ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಯಿಂದ (Traffic Jam) ತಪ್ಪಿಸಿಕೊಳ್ಳಲು ಪಾದಾಚಾರಿ ಮಾರ್ಗಗಳ (Footpath) ಮೇಲೆಯೇ ಬೈಕ್ ಹಾಗೂ ಇತರ ವಾಹನಗಳನ್ನು ಚಲಾಯಿಸುವ ಸವಾರರಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ.
ಫುಟ್ಪಾತ್ನಲ್ಲಿ ವಾಹನ ಚಲಾಯಿಸುವ ಉಲ್ಲಂಘಟನಾಕಾರರಿಗೆ ಪ್ರಸ್ತುತ ವಿಧಿಸಲಾಗುತ್ತಿರುವ ₹500 ದಂಡದ ಮೊತ್ತವನ್ನು ಬರೋಬ್ಬರಿ ₹5,000ಕ್ಕೆ ಹೆಚ್ಚಿಸುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ಸಾರಿಗೆ ಸಚಿವರಿಗೆ ಪತ್ರ ಬರೆದು ಕಟ್ಟುನಿಟ್ಟಿನ ನಿಯಮ ಜಾರಿಗೆ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಫುಟ್ಪಾತ್ ಮೇಲೆಯೇ ವಾಹನಗಳು ಮುನ್ನುಗ್ಗುವುದರಿಂದ ನಡೆದಾಡುವ ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಪ್ರಾಣಭಯದಿಂದ ಮುಖ್ಯ ರಸ್ತೆಗೆ ಇಳಿದು ನಡೆಯಬೇಕಾದ ದುಸ್ಥಿತಿ ನಿರ್ಮಾಣವಾಗಿತ್ತು.
ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡದ ಮೊತ್ತ ಅಧಿಕವಾದಾಗ ಮಾತ್ರ ಇಂತಹ ದೌರ್ಜನ್ಯಗಳನ್ನು ತಡೆಯಲು ಸಾಧ್ಯ ಎಂಬ ಉದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸಾರ್ವಜನಿಕರು ಹಾಗೂ ಪಾದಚಾರಿಗಳ ಹಕ್ಕುಗಳನ್ನು ಮರುಸ್ಥಾಪಿಸಲು ಸರ್ಕಾರ ಕೈಗೊಂಡಿರುವ ಈ ಹೆಜ್ಜೆಗೆ ನಗರದ ಜನತೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಕೆಪಿಸಿಸಿ ಕಚೇರಿ ಬಳಿ ಉದ್ವಿಗ್ನತೆ: ಬಿಜೆಪಿ ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆದ ಕೈ ಕಾರ್ಯಕರ್ತರು
ಕೇವಲ ದಂಡದ ಪ್ರಸ್ತಾವನೆಗೆ ಸೀಮಿತವಾಗದೆ, ಸಂಚಾರ ಪೊಲೀಸರು (Bengaluru Traffic Police) ಮತ್ತು ಬಿಬಿಎಂಪಿ ಈ ನಿಯಮವನ್ನು ರಸ್ತೆಮಟ್ಟದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರೆ, ಬೆಂಗಳೂರು ನಗರವು ಕಿಲೋಮೀಟರ್ಗಟ್ಟಲೆ ಸಾರ್ವಜನಿಕರು ಭಯವಿಲ್ಲದೆ ಸುರಕ್ಷಿತವಾಗಿ ಹೆಜ್ಜೆ ಹಾಕಬಹುದಾದ ದೇಶದ ಅತ್ಯುತ್ತಮ ನಗರವಾಗಲಿದೆ ಎಂಬ ಭರವಸೆ ಮೂಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

