Breaking News

ಬಸವರಾಜ ಹೊರಟ್ಟಿ ರಾಜೀನಾಮೆ: “ಸಿದ್ದರಾಮಯ್ಯ ಅವರ ಬಳಿ ಮಾತನಾಡಿದ್ದೆ, ಮಧ್ಯದಲ್ಲೇ ನಿರ್ಗಮಿಸುತ್ತಿರುವುದು ನೋವು ತಂದಿದೆ

ಬೆಂಗಳೂರು: ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ರಾಜೀನಾಮೆಯ ಹಿನ್ನೆಲೆ ಹಾಗೂ ಸಿದ್ದರಾಮಯ್ಯ ಅವರೊಂದಿಗಿನ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ.

ಅಧಿಕಾರ ಪೂರ್ಣಗೊಳಿಸಿ ನಿರ್ಗಮಿಸುವುದಕ್ಕೂ, ಮಧ್ಯದಲ್ಲಿಯೇ ಸ್ಥಾನ ಬಿಟ್ಟು ಹೋಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದ ಹೊರಟ್ಟಿ, ಈ ಬೆಳವಣಿಗೆಯನ್ನು ‘ಆಕಸ್ಮಿಕ’ ಸಿನಿಮಾಗೆ ಹೋಲಿಸಿ ಭಾವುಕರಾದರು.

“ರಾಜೀನಾಮೆ ನೀಡುವ ಮುನ್ನ ನಾನು ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದೆ. ಅದಕ್ಕೆ ಅವರು ‘ಏನು ಮಾಡ್ತೀಯಾ ನೋಡಪ್ಪ’ ಎಂದು ಹೇಳಿದರು.””ಸಿದ್ದರಾಮಯ್ಯನವರೇ ಇದ್ದಿದ್ದರೆ ಈ ರೀತಿ ನಡೆಸಿಕೊಳ್ತಿರಲಿಲ್ಲವೇ?” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊರಟ್ಟಿ, “ಆ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ” ಎಂದು ನೇರವಾಗಿ ಹೇಳಿದರು.

ಇದನ್ನೂ ಓದಿ: ರಾಜೀನಾಮೆ ಹೇಳಿಕೆಗೆ ಬಸವರಾಜ ಹೊರಟ್ಟಿ ಸ್ಪಷ್ಟನೆ: “ಹೇಳಿದಂತೆ 14ಕ್ಕೆ ರಾಜೀನಾಮೆ ಕೊಡ್ತೀನಿ, ಅವಿಶ್ವಾಸದ ಪ್ರಶ್ನೆಯೇ ಇಲ್ಲ

“ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ವಿಧಾನಪರಿಷತ್‌ನಲ್ಲಿ ಸುಮಾರು 10 ರಿಂದ 12 ಸಭಾಪತಿಗಳನ್ನು ನೋಡಿದ್ದೇನೆ. ನಾನೂ ಸಭಾಪತಿಯಾಗಿ ಸದನದ ಎಲ್ಲಾ ಕಾರ್ಯಕಲಾಪಗಳನ್ನು ನಿಷ್ಪಕ್ಷಪಾತವಾಗಿ ನಡೆಸಿಕೊಟ್ಟಿದ್ದೇನೆ. ಸದನದಲ್ಲಿದ್ದ ಪ್ರತಿಯೊಬ್ಬ ಸದಸ್ಯರಿಗೂ ಮುಕ್ತವಾಗಿ ಮಾತನಾಡಲು ಅವಕಾಶ ನೀಡಿದ್ದೇನೆ. ಸದನದ ಕಲಾಪಗಳನ್ನು ಸುಗಮವಾಗಿ ನಡೆಸಲು ರಾತ್ರಿ 2 ಗಂಟೆಯವರೆಗೂ ಕಲಾಪ ನಡೆಸಿದ ಉದಾಹರಣೆಗಳು ನಮ್ಮ ಮುಂದಿವೆ.” ಎಂದು ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Leave a Reply

Your email address will not be published. Required fields are marked *