.

ವಾಸವಿ ಅವರ ಈ ಸಾಧನೆಗೆ ಶ್ರೀರಾಮ ಪದವಿಪೂರ್ವ ವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದು, ಮುಂದಿನ ವೈದ್ಯಕೀಯ ಶಿಕ್ಷಣದಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.

ವಿದ್ಯಾರ್ಥಿನಿಯ ಈ ಸಾಧನೆಯು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *