Breaking News

ಭಾರತದ ಪೂರ್ವ ಗಡಿಯಲ್ಲಿ ಮತ್ತೊಂದು ‘ಪಾಕಿಸ್ತಾನ’ ನಿರ್ಮಾಣ: ಶೇಖ್ ಹಸೀನಾ ಪುತ್ರ ಸಜೀಬ್ ವಾಜೆದ್ ಗಂಭೀರ ಎಚ್ಚರಿಕೆ

ದೆಹಲಿ: ಬಾಂಗ್ಲಾದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಮತ್ತು ಪ್ರಸ್ತುತ ವಿದ್ಯಮಾನಗಳ ಕುರಿತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಜೆದ್ ಜಾಯ್ (Sajeeb Wazed) ಭಾರತಕ್ಕೆ ಅತ್ಯಂತ ಗಂಭೀರ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಭಾರತದ ಪೂರ್ವ ಗಡಿಯಲ್ಲಿ ಬಾಂಗ್ಲಾದೇಶವು ಇದೀಗ “ಮತ್ತೊಂದು ಪಾಕಿಸ್ತಾನ”ದಂತೆ ಬದಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಆನ್‌ಲೈನ್ (ವರ್ಚುವಲ್) ಮೂಲಕ ನಡೆದ ಸಂವಾದದಲ್ಲಿ ಸಜೀಬ್ ವಾಜೆದ್ ಈ ಮಹತ್ವದ ಹೇಳಿಕೆ ನೀಡಿದ್ದಾರೆ. “ಭಾರತಕ್ಕೆ ಪ್ರಸ್ತುತ ಅತ್ಯಂತ ಕಳವಳಕಾರಿ ವಿಷಯವೆಂದರೆ, ದೇಶದ ಪೂರ್ವ ಗಡಿಯಲ್ಲಿ ಬಾಂಗ್ಲಾದೇಶವು ಮತ್ತೊಂದು ಪಾಕಿಸ್ತಾನವಾಗಿ ಮಾರ್ಪಟ್ಟಿದೆ. ಪೂರ್ವ ಭಾಗದಲ್ಲಿ ನೀವು ಇಂದು ಮತ್ತೊಂದು ಪಾಕಿಸ್ತಾನವನ್ನು ಎದುರಿಸುತ್ತಿದ್ದೀರಿ” ಎಂದು ವಾಜೆದ್ ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ: ಸರ್ಕಾರಿ ಆಸ್ಪತ್ರೆಯ ಸಿಲಿಂಗ್ ಕುಸಿದು ಮಹಿಳೆಯ ತಲೆಗೆ ಗಂಭೀರ ಗಾಯ

ಬಾಂಗ್ಲಾದೇಶದಲ್ಲಿ ವಿದೇಶಿ ಗುಪ್ತಚರ ಸಂಸ್ಥೆಗಳು, ವಿಶೇಷವಾಗಿ ಪಾಕಿಸ್ತಾನದ ಐಎಸ್‌ಐ (ISI) ಅತ್ಯಂತ ಸಕ್ರಿಯವಾಗಿದ್ದು, ಅದಕ್ಕೆ ಮುಕ್ತವಾಗಿ ಕಾರ್ಯಾಚರಿಸಲು ಅವಕಾಶ ಸಿಕ್ಕಿದೆ ಎಂದು ಅವರು ಆರೋಪಿಸಿದ್ದಾರೆ. “ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳನ್ನು ಈಗಲೇ ತಡೆಯದಿದ್ದರೆ, ಭವಿಷ್ಯದಲ್ಲಿ ಜಾಗತಿಕ ಮಟ್ಟದ ಮುಂದಿನ ಹಂತದ ಭಯೋತ್ಪಾದಕರು ಬಾಂಗ್ಲಾದೇಶದಿಂದಲೇ ಹೊರಹೊಮ್ಮಲಿದ್ದಾರೆ” ಎಂದು ಅವರು ಎಚ್ಚರಿಸಿದ್ದಾರೆ.

ಅವಾಮಿ ಲೀಗ್ ಸರ್ಕಾರ ಅಧಿಕಾರದಿಂದ ಕೆಳಗಿಳಿದ ಬಳಿಕ ಬಾಂಗ್ಲಾದೇಶದಲ್ಲಿ ನಿಷೇಧಿತ ಉಗ್ರ ಸಂಘಟನೆಗಳು ಹಾಗೂ ಅತಿಯಾದ ಮೂಲಭೂತವಾದಿ ಶಕ್ತಿಗಳು ಶಕ್ತಿ ಪಡೆದುಕೊಳ್ಳುತ್ತಿರುವುದು ಭಾರತದ ಆಂತರಿಕ ಹಾಗೂ ಗಡಿ ಭದ್ರತೆಗೆ ಬಹುದೊಡ್ಡ ಸವಾಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *