ಕೋಲ್ಕತ್ತಾ: ಬರವಣಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಜಾತ್ಯತೀತತೆಯ ಪರ ತಮ್ಮ ದಿಟ್ಟ ಧ್ವನಿಯ ಮೂಲಕ ಸದಾ ಸುದ್ದಿಯಲ್ಲಿರುವ ಬಾಂಗ್ಲಾದೇಶದ ಗಡಿಪಾರಾದ ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್ (Taslima Nasrin), ಬರೋಬ್ಬರಿ 19 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ಕೋಲ್ಕತ್ತಾಗೆ ಆಗಮಿಸಿದ್ದಾರೆ.
ಆಗಸ್ಟ್ 1ರಂದು ಕೋಲ್ಕತ್ತಾದ ಪ್ರಸಿದ್ಧ ರವೀಂದ್ರ ಸೌಧದಲ್ಲಿ ನಡೆಯಲಿರುವ ಪ್ರಮುಖ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಕಲ್ಕತ್ತಾಗೆ ಆಗಮಿಸಿದ್ದಾರೆ. ಅವರ ಈ ಭೇಟಿಯ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ.
2007 ರಲ್ಲಿ ತಸ್ಲಿಮಾ ನಸ್ರೀನ್ ಅವರ ‘ದ್ವಿಖಂಡಿತ’ ಎಂಬ ಪುಸ್ತಕದ ವಿರುದ್ಧ ಕೋಲ್ಕತ್ತಾದಲ್ಲಿ ಭಾರಿ ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ಗಲಭೆಗಳು ನಡೆದಿದ್ದವು. ಆ ತೀವ್ರ ಸ್ವರೂಪದ ಪ್ರತಿಭಟನೆ ಹಾಗೂ ಸುರಕ್ಷತೆಯ ಕಾರಣಗಳಿಂದಾಗಿ ಅವರು 2007 ರಲ್ಲಿ ಕೋಲ್ಕತ್ತಾ ನಗರವನ್ನು ತೊರೆಯಬೇಕಾಯಿತು.
ಇದನ್ನೂ ಓದಿ:ಕುಟ್ಟಿಪ್ಪುರಂ ಬಳಿ ಖಾಸಗಿ ಬಸ್ ಪಲ್ಟಿ: ಒಬ್ಬ ಸಾವು, 26 ಮಂದಿಗೆ ಗಂಭೀರ ಗಾಯ
ದೀರ್ಘ ಕಾಲದ ಬಳಿಕ ಅವರು ಮತ್ತೆ ತಮಗೆ ಪ್ರಿಯವಾದ ನಗರಕ್ಕೆ ಮರಳಿರುವುದು ಪಶ್ಚಿಮ ಬಂಗಾಳದ ಸಾಹಿತ್ಯ ವಲಯದಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಿ ಹಾಗೂ ವಿವಾದಾತ್ಮಕ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿರುವ ತಸ್ಲಿಮಾ ನಸ್ರೀನ್ ಅವರ ಈ ಭೇಟಿಯು, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಾದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

