ನೀಟ್ ಪೇಪರ್ ಲೀಕ್ ಕುರಿತು ಪ್ರಧಾನಿ ಮೋದಿ ‘ಜೆನ್‌ ಜಿ’ ಶೈಲಿಯ ಸೆಲ್ಫಿ ವೀಡಿಯೋ: ೧೦ ಲಕ್ಷ ಹೊಸ ಫಾಲೋವರ್ಸ್, ಐಶೋಸ್ಪೀಡ್ ಜಾಗತಿಕ ದಾಖಲೆಬ್ರೇಕ್

ನವದೆಹಲಿ: ನೀಟ್-ಯುಜಿ 2026 (NEET-UG 2026) ಪರೀಕ್ಷಾ ಅಕ್ರಮ ಹಾಗೂ ಪೇಪರ್ ಲೀಕ್ ವಿಚಾರವಾಗಿ ವಿದ್ಯಾರ್ಥಿಗಳನ್ನು ತಲುಪಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಹಂಚಿಕೊಂಡ ‘ಜೆನ್‌ ಜಿ’ (Gen-Z) ಶೈಲಿಯ ಸೆಲ್ಫಿ ವೀಡಿಯೋ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ವೀಡಿಯೋ ಪೋಸ್ಟ್ ಆದ ಬಳಿಕ ಪ್ರಧಾನಿ ಮೋದಿಯವರ ಇನ್‌ಸ್ಟಾಗ್ರಾಮ್ ಖಾತೆಗೆ ಬರೋಬ್ಬರಿ 10 ಲಕ್ಷ (1 Million) ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ.

ಪ್ರಸ್ತುತ 102 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಗಡಿ ದಾಟಿದ ವಿಶ್ವದ ಏಕೈಕ ಮತ್ತು ಮೊದಲ ನಾಯಕ ಎಂಬ ಐತಿಹಾಸಿಕ ದಾಖಲೆಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.

ಈ ಹಿಂದೆ  ಫೀಫಾ ವಿಶ್ವಕಪ್ (FIFA World Cup) ಫೈನಲ್ ವೇಳೆ ಪ್ರಸಿದ್ಧ ಯೂಟ್ಯೂಬರ್ ‘ಐಶೋಸ್ಪೀಡ್’ (IShowSpeed) ಬಿಟಿಎಸ್ (BTS) ಬ್ಯಾಂಡ್ ಸದಸ್ಯರನ್ನು ಭೇಟಿಯಾದ ವೀಡಿಯೋ ಪಡೆದಿದ್ದ 300 ಮಿಲಿಯನ್ ವೀಕ್ಷಣೆಯ ದಾಖಲೆಯನ್ನು ಮೋದಿ ವೀಡಿಯೋ ಮುರಿದುಹಾಕಿದೆ.

ಇದನ್ನೂ ಓದಿ: “ದೇಶದ ಒಗ್ಗಟ್ಟು ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಈ ತೀರ್ಮಾನ”: ಧರ್ಮೇಂದ್ರ ಪ್ರಧಾನ್ ಪ್ರಧಾನಿಗೆ ಬರೆದ ಪತ್ರದಲ್ಲಿ ಏನಿತ್ತು?

ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ:

“ಪೇಪರ್ ಲೀಕ್ ಸಾಮಾನ್ಯ ವಿಷಯವಲ್ಲ, ಇದು ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳಿಗೆ ತೀವ್ರ ನೋವು ತಂದಿದೆ ಎಂಬುದು ನನಗೂ ತಿಳಿದಿದೆ. ಕಳೆದ ಎರಡೂವರೆ ತಿಂಗಳುಗಳಿಂದ ಈ ವಿಚಾರವಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಪರಾಧಿಗಳನ್ನು ಜೈಲಿಗಟ್ಟಲಾಗಿದೆ.” ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *