ಬೆಂಗಳೂರು: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ 2026 (CWG 2026) ಕ್ರೀಡಾಕೂಟದ ಮಹಿಳೆಯರ ಪ್ಯಾರಾ ಅಥ್ಲೆಟಿಕ್ಸ್ ಶಾಟ್‌ಪುಟ್ F-57 ವಿಭಾಗದಲ್ಲಿ ಅದ್ಭುತ ಸಾಧನೆ ಮಾಡಿ ಕಂಚಿನ ಪದಕಕ್ಕೆ ಕೊರಳೊಡ್ಡಿರುವ ಕರ್ನಾಟಕದ ಮೈಸೂರು ಮೂಲದ ಹೆಮ್ಮೆಯ ಪುತ್ರಿ ಶಿಲ್ಪಾ ಕೆ. ಶೈಲಾ ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಶಿಲ್ಪಾ ಅವರ ಈ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದ್ದಾರೆ. “ಕಾಮನ್ ವೆಲ್ತ್ ಗೇಮ್ಸ್ ೨೦೨೬ ರ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿಪತಾಕೆ ಹಾರಿಸಿದ ಕರ್ನಾಟಕದ ಹೆಮ್ಮೆಯ ಪುತ್ರಿ ಶಿಲ್ಪಾ ಕೆ. ಶೈಲಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಕನ್ನಡ ನಾಡಿನ ಹೆಮ್ಮೆ ಮಾತ್ರವಲ್ಲ, ದೇಶದ ಸಮಸ್ತ ಯುವಜನತೆಗೆ ಪ್ರೇರಣೆಯಾಗಿದೆ. ನಿಮ್ಮ ಮುಂದಿನ ಕ್ರೀಡಾ ಪಯಣ ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸುತ್ತೇನೆ.”
ಇಲ್ಲಿದೆ ನೋಡಿ ಅಶೋಕ್ ಅವರ ಎಕ್ಸ್ ಪೋಸ್ಟ್:
ಕಾಮನ್ ವೆಲ್ತ್ ನಲ್ಲಿ ಮಿಂಚಿದ ಕನ್ನಡದ ಪ್ರತಿಭೆ.
CWG2026 ರಲ್ಲಿ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿಪತಾಕೆ ಹಾರಿಸಿದ ಕರ್ನಾಟಕದ ಹೆಮ್ಮೆಯ ಪುತ್ರಿ ಶಿಲ್ಪಾ ಕೆ. ಶೈಲಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಸಾಧನೆ ಕನ್ನಡ ನಾಡಿನ ಹೆಮ್ಮೆ ಮಾತ್ರವಲ್ಲ, ದೇಶದ ಯುವಜನತೆಗೆ ಪ್ರೇರಣೆಯಾಗಿದೆ.… pic.twitter.com/N7oZPB42pO
— R. Ashoka (@RAshokaBJP) July 28, 2026
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಕಾಂಚಿಗಾರ ಕೊಪ್ಪಲು ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಶಿಲ್ಪಾ ಅವರು, ಬಾಲ್ಯದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ಶಾರೀರಿಕ ಸವಾಲುಗಳ ನಡುವೆಯೂ ಶಿಕ್ಷಣ ಪೂರೈಸಿ, ಕಷ್ಟಪಟ್ಟು ಅಭ್ಯಾಸ ನಡೆಸಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣದಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ: ರಾಜ್ಯ ಬಿಜೆಪಿ ಅಪಾರ್ಟ್‌ಮೆಂಟ್ ಪ್ರಕೋಷ್ಠಕ್ಕೆ ಪದಾಧಿಕಾರಿಗಳ ನೇಮಕ: ಬಿ.ವೈ. ವಿಜಯೇಂದ್ರ ಆದೇಶ
ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ (7.26) ಮೀಟರ್ ಎಸೆತ) ನೀಡಿ ಅವರು ಪದಕದ ಮುಡಿಗೇರಿಸಿಕೊಂಡಿದ್ದು, ಭಾರತೀಯ ಪ್ಯಾರಾ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಹೆಮ್ಮೆಯ ಅಧ್ಯಾಯ ಬರೆದಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

