‘ಟಾಕ್ಸಿಕ್’ ತಂಡದಿಂದ ಮತ್ತೊಂದು ರೊಮ್ಯಾಂಟಿಕ್ ಧಮಾಕಾ: ಇಂದು ಯಶ್-ತಾರಾ ಸುತಾರಿಯಾ ‘ಮನಮೋಹಕ’ ಸಾಂಗ್ ರಿಲೀಸ್

ಬೆಂಗಳೂರು: ರೋಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ‘ಟಾಕ್ಸಿಕ್’ (Toxic) ಸಿನಿಮಾದ ಎರಡನೇ ಸಾಂಗ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿ ಕೋಟ್ಯಂತರ ವೀಕ್ಷಣೆಗಳನ್ನು ಪಡೆದು ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ್ದ ‘ತಬಾಹಿ..’ ಬೋಲ್ಡ್ ಹಾಡಿನ ಯಶಸ್ಸಿನ ಬೆನ್ನಲ್ಲೇ, ಇದೀಗ ‘ಟಾಕ್ಸಿಕ್’ ತಂಡವು ‘ಮನಮೋಹಕ..’ ಎಂಬ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲು ಸಂಪೂರ್ಣವಾಗಿ ಸಜ್ಜಾಗಿದೆ.

ಇಂದು (ಜುಲೈ 21) ಬೆಳಿಗ್ಗೆ 11.33ಕ್ಕೆ ‘ಮನಮೋಹಕ..’ ಸಾಂಗ್ ಅಧಿಕೃತವಾಗಿ ಯೂಟ್ಯೂಬ್ ಹಾಗೂ ವಿವಿಧ ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲೀಸ್ ಆಗಲಿದೆ. ಈ ಹಾಡು ಕೂಡ ಸಖತ್ ರೊಮ್ಯಾಂಟಿಕ್ ಆಗಿ ಮೂಡಿಬಂದಿದ್ದು, ತನ್ನ ಕಲರ್‌ಫುಲ್ ವೀಡಿಯೋ ಮೂಲಕ ಪ್ರೇಕ್ಷಕರ ಹಾಗೂ ಅಭಿಮಾನಿಗಳ ಗಮನ ಸೆಳೆಯಲು ಚಿತ್ರತಂಡ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.

‘ಟಾಕ್ಸಿಕ್’ ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಸೇರಿದಂತೆ ಹಲವು ದೇವತೆಯಂತಹ ನಾಯಕಿಯರ ದಂಡೇ ಇದೆ. ಯಶ್ ಅವರು ಯಾರ ಜೊತೆ ಆಕ್ಷನ್ ಫೈಟ್ ಮಾಡಲಿದ್ದಾರೆ, ಯಾರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಕುತೂಹಲ ಸದ್ಯಕ್ಕೆ ನಿಗೂಢವಾಗಿದೆ. ಆದರೆ, ಮೊದಲ ಹಾಡಾದ ‘ತಬಾಹಿ’ಯಲ್ಲಿ ಕಿಯಾರಾ ಅಡ್ವಾಣಿ ಜೊತೆ ಬೋಲ್ಡ್ ಆಗಿ ಕಂಗೊಳಿಸಿದ್ದ ಯಶ್, ಈ ಬಾರಿಯ ‘ಮನಮೋಹಕ..’ ಹಾಡಿನಲ್ಲಿ ಗ್ಲಾಮರಸ್ ನಟಿ ತಾರಾ ಸುತಾರಿಯಾ (Tara Sutaria) ಜೊತೆ ಪ್ರಣಯಗೀತೆಗೆ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: 5 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಸ್ಟಾರ್ ಜೋಡಿ: ಆದರೆ ಮಗಳಿಗಾಗಿ ಜೊತೆಯಾಗಿರಲು ನಿರ್ಧಾರ

ಚಿತ್ರದ ಮೊದಲ ಹಾಡು ‘ತಬಾಹಿ’ಗೆ ಸ್ಯಾಂಡಲ್‌ವುಡ್‌ನ ಜನಪ್ರಿಯ ಸಾಹಿತಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು “ಟಾಕ್ಸಿಕ್ ಸಿನಿಮಾದ ಇನ್ನು ಎರಡು ಹಾಡುಗಳಿಗೆ ನಾನು ಸಾಹಿತ್ಯ ಬರೆದಿದ್ದೇನೆ” ಎಂದು ಬಹಿರಂಗಪಡಿಸಿದ್ದರು. ಹೀಗಾಗಿ ಇಂದು ಬಿಡುಗಡೆಯಾಗಲಿರುವ ‘ಮನಮೋಹಕ..’ ಹಾಡಿಗೂ ಯೋಗರಾಜ್ ಭಟ್ ಅವರೇ ಸಾಹಿತ್ಯ ಬರೆದಿರಬಹುದು ಎಂದು ಪ್ರೇಕ್ಷಕರು ಊಹಿಸುತ್ತಿದ್ದಾರೆ. ಸಾಂಗ್ ರಿಲೀಸ್ ಆದ ತಕ್ಷಣವೇ ಈ ಕುರಿತು ಸಂಪೂರ್ಣ ಮಾಹಿತಿ ಹೊರಬೀಳಲಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ