Breaking News

ಇಂದಿನ ದಿನ ಭವಿಷ್ಯ: ಮಹಾಲಕ್ಷ್ಮಿಯ ಕೃಪೆಯಿಂದ ಈ ರಾಶಿಯವರಿಗೆ ಆರ್ಥಿಕ ಪ್ರಗತಿ, ನಿಮಗಿದೆಯೇ ಧನಲಾಭ

ಮೇಷ: ಮಹಾಲಕ್ಷ್ಮಿಯ ಕೃಪೆಯಿಂದ ಉತ್ತಮ ದಿನದ ಆರಂಭ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ಹಳೆಯ ಬಾಕಿ ಹಣ ವಸೂಲಿಯಾಗಲಿದ್ದು, ವ್ಯಾಪಾರಸ್ಥರಿಗೆ ಹಾಗೂ ಕಬ್ಬಿಣದ ಉದ್ಯಮಿಗಳಿಗೆ ಶುಭ ಫಲ.

ವೃಷಭ: ಕೆಲಸದಲ್ಲಿದ್ದ ಗೊಂದಲಗಳು ಬಗೆಹರಿಯಲಿವೆ. ಆದಾಯ ಮಧ್ಯಮ ಗತಿಯಲ್ಲಿರುತ್ತದೆ, ಹಣದ ಉಳಿತಾಯದ ಮೇಲೆ ಗಮನವಿರಲಿ. ಸಂಗಾತಿಯ ಆರೋಗ್ಯ ಸುಧಾರಿಸಲಿದ್ದು, ಹಿರಿಯರೊಂದಿಗೆ ಅನಗತ್ಯ ವಾದ ಬೇಡ.

ಮಿಥುನ: ವೃತ್ತಿ ಕ್ಷೇತ್ರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕಚೇರಿಯಲ್ಲಿ ನಿಮಗಿರುವ ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ ಸಿಗಲಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡುಬರಲಿದೆ.

ಕಟಕ: ಬಹುನಿರೀಕ್ಷಿತ ಕೆಲಸಗಳಲ್ಲಿ ಯಶಸ್ಸು ಹಾಗೂ ಜಯ ಸಾಗಲಿದೆ. ನೂತನ ವ್ಯಾಪಾರ ಅಥವಾ ಆಸ್ತಿ ಖರೀದಿಗೆ ಪ್ರಯತ್ನಗಳು ನಡೆಯಲಿವೆ. ಕುಟುಂಬದಲ್ಲಿ ಶಾಂತಿ ಮತ್ತು ಪ್ರೀತಿಪಾತ್ರರ ಬೆಂಬಲ ಸಿಗಲಿದೆ.

ಸಿಂಹ: ಸಾಲ ತೀರಿಸುವ ಆಲೋಚನೆಗಳು ಫಲಪ್ರದವಾಗಲಿವೆ. ಶತ್ರುಗಳೂ ಮಿತ್ರರಾಗುವ ದಿನ. ವ್ಯಾಪಾರ, ಕೃಷಿ ಹಾಗೂ ರಾಜಕೀಯ ರಂಗದಲ್ಲಿ ಇರುವವರಿಗೆ ಉತ್ತಮ ಗೌರವ ಮತ್ತು ಧನಲಾಭ ಕಾಯ್ದಿದೆ.

ಕನ್ಯಾ: ವಾಹನ ಯೋಗ ಹಾಗೂ ಬಾಕಿ ಇರುವ ಒಪ್ಪಂದಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪೂರ್ವಿಕರ ಆಸ್ತಿ ವ್ಯಾಜ್ಯಗಳು ಇತ್ಯರ್ಥವಾಗಬಹುದು. ಮಾತು ನೇರ-ದಿಟ್ಟವಾಗಿರಲಿ.

ತುಲಾ: ಉದ್ಯಮಿಗಳಿಗೆ ಆರ್ಥಿಕವಾಗಿ ಲಾಭದಾಯಕ ದಿನ. ಹಣಕಾಸಿನ ಮುಗ್ಗಟ್ಟು ಬಂದರೂ ನಿಯಂತ್ರಣ ಸಾಧ್ಯ. ವಿದ್ಯಾರ್ಥಿಗಳಿಗೆ ಶುಭ ಫಲ. ಹೊರಗಿನ ಆಹಾರ ಸೇವನೆಯಲ್ಲಿ ಎಚ್ಚರಿಕೆ ವಹಿಸಿ.

ವೃಶ್ಚಿಕ: ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆಯ ನಿರ್ಧಾರ ಅಗತ್ಯ. ಅನುಭವಿಗಳ ಮಾರ್ಗದರ್ಶನ ಪಡೆಯುವುದು ಒಳಿತು. ಆಕಸ್ಮಿಕ ಪ್ರಯಾಣದ ಯೋಗವಿದೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿರುವವರಿಗೆ ಶುಭ.

ಧನು: ವ್ಯಾಪಾರದಲ್ಲಿ ಲಾಭದಾಯಕ ವಾತಾವರಣ ಬರಲಿದೆ. ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಒಳಿತು. ಹಳೆಯ ಸಾಲದ ಬಾಕಿಗಳು ತೀರುವ ಲಕ್ಷಣಗಳಿವೆ. ದಾಂಪತ್ಯದಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಬಂದರೂ ಸುಲಭವಾಗಿ ಬಗೆಹರಿಯಲಿವೆ.

ಮಕರ: ನೂತನ ಯೋಜನೆಗಳು ಕಾರ್ಯಗತಗೊಳ್ಳಲಿವೆ. ಕೆಲಸದ ಸ್ಥಳದಲ್ಲಿ ಶ್ರಮಕ್ಕೆ ತಕ್ಕಂತೆ ಅಧಿಕಾರಿಗಳ ಪ್ರಶಂಸೆ ಹಾಗೂ ಬೆಂಬಲ ದೊರೆಯಲಿದೆ.

ಕುಂಭ: ಸ್ನೇಹಿತರೊಂದಿಗೆ ಅಥವಾ ಆತ್ಮೀಯರೊಂದಿಗೆ ಸಮಯ ಕಳೆಯುವ ಅವಕಾಶ. ಆರ್ಥಿಕ ನಷ್ಟವಾಗದಂತೆ ಹೂಡಿಕೆಗಳ ವಿಚಾರದಲ್ಲಿ ಜಾಗ್ರತೆ ಇರಲಿ.

ಮೀನ: ಮನಸ್ಸಿಗೆ ನೆಮ್ಮದಿ ತರುವ ದಿನ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ, ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಲಿದೆ.

Leave a Reply

Your email address will not be published. Required fields are marked *