ಆಭರಣ ಪ್ರಿಯರಿಗೆ ಸಿಹಿ ಸುದ್ದಿ: 4 ತಿಂಗಳಲ್ಲಿ 3,140 ರೂ. ತಗ್ಗಿದ ಚಿನ್ನದ ಬೆಲೆ

ಬೆಂಗಳೂರು: ಕಳೆದ ನಾಲ್ಕು ತಿಂಗಳುಗಳಿಂದ ಭಾರಿ ಏರಿಳಿತ ಕಾಣುತ್ತಿರುವ ಆಭರಣ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಗ್ರಾಹಕರಿಗೆ ಸಣ್ಣ ಮಟ್ಟದ ಸಮಾಧಾನ ಸಿಕ್ಕಿದೆ. ಜುಲೈ 31ರ ಶುಕ್ರವಾರದಂದು ಚಿನ್ನದ ದರ ಗ್ರಾಂಗೆ 25 ರೂ. ಸಣ್ಣ ಏರಿಕೆ ಕಂಡಿದೆಯಾದರೂ, ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಒಟ್ಟಾರೆಯಾಗಿ 100 ರೂ.ಗೂ ಹೆಚ್ಚು ಕುಸಿತ ಕಂಡಿದೆ.

ವಿಶೇಷವೆಂದರೆ, ಜನವರಿ ಅಂತ್ಯದಲ್ಲಿ ಗ್ರಾಂಗೆ ಬರೋಬ್ಬರಿ ₹16,395 ರಷ್ಟಿದ್ದ ಆಭರಣ ಚಿನ್ನದ ಬೆಲೆ, ಕಳೆದ ನಾಲ್ಕು ತಿಂಗಳಲ್ಲಿ ಬರೊಬ್ಬರಿ 3,140 ರೂ. ತಗ್ಗಿದ್ದು, ಪ್ರಸ್ತುತ ಗ್ರಾಂಗೆ ₹13,255 ರಷ್ಟಕ್ಕೆ ಇಳಿಕೆಯಾಗಿದೆ.

ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ (ಆಭರಣ ಚಿನ್ನ) ದರ ₹1,32,550 ತಲುಪಿದ್ದರೆ, 10 ಗ್ರಾಂ 24 ಕ್ಯಾರಟ್ (ಅಪರಂಜಿ ಚಿನ್ನ) ಬೆಲೆ ₹1,44,600 ರಷ್ಟಿದೆ. ಬೆಳ್ಳಿ ಬೆಲೆ 100 ಗ್ರಾಂಗೆ ₹23,500 (ಗ್ರಾಂಗೆ ₹240) ರಂತೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಉಳ್ಳಾಲದಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 22ನೇ ಶಾಖೆ ಉದ್ಘಾಟನೆ

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜುಲೈ 31ರಂದು ದಾಖಲಾಗಿರುವ 22 ಕ್ಯಾರಟ್ ಚಿನ್ನದ ದರ ಹೀಗಿದೆ.

 

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *