ಮೇಷ ರಾಶಿ (Aries)
ಮೇಷ ರಾಶಿಯವರಿಗೆ ಇಂದು ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಕಂಡು ಮನಸ್ಸಿಗೆ ಸಂತೋಷವಾಗಲಿದೆ. ಸ್ತ್ರೀಯರಿಂದ ಧನಸಹಾಯ ದೊರೆಯುವ ಸಾಧ್ಯತೆ ಇದೆ. ಇಂದು ನಿಮಗೆ ಸಾಕಷ್ಟು ಬಿಡುವಿನ ಸಮಯ ಸಿಗಲಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಿ. ದೈಹಿಕವಾಗಿ ಇಂದು ನಿಯಂತ್ರಣದ ಕೊರತೆ ಕಾಡಬಹುದು. ಸಂಗಾತಿಯ ನಡವಳಿಕೆಗೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಲಿದೆ. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಅಸಮಾಧಾನ ತರಬಹುದು. ನಿಮ್ಮ ರಹಸ್ಯಗಳು ಬಹಿರಂಗವಾಗಬಹುದು ಎಂಬ ಭೀತಿ ಕಾಡಲಿದ್ದು, ಸಮಯದ ನಿರೀಕ್ಷೆಯಲ್ಲ ಇರಿ.
ವೃಷಭ ರಾಶಿ (Taurus)
ವೃಷಭ ರಾಶಿಯವರು ಇಂದು ತೀವ್ರ ಪ್ರಯತ್ನದ ನಂತರ ತಮ್ಮ ಗುರಿಯನ್ನು ತಲುಪಲಿದ್ದಾರೆ. ರಾಜಕೀಯದ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಾಧ್ಯವಾಗಲಿದೆ. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಇರಲಿವೆ. ತಿಳಿವಳಿಕೆಯ ಕೊರತೆಯಿಂದಾಗಿ ವ್ಯವಹಾರದಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆ, ಭಕ್ತಿ ಕಡಿಮೆ ಆದೀತು. ನಿಮ್ಮ ಅವಶ್ಯಕ ವಸ್ತುಗಳು ಕಣ್ಮರೆಯಾಗುವ ಭೀತಿ ಇದೆ. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಾಗಿ ಕಂಡುಬರಲಿದ್ದು, ಮುನ್ನುಗ್ಗಲು ಸ್ಥೈರ್ಯ ಸಾಲದಾಗಬಹುದು.
ಮಿಥುನ ರಾಶಿ (Gemini)
ಧಾರ್ಮಿಕ ಕಾರ್ಯಗಳು ಮತ್ತು ನಿಮ್ಮ ಮಕ್ಕಳು ಇಂದು ನಿಮ್ಮನ್ನು ಸಂತೋಷವಾಗಿಡಲಿದ್ದಾರೆ. ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕಸರತ್ತು ನಡೆಸುವಿರಿ. ಅನಿವಾರ್ಯ ವೆಚ್ಚಗಳು ಎದುರಾದಾಗ ಸ್ನೇಹಿತರ ಆರ್ಥಿಕ ಸಹಾಯ ಪಡೆಯುವಿರಿ. ಯಾವುದೇ ಮಂಗಳ ಕಾರ್ಯವನ್ನು ಸರಿಯಾದ ಸಮಯಕ್ಕೆ ಮಾಡಲು ಅಡ್ಡಿಗಳು ಬರಬಹುದು. ಬದಲಾವಣೆಗಳಿಗಾಗಿ ಕಾತರದಿಂದ ಕಾಯುವಿರಿ. ಕಾನೂನಾತ್ಮಕ ವಿಚಾರಗಳಿಗೆ ಮಾತ್ರ ನಿಮ್ಮ ಬೆಂಬಲ ನೀಡಿ. ಸಂಗಾತಿಯ ಜೊತೆಗಿನ ಒಡನಾಟ ಇಂದು ಹೆಚ್ಚಾಗಲಿದೆ.
ಕರ್ಕಾಟಕ ರಾಶಿ (Cancer)
ದೂರಪ್ರಯಾಣದ ಸಂದರ್ಭದಲ್ಲಿ ಸ್ನೇಹಿತರ ಮನೆಯಲ್ಲಿ ವಾಸ ಮಾಡಬೇಕಾದ ಅನಿವಾರ್ಯತೆ ಬರಬಹುದು. ಒಳ್ಳೆಯ ಹವ್ಯಾಸಗಳನ್ನು ಬಿಡಬೇಡಿ. ಪತ್ನಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಿರಿಯರ ಹಿತನುಡಿಗಳು ನಿಮ್ಮಲ್ಲಿ ಹೊಸ ಸಂವೇದನೆ ಜಾಗೃತಗೊಳಿಸಲಿವೆ. ಆಲಸ್ಯದ ನಡವಳಿಕೆಯಿಂದಾಗಿ ಮನೆಯಲ್ಲಿ ಬೈಗುಳ ಕೇಳಬೇಕಾಗಬಹುದು. ನಿಮ್ಮ ಕೋಪಕ್ಕೆ ಒಂದು ಮಿತಿ ಇರಲಿ. ಇತರರೊಂದಿಗೆ ಹೊಸ ಸಂಬಂಧಗಳನ್ನು ಬೆಳೆಸುವಿರಿ. ಮಕ್ಕಳ ಮೇಲಿನ ಅತಿಯಾದ ಮೋಹವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.
ಸಿಂಹ ರಾಶಿ (Leo)
ಕಚೇರಿಯಲ್ಲಿ ನಿಮ್ಮನ್ನು ಸೂಕ್ತ ವ್ಯಕ್ತಿ ಎಂದು ಜವಾಬ್ದಾರಿಗೆ ಆಯ್ಕೆ ಮಾಡಿದ್ದರೂ ನಿಮ್ಮಲ್ಲಿ ಹಿಂಜರಿಕೆ ಉಂಟಾಗಬಹುದು. ಒಣ ಭೂಮಿಯ ಮಾರಾಟದಿಂದ ಉತ್ತಮ ಲಾಭ ಸಿಗಲಿದೆ. ನಿಮ್ಮ ವೃತ್ತಿ ಬದುಕಿನ ಸಾಧನೆಯನ್ನು ಕುಟುಂಬದವರ ಮುಂದೆ ಹಂಚಿಕೊಳ್ಳುವಿರಿ. ಇಂದು ನಿಮ್ಮ ತಾಯಿ ನಿಮಗೆ ಹೆಚ್ಚಿನ ಮಾನಸಿಕ ಬಲ ತುಂಬಲಿದ್ದಾರೆ. ಸುಳ್ಳು ವ್ಯವಹಾರಗಳು ಹೆಚ್ಚು ಕಾಲ ನಡೆಯುವುದಿಲ್ಲ ಎಂಬುದನ್ನು ನೆನಪಿಡಿ. ನಿಮ್ಮ ಸಮಯ ಬಂದಾಗ ವಿಷಯಗಳನ್ನು ಚರ್ಚಿಸಲು ಅವಕಾಶ ಸಿಗಲಿದ್ದು, ವ್ಯಾಪಾರದಲ್ಲಿ ಅನುಭವಿಗಳ ಸಲಹೆ ಪಡೆಯುವುದು ಉತ್ತಮ.
ಕನ್ಯಾ ರಾಶಿ (Virgo)
ನಿಮ್ಮ ಉತ್ತಮ ಶಿಕ್ಷಣದ ಬಲದಿಂದ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಿರಿ. ನಿಮ್ಮ ಹಾಸ್ಯ ಪ್ರವೃತ್ತಿಯು ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಸಲಿದೆ. ನಿಮ್ಮನ್ನು ನೀವೇ ಹೊಗಳಿಕೊಳ್ಳುವುದು ಇತರರಿಗೆ ವಿಚಿತ್ರ ಎನಿಸಬಹುದು. ತಾಳ್ಮೆಯಿಂದ ಆಗುವ ಕೆಲಸಗಳನ್ನು ತಣ್ಣಗೇ ಮಾಡಿ ಮುಗಿಸಿ. ನಿಮ್ಮವರೇ ನಿಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ತುಡಿಯಬಹುದು. ಸಕಾಲದಲ್ಲಿ ಭೋಜನ ಮಾಡಲು ಕಷ್ಟವಾಗಬಹುದು. ಇತರರನ್ನು ಕುಚೋದ್ಯ ಮಾಡಲು ಹೋಗಿ ಕೆಂಗಣ್ಣಿಗೆ ಗುರಿಯಾಗಬೇಡಿ.
ತುಲಾ ರಾಶಿ (Libra)
ನಿಮ್ಮ ವೈಯಕ್ತಿಕ ಆಸಕ್ತಿಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಿಕೊಳ್ಳಬೇಡಿ. ಸಂಗಾತಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸದ ಮೇಲೆಯೇ ಹೆಚ್ಚಿನ ಗಮನ ಹರಿಸುವುದು ಸೂಕ್ತ. ಇತರರ ಮನಸ್ಸಿಗೆ ನೋವಾಗದಂತೆ ಮಾತನಾಡುವುದನ್ನು ರೂಢಿಸಿಕೊಳ್ಳಿ. ಮಕ್ಕಳಿಂದ ಹೆಮ್ಮೆ ಪಡುವಂತಹ ಶುಭ ಸುದ್ದಿಗಳು ಬರಲಿವೆ. ನಿಮ್ಮ ಸದ್ಭಾವನೆಯನ್ನು ಕೆಲವರು ಆಡಿಕೊಳ್ಳಬಹುದು. ಇಂದು ತಾಯಿಯ ಮೇಲಿನ ಪ್ರೀತಿ ಹೆಚ್ಚಾಗಲಿದ್ದು, ಅಂತಃಕರಣ ಶುದ್ಧವಿದ್ದರೆ ಯಶಸ್ಸು ನಿಮ್ಮದಾಗಲಿದೆ.
ವೃಶ್ಚಿಕ ರಾಶಿ (Scorpio)
ಇಂದು ಅತಿಯಾಗಿ ಭಾವನಾತ್ಮಕವಾಗುವುದು ಮತ್ತು ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಒಳ್ಳೆಯದಲ್ಲ. ಅಸೂಯೆಯ ಗುಣದಿಂದ ನಿಮ್ಮ ಕೆಲಸಗಳು ಹಿಂದುಳಿಯಬಹುದು. ಆರಂಭದ ಶೂರತ್ವ ತೋರಿಸಲು ಹೋಗಿ ಅಪಮಾನ ಎದುರಿಸಬೇಕಾಗಬಹುದು. ಅನಗತ್ಯ ಕೆಲಸಗಳಿಗೆ ಕೈ ಹಾಕಿ ಹಣ ಕಳೆದುಕೊಳ್ಳುವ ಭೀತಿ ಇದೆ. ದುರಭ್ಯಾಸಗಳಿಗೆ ಶರಣಾಗಬೇಡಿ. ಅತಿಯಾದ ನಂಬಿಕೆಯು ನಿಮಗೆ ಮುಳುವಾಗಬಹುದು. ಶಾರೀರಿಕ ಪೀಡೆಗಳಿಂದ ಚಿಂತೆ ಉಂಟಾಗಬಹುದು. ದಾಂಪತ್ಯದಲ್ಲಿದ್ದ ಹಳೆಯ ವಿವಾದಗಳು ಬಗೆಹರಿದು ಹೊಂದಾಣಿಕೆ ಉಂಟಾಗಲಿದೆ.
ಧನು ರಾಶಿ (Sagittarius)
ನಿಮ್ಮ ಪ್ರತಿಭೆಗೆ ಇಂದು ಸೂಕ್ತ ಪರೀಕ್ಷಾ ಕಾಲ ಎದುರಾಗಲಿದೆ. ಇದರಿಂದ ನಿಮ್ಮ ಆತ್ಮಬಲ ವೃದ್ಧಿಯಾಗಲಿದೆ. ಸಣ್ಣ ವಿಚಾರಗಳಿಗೆ ದ್ವೇಷ ಸಾಧಿಸುವುದನ್ನು ಬಿಟ್ಟು ಮರೆತು ಮುನ್ನಡೆದರೆ ಮಾರ್ಗ ಸುಗಮವಾಗಲಿದೆ. ಇಂದಿನ ಸಣ್ಣ ಸೋಲು ಕೂಡ ನಿಮಗೆ ಮುಂದಿನ ಗೆಲುವಿಗೆ ದಾರಿಯಾಗಬಹುದು. ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಲು ಬಯಸುವಿರಿ. ವಿದೇಶಿ ವಿನಿಮಯದಿಂದ ಹಠಾತ್ ಲಾಭದ ಯೋಗವಿದೆ. ಮಕ್ಕಳನ್ನು ನಯವಾದ ಮಾತುಗಳಿಂದ ಸರಿದಾರಿಗೆ ತರಬೇಕಾಗಬಹುದು.
ಮಕರ ರಾಶಿ (Capricorn)
ಜೀವನದ ಎಲ್ಲಾ ಪರೀಕ್ಷೆಗಳಲ್ಲೂ ಗೆದ್ದು ಬರಬೇಕೆಂಬ ನಿಮ್ಮ ನಿಶ್ಚಲ ನಿರ್ಧಾರ ಇಂದು ಕೈ ಹಿಡಿಯಲಿದೆ. ಹಣಕಾಸಿನ ತೊಂದರೆ ಎದುರಾದರೂ ಅದನ್ನು ನಿಭಾಯಿಸುವ ಚಾಣಕ್ಷತನ ನಿಮ್ಮಲ್ಲಿದೆ. ತಂದೆಯ ಮಾತನ್ನು ಶ್ರದ್ಧೆಯಿಂದ ಪಾಲಿಸುವಿರಿ. ನಿಮ್ಮ ಪ್ರಗತಿಯು ಕೆಲವರ ಸಂದೇಹಕ್ಕೆ ಕಾರಣವಾಗಬಹುದು. ನಿರುದ್ಯೋಗದ ಕೊರಗು ನಿಮ್ಮನ್ನು ಕಾಡಬಹುದು. ಅನವಶ್ಯಕ ಸಂಪರ್ಕಗಳನ್ನು ಕಡಿದುಕೊಳ್ಳಲು ಇಚ್ಛಿಸುವಿರಿ. ಕಾರ್ಯಸ್ಥಳವನ್ನು ಒತ್ತಡದಿಂದ ಮುಕ್ತವಾಗಿಟ್ಟುಕೊಳ್ಳಿ.
ಕುಂಭ ರಾಶಿ (Aquarius)
ಕುಟುಂಬದ ಒತ್ತಡಗಳನ್ನು ಯಾವುದೇ ಕಾರಣಕ್ಕೂ ಕಚೇರಿಗೆ ಕೊಂಡೊಯ್ಯಬೇಡಿ. ಬಹುಮುಖ್ಯ ಕೆಲಸಕ್ಕಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡಿಕೊಳ್ಳುವಿರಿ. ಮನೆಯಲ್ಲೇ ಇದ್ದು ಎಲ್ಲರಿಂದ ನಿಂದನೆಗೆ ಒಳಗಾಗುವ ಪರಿಸ್ಥಿತಿ ಬರಬಹುದು. ಇಂದು ಮಾಡಬೇಕಾದ ಕೆಲಸಗಳನ್ನು ತಕ್ಷಣವೇ ಮಾಡಿ ಮುಗಿಸಿ. ದೈವಬಲವನ್ನು ನಂಬಿ ಕಾರ್ಯಪ್ರವೃತ್ತರಾದರೆ ಯಶಸ್ಸು ಸಿಗಲಿದೆ. ಹೊಸ ವಿಷಯಗಳನ್ನು ಕಲಿಯಲು ನಿರ್ಧರಿಸುವಿರಿ. ಸ್ವತಂತ್ರ ನಿರ್ಧಾರಗಳು ಕೆಲವೊಮ್ಮೆ ಭಯ ಹುಟ್ಟಿಸಬಹುದು. ದುಷ್ಕೃತ್ಯಗಳಿಗೆ ಪ್ರೇರಣೆ ಸಿಗುವ ಸಾಧ್ಯತೆ ಇದ್ದು ಎಚ್ಚರವಿರಲಿ.
ಮೀನ ರಾಶಿ (Pisces)
ನಿಮ್ಮ ಜೀವನದಲ್ಲಿ ಉತ್ತಮ ನಡತೆಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿನ ಶಿಸ್ತಿನ ವಾತಾವರಣವು ಸಂತೋಷವನ್ನು ತರಲಿದೆ. ನಿಮ್ಮ ದುರಭ್ಯಾಸಗಳು ನಿಮ್ಮ ಕುಟುಂಬದವರಿಗೆ ಅಪಮಾನ ತರಬಹುದು. ಆಯಾಸವಾಗಿದ್ದರೆ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ. ಅತ್ಯಾಪ್ತರ ಕೆಲವು ವರ್ತನೆಗಳು ನಿಮಗೆ ಮಾನಸಿಕ ಹಿಂಸೆ ನೀಡಬಹುದು. ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತಿ ಕಡಿಮೆ ಇರಲಿದೆ. ಕರ್ತವ್ಯದ ವಿಚಾರದಲ್ಲಿ ಆಲಸ್ಯ ಅಥವಾ ಬೇಜವಾಬ್ದಾರಿತನ ಒಳ್ಳೆಯದಲ್ಲ. ಬಂಧುಗಳಿಂದ ಶೀಘ್ರವಾಗಿ ಮರುಪಾವತಿಸುವ ಭರವಸೆಯೊಂದಿಗೆ ಹಣವನ್ನು ಪಡೆಯುವಿರಿ.

