ದೆಹಲಿ: ಮಧ್ಯರಾತ್ರಿ ಶೇರ್ ಮಾಡಿದ ವೀಡಿಯೋಗೆ ದೇಶದ ಯುವಜನತೆಯಿಂದ ಹರಿದುಬಂದ ಅಪಾರ ಬೆಂಬಲ ಹಾಗೂ ಧನಾತ್ಮಕ ಸಲಹೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನದಾಳದಿಂದ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮತ್ತೊಂದು ಸಂದೇಶ ಹಂಚಿಕೊಂಡ ಪ್ರಧಾನಿ, “ಥ್ಯಾಂಕ್ ಯು ಫ್ರೆಂಡ್ಸ್” (Thank You Friends) ಎಂದು ಕರೆಯುವ ಮೂಲಕ ಯುವಕರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿರುವ ಈ ವೀಡಿಯೋದಲ್ಲಿ, ಯುವಜನತೆ ನೀಡಿದ ಸಕಾರಾತ್ಮಕ ಸಲಹೆಗಳು ತಮ್ಮ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಮಾಡಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಹಂಚಿಕೊಂಡ ಈ ಸೆಲ್ಫಿ ಮಾದರಿಯ ವೀಡಿಯೋ ಸಮಾಜ ಜಾಲತಾಣಗಳಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.
ವೀಡಿಯೋ ಪೋಸ್ಟ್ ಆದ ಕೇವಲ ೮ ನಿಮಿಷಗಳಲ್ಲೇ ೨೫ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಅಪ್ಲೋಡ್ ಆದ ಕೇವಲ 20 ನಿಮಿಷಗಳಲ್ಲಿ 10 ಲಕ್ಷಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿದೆ. “ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದ”: ಯುವಕರಿಗೆ ಪ್ರಧಾನಿ ಸಂದೇಶ ವೀಡಿಯೋ ಮೂಲಕ ನೇರವಾಗಿ ದೇಶದ ಯುವ ಸಮುದಾಯವನ್ನು ತಲುಪಿದ ಪ್ರಧಾನಿ ಮೋದಿ.
ಇಲ್ಲಿದೆ ನೋಡಿ ಸ್ಟೋರಿ:
View this post on Instagram
“ನಿನ್ನೆ ನಿಮ್ಮನ್ನು ಸಂಪರ್ಕಿಸುವ ಹಾಗೂ ನಿಮ್ಮೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತ್ತು. ನನ್ನ ವೀಡಿಯೋಗೆ ನೀವು ನೀಡಿದ ಸ್ಪಂದನೆ ಹಾಗೂ ಧನಾತ್ಮಕ ಸಲಹೆಗಳಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ನಮ್ಮ ನಡುವಿನ ಸಂಬಂಧ ಹಾಗೂ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಪ್ರತಿಯೊಬ್ಬರಿಗೂ ನನ್ನ ಮನದಾಳದ ಧನ್ಯವಾದಗಳು.” ಎಂದು ಹೇಳಿದರು.
ಇದನ್ನೂ ಓದಿ: ನಾನು 56 ವರ್ಷದ ಯುವಕನ ಬಗ್ಗೆ ಮಾತನಾಡುತ್ತಿಲ್ಲ: ರಾಹುಲ್ ಗಾಂಧಿಯ ಕಿವಿ ಹಿಂಡಿದ ಮೋದಿ
ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕಾಯ್ದೆ ರೂಪಿಸುವ ಹಾಗೂ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಪ್ರಧಾನಿ ತಿಳಿಸಿದ್ದ ವೀಡಿಯೋಗೆ ದೇಶಾದ್ಯಂತ ಲಕ್ಷಾಂತರ ಯುವಕರು ಜಾಲತಾಣಗಳಲ್ಲಿ ತಮ್ಮ ಅನಿಸಿಕೆ ಹಾಗೂ ಸಲಹೆಗಳನ್ನು ಹಂಚಿಕೊಂಡಿದ್ದರು. ಈ ಸಕಾರಾತ್ಮಕ ಪ್ರಕ್ರಿಯೆಗೆ ಪ್ರಧಾನಿ ಸ್ವತಃ ಧನ್ಯವಾದ ಅರ್ಪಿಸಿರುವುದು ಯುವಜನತೆಯಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

