ಮುಂಬೈ: ಮುಂಬೈನ ಪ್ರಸಿದ್ಧ ಜವಳಿ ವ್ಯಾಪಾರಿಯಾಗಿದ್ದ 74 ವರ್ಷದ ಶಿವಚರಣ್ ರಾಮರತನ್ ಗುಪ್ತಾ ಎಂಬ ವೃದ್ಧರು ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಆಶ್ರಮದಲ್ಲಿಯೇ ವಾಸವಿದ್ದ ಅವರ ಪತ್ನಿ ಕೂಡ ಎರಡು ವರ್ಷಗಳ ಹಿಂದೆ ಇದೇ ಆಶ್ರಮದಲ್ಲಿ ತೃಪ್ತಿಕರ ವಾತಾವರಣ ಸಿಗದೆ ಸಾವನ್ನಪ್ಪಿದ್ದರು.
ಆದರೆ, ಮಂಗಳವಾರ ಶಿವಚರಣ್ ಗುಪ್ತಾ ಅವರು ಮೃತಪಟ್ಟಾಗ ಆಶ್ರಮದ ಸಿಬ್ಬಂದಿ ಅವರ ಮೂವರು ಪುತ್ರಿಯರಿಗೆ ವಿಷಯ ಮುಟ್ಟಿಸಿದಾಗ ನಡೆದ ಘಟನೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ.ಉನ್ನತ ಶಿಕ್ಷಣ ಪಡೆದು ಶಿಕ್ಷಕಿಯರಾಗಿ ಉದ್ಯೋಗದಲ್ಲಿರುವ ಶಿವಚರಣ್ ಅವರ ಮೂವರು ಪುತ್ರಿಯರಲ್ಲಿ ಒಬ್ಬರೂ ತಂದೆಯ ಅಂತಿಮ ದರ್ಶನಕ್ಕೆ ಬರಲಿಲ್ಲ.
ಇಲ್ಲಿದೆ ನೋಡಿ ವಿಡಿಯೋ:
ये चिता मुंबई में बड़े कपड़ा व्यापारी रहे शिवचरण रामरत्न गुप्ता की है. शिवचरण(74) की हरियाणा के सोनीपत स्थित एक वृद्धाश्रम में मौत हो गई.
वे पिछले तीन साल से आश्रम में रह रहे थे. दो साल पहले इनकी पत्नी का भी इसी आश्रम में निधन हुआ था.
मंगलवार को जब शिवचरण कि मौत हुई तो आश्रम… pic.twitter.com/z2pwCA970W
— Priya singh (@priyarajputlive) August 5, 2026
ತಂದೆಯ ಸಾವು ವರದಿಯಾದಾಗ, ಒಬ್ಬ ಮಗಳು “ಬರಲು ಸಮಯವಿಲ್ಲ” ಎಂದರೆ, ಇನ್ನೊಬ್ಬ ಮಗಳು “ಬಹಳ ದೂರವಾಗುತ್ತದೆ, ಬರಲು ಸಾಧ್ಯವಿಲ್ಲ” ಎಂದು ಸಬೂಬು ಹೇಳಿದ್ದಾರೆ. ತಂದೆಯ ಅಂತಿಮ ಸಂಸ್ಕಾರವನ್ನು ಸೋನಿಪತ್‌ನ ವೃದ್ಧಾಶ್ರಮದಲ್ಲೇ ನೆರವೇರಿಸುವಂತೆ ಹೇಳಿದ ಈ ಕಲಿಯುಗದ ಮಕಳು, ಆನ್‌ಲೈನ್ ಮೂಲಕ ₹5,100 ಹಣವನ್ನು ಟ್ರಾನ್ಸ್‌ಫರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಚಿತೆಗೆ ಬೆಂಕಿ ಇಡುವ ಪ್ರಕ್ರಿಯೆಯನ್ನು ವಿಡಿಯೋ ಕಾಲ್ ಮೂಲಕ ತಮಗೆ ತೋರಿಸುವಂತೆ ಆಶ್ರಮದ ಸಿಬ್ಬಂದಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಕ್ರೇಜ್: ಪೋಲ್ ಮೇಲೆ ಅಪಾಯಕಾರಿ ಕಸರತ್ತು, ಇದು ಸಾಧನೆಯೇ? ಅಥವಾ ಲೈಕ್ಸ್-ವ್ಯೂಸ್‌ಗಾಗಿ ಸಾಹಸವೇ?
ಕೋಟಿ ಕೋಟಿ ಆಸ್ತಿ ಗಳಿಸಿ, ಹೆತ್ತ ಮಕ್ಕಳನ್ನು ಉನ್ನತ ಹುದ್ದೆಗೆ ತಲುಪಿಸಿದ ತಂದೆಗೆ ಕೊನೆಗೆ ಅಂತಿಮ ಸಂಸ್ಕಾರಕ್ಕೂ ಮಕ್ಕಳ ಹೆಗಲು ಸಿಗದೆ ವೃದ್ಧಾಶ್ರಮದ ಸಿಬ್ಬಂದಿಯೇ ಚಿತೆಗೆ ಬೆಂಕಿ ಇಡುವಂತಾಗಿದ್ದು ಮಾನವೀಯತೆ ಸತ್ತುಹೋಗಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

