Breaking News

ಗೌರಿ-ಗಣೇಶ ಹಬ್ಬದ ಶುಭ ದಿನದಂದು ಮಗನ ಹೆಸರು ಬಹಿರಂಗಪಡಿಸಿದ ‘ಡಾಲಿ’ ಧನಂಜಯ: ಪುತ್ರನಿಗೆ ರಾಜ ಗಾಂಭೀರ್ಯದ ‘ಎರೆಯ’ ನಾಮಕರಣ

ಕನ್ನಡ ಚಿತ್ರರಂಗದ ಜನಪ್ರಿಯ ನಟ, ‘ನಟರಾಕ್ಷಸ’ ಡಾಲಿ ಧನಂಜಯ ಅವರು ಗೌರಿ-ಗಣೇಶ ಹಬ್ಬದ ಪವಿತ್ರ ದಿನದಂದು ತಮ್ಮ ಮುದ್ದು ಮಗನ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಪುತ್ರನಿಗೆ ಇತಿಹಾಸದ ಹಿನ್ನೆಲೆಯುಳ್ಳ ‘ಎರೆಯ’ (Ereya) ಎಂದು ಹೆಸರಿಡುವ ಮೂಲಕ ಅಭಿಮಾನಿಗಳಿಗೆ ಹಾಗೂ ಚಿತ್ರಪ್ರೇಮಿಗಳಿಗೆ ವಿಶೇಷ ಹಬ್ಬದ ಉಡುಗೊರೆ ನೀಡಿದ್ದಾರೆ.

ಮಗನ ನಾಮಕರಣದ ವಿಚಾರವನ್ನು ಧನಂಜಯ ಅವರು ಅತ್ಯಂತ ಸೃಜನಶೀಲ ಹಾಗೂ ಅರ್ಥಪೂರ್ಣ ಶೈಲಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕರ್ನಾಟಕದ ನಕ್ಷೆಯ (Karnataka Map) ವಿನ್ಯಾಸವನ್ನೊಳಗೊಂಡ ಚಿನ್ನದ ಪದಕದ (Dollar) ಮಧ್ಯಭಾಗದಲ್ಲಿ ‘ಎರೆಯ’ ಎಂದು ಕೆತ್ತಿಸಿರುವ ವಿಡಿಯೋ/ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಮಗನ ಹೆಸರನ್ನು ಧನಂಜಯ ದಂಪತಿ ಪ್ರಕಟಿಸಿದ್ದಾರೆ.

ಕರುನಾಡ ಮೇಲಿನ ತಮ್ಮ ಅಪಾರ ಪ್ರೀತಿಯನ್ನು ಬಿಂಬಿಸುವಂತೆ ಕರ್ನಾಟಕ ನಕ್ಷೆಯನ್ನೇ ಬಳಸಿಕೊಂಡು ಹೆಸರನ್ನು ರಿವೀಲ್ ಮಾಡಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ‘ಎರೆಯ’ ಎಂಬುದು ಕೇವಲ ಅಪರೂಪದ ಕನ್ನಡ ಹೆಸರಷ್ಟೇ ಅಲ್ಲದೆ, ಗಂಭೀರವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಕನ್ನಡ ಸಾಹಿತ್ಯ ಹಾಗೂ ನಿಘಂಟಿನ ಪ್ರಕಾರ ‘ಎರೆಯ’ ಎಂದರೆ “ಒಡೆಯ”, “ಅಧಿಪತಿ” ಅಥವಾ “ಸ್ವಾಮಿ” ಎಂಬ ಅರ್ಥ ನೀಡುತ್ತದೆ.

ಇದನ್ನೂ ಓದಿ: ನಟ ‘ದುನಿಯಾ’ ವಿಜಯ್ ಹಾಗೂ ನಾಗರತ್ನ ದಾಂಪತ್ಯ ಅಂತ್ಯ: ವಿಚ್ಛೇದನ ಮಂಜೂರು, 2 ಕೋಟಿ ರೂ. ಜೀವನಾಂಶ ಪಾವತಿಗೆ ಹೈಕೋರ್ಟ್ ಆದೇಶ

ಬಾದಾಮಿ ಚಾಲುಕ್ಯ ವಂಶದ ಅತ್ಯಂತ ಪರಾಕ್ರಮಿ ಸಾಮ್ರಾಟ, ದಕ್ಷಿಣಾಪಥೇಶ್ವರ ಎಂದೇ ಪ್ರಸಿದ್ಧರಾಗಿದ್ದ ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರು ಕೂಡ ‘ಎರೆಯ’ ಅಥವಾ ‘ಎರೆಯಪ್ಪ’ ಎಂದಾಗಿತ್ತು. ತಮ್ಮ ಮೊದಲ ಮಗುವಿಗೆ ಈ ರೀತಿ ರಾಜ ಗಾಂಭೀರ್ಯ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಕನ್ನಡ ತನ ತುಂಬಿದ ಹೆಸರಿಟ್ಟಿರುವುದಕ್ಕೆ ಡಾಲಿ ಧನಂಜಯ-ಧನ್ಯತಾ ದಂಪತಿಗೆ ಚಂದನವನದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಗೈಯುತ್ತಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *