ಕೋಲ್ಕತ್ತಾ: NEET ಪರೀಕ್ಷೆ ಅಕ್ರಮ ಖಂಡಿಸಿ ಕೋಲ್ಕತ್ತಾದ ಧರ್ಮತಲಾ (ಎಸ್‌ಪ್ಲನೇಡ್) ಸಮೀಪ ಜುಲೈ 24ರಂದು ನಡೆದ ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿ ಹಿಂಸಾಚಾರ ನಡೆಸಿದ್ದ ಆರೋಪಿಗಳನ್ನು ಪೊಲೀಸರು ಬರಿಗಾಲಿನಲ್ಲಿ ನಡೆಸಿ ‘ಅಪರಾಧ ಸ್ಥಳ ಮರುಸೃಷ್ಟಿ’ (Crime Scene Reconstruction) ಪ್ರಕ್ರಿಯೆ ನಡೆಸಿದ್ದಾರೆ.
ಕೋಲ್ಕತ್ತಾದ ಡೋರಿನಾ ಕ್ರಾಸಿಂಗ್‌ನಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ, ಬಂದಿತ ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಘಟನಾ ಸ್ಥಳಕ್ಕೆ ಕರೆತಂದು ಹಿಂಸಾಚಾರ ನಡೆಸಿದ ಹಂತಗಳನ್ನು ಮರುಸೃಷ್ಟಿಸಲಾಯಿತು.
ಬರಿಗಾಲಿನಲ್ಲಿ ಮರುಸೃಷ್ಟಿ: ಘಟನಾ ಸ್ಥಳಕ್ಕೆ ಐವರು ಪ್ರಮುಖ ಆರೋಪಿಗಳನ್ನು ಬರಿಗಾಲಿನಲ್ಲಿ ನಡೆದುಕೊಂಡು ಕರೆತರಲಾಯಿತು. ಈ ವೇಳೆ ಕೋಲ್ಕತ್ತಾ ಪೊಲೀಸರು, “ಇದು ಶಿಕ್ಷೆಯಲ್ಲ, ತನಿಖೆಯ ಭಾಗವಾಗಿ ನಡೆಸಲಾದ ಅಪರಾಧ ಸ್ಥಳ ಮರುಸೃಷ್ಟಿ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರದ ಬೆನ್ನಲ್ಲೇ ‘ವಿಜಯೋತ್ಸವ’: CJP ನಾಯಕರ ಹೋಟಲ್ ಪಾರ್ಟಿ, ಫಂಡಿಂಗ್ ಬಗ್ಗೆ ತೀವ್ರ ಪ್ರಶ್ನೆ
ವಿಡಿಯೋ ಇಲ್ಲಿದೆ ನೋಡಿ:
BREAKING NEWS 🚨 Rioters who attacked Journalists & police during NEET protest on July 24, paraded barefoot by Police in the same area of Kolkata.
KOLKATA POLICE – “It is the reconstruction of Crime Scene” pic.twitter.com/etDnFqJHwQ
— News Algebra (@NewsAlgebraIND) July 27, 2026
ಜುಲೈ 24 ಶುಕ್ರವಾರದಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಮಹಮ್ಮದ್ ಆಫ್ರೋಜ್, ವಕಾರ್ ಅಜಮ್ ಹಾಗೂ ಜಾವೇದ್ ಅಖ್ತರ್ ಸೇರಿದಂತೆ ಇತರರನ್ನು ತನಿಖೆಗೆ ಒಳಪಡಿಸಲಾಗಿದೆ. ಬಂಧಿತರಲ್ಲಿ ಯಾರೂ ನೈಜ ವಿದ್ಯಾರ್ಥಿಗಳಲ್ಲ; ಅವರು ಪ್ರತಿಭಟನೆಯ ಹೆಸರಿನಲ್ಲಿ ಬಂದ ಗೂಂಡಾಗಳು ಎಂದು ಸರ್ಕಾರ ಹಾಗೂ ಪೊಲೀಸರು ತಿಳಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

