ದೆಹಲಿ: ನವದೆಹಲಿಯಲ್ಲಿ ಕೆಲ ದಿನಗಳ ಕಾಲ ನಡೆದ ಉಗ್ರ ಪ್ರತಿಭಟನೆ, ಲಾಠಿಚಾರ್ಜ್ ಹಾಗೂ ಹಿಂಸಾತ್ಮಕ ಘಟನೆಗಳ ಬೆನ್ನಲ್ಲೇ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಾಯಕರು ಖಾಸಗಿ ಹೋಟೆಲ್‌ನಲ್ಲಿ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡುತ್ತಾ ವಿಜಯೋತ್ಸವ ಆಚರಿಸಿರುವುದು ತೀವ್ರ ಚರ್ಚೆಗೆ ಹಾಗೂ ಟೀಕೆಗೆ ಗ್ರಾಸವಾಗಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಪೊಲೀಸರು ಗಾಯಗೊಂಡಿದ್ದರು. ಈ ರೀತಿಯ ಆತಂಕದ ವಾತಾವರಣದ ನಡುವೆಯೂ ಯುವ ಹೋರಾಟಗಾರರು ಹೋಟೆಲ್‌ನಲ್ಲಿ ಸಂಭ್ರಮಾಚರಣೆ ನಡೆಸಿರುವ ವಿಡಿಯೋಗಳು ಮತ್ತು ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ಇಲ್ಲಿದೆ ನೋಡಿ ವಿಡಿಯೋ:
Seriously?
The CJP leadership throwing a victory party at a hotel! After Delhi witnessed days of violence, these so-called youth activists switched on the music and began dancing.More serious questions:
Who funded the travel, food, accommodation, equipment and logistics… pic.twitter.com/KSl4GIu0gr— Mahesh Jethmalani (@JethmalaniM) July 27, 2026
ದೆಹಲಿಯಲ್ಲಿ ಆಂದೋಲನ ಸೃಷ್ಟಿಸಿದ ಈ ಯುವ ನಾಯಕರ ವಿರುದ್ಧ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ. ಇಷ್ಟೊಂದು ದೊಡ್ಡ ಮಟ್ಟದ ಆಂದೋಲನಕ್ಕೆ ಅಗತ್ಯವಿದ್ದ ಪ್ರಯಾಣ ವೆಚ್ಚ, ಆಹಾರ, ತಂಗಲು ವಸತಿ ವ್ಯವಸ್ಥೆ, ಸ್ಪೀಕರ್ ಮತ್ತು ಮೈಕ್ ಸೇರಿದಂತೆ ಲಾಜಿಸ್ಟಿಕ್ಸ್ ವೆಚ್ಚವನ್ನು ಭರಿಸಿದವರು ಯಾರು? ದೆಹಲಿಯಲ್ಲಿ ದಿನಗಟ್ಟಲೆ ಪರಿಸ್ಥಿತಿ ಕಾಯುವಂತೆ ಮಾಡಿದ ಮತ್ತು ಪ್ರತಿಭಟನಾಕಾರರನ್ನು ಬೀದಿಗಿಳಿಸಿದ ಆಂದೋಲನದ ಹಿಂದಿನ ಹಣಕಾಸಿನ ನೆರವು ಯಾರದ್ದು? ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಕಷ್ಟಪಡುತ್ತಿರುವಾಗ, ಸಿಜಿಪಿ ನಾಯಕರು ಹೋಟೆಲ್‌ನಲ್ಲಿ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಪೇಪರ್ ಲೀಕ್ ಮಾಫಿಯಾಗೆ ಮುಕ್ತಿ: ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ 2026’ ಮಂಡನೆ
ನೀಟ್ ಹಾಗೂ ಸಿಬಿಎಸ್‌ಇ ಪರೀಕ್ಷಾ ಗೊಂದಲ ಖಂಡಿಸಿ ಸಿಜಿಪಿ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ಹಾಗೂ ಸಂಸತ್ ಚಲೋ ಚಳವಳಿ ಆಯೋಜಿಸಲಾಗಿತ್ತು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿ, ಹಲವರು ಗಾಯಗೊಂಡಿದ್ದರು. ಸರ್ಕಾರದೊಂದಿಗೆ ನಡೆದ ಮಾತುಕತೆಗಳ ಬಳಿಕ ಶಿಕ್ಷಣ ಸಚಿವರ ರಾಜೀನಾಮೆ ಪ್ರಕ್ರಿಯೆ ಮತ್ತು ಪ್ರತಿಭಟನೆ ಹಿಂಪಡೆಯುವ ಬೆಳವಣಿಗೆಗಳ ಬೆನ್ನಲ್ಲೇ ಈ ವಿವಾದಾತ್ಮಕ ಪಾರ್ಟಿ ನಡೆದಿದೆ ಎನ್ನಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

