Breaking News

ಹಾಸ್ಟೆಲ್‌ನಲ್ಲಿ ‘ಬರ್ತ್‌ಡೇ ಸರ್ಪ್ರೈಸ್’ ನೀಡಲು ಬಂದ ಹೆತ್ತವರಿಗೆ ಆಘಾತ: ಕಿಟಿಕಿಯಿಂದ ಹಾರಿದ ಯುವಕ

ಜಲಂಧರ್ : ಮಗಳ ಹುಟ್ಟುಹಬ್ಬಕ್ಕೆ ಆಕೆಗೆ ಅಚ್ಚರಿಯ ಉಡುಗೊರೆ (Surprise) ನೀಡಲು ಕೇಕ್ ಹಿಡಿದು ಹಾಸ್ಟೆಲ್ ರೂಮ್‌ಗೆ ಬಂದ ಪೋಷಕರಿಗೆ ತೀವ್ರ ಆಘಾತ ಕಾಯ್ದಿತ್ತು. ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ (LPU) ಓದುತ್ತಿರುವ 23 ವರ್ಷದ ವಿದ್ಯಾರ್ಥಿನಿಯ ರೂಮ್‌ನಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಮೃತಸರದ ನಿವಾಸಿ ಸಿಮ್ರತ್ ಕೌರ್ ಹಾಗೂ ಅವರ ಪತಿ ತಮ್ಮ ಮಗನೊಂದಿಗೆ, ಎಲ್‌ಪಿಯು ನಲ್ಲಿ ಓದುತ್ತಿರುವ ಮಗಳ 23ನೇ ಜನ್ಮದಿನದಂದು ಆಕೆಗೆ ತಿಳಿಸದೆ ಹಾಸ್ಟೆಲ್ ರೂಮ್‌ಗೆ ಆಗಮಿಸಿದ್ದರು. ಮಗಳ ರೂಮ್ ಬಳಿ ಬಂದ ಹೆತ್ತವರು ಬಾಗಿಲನ್ನು ಸತತ 15 ನಿಮಿಷಗಳ ಕಾಲ ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಕೊನೆಗೆ ಬಾಗಿಲು ತೆರೆದ ಮಗಳು, ಅತ್ಯಂತ ಶಾಂತ ಸ್ವರದಲ್ಲಿ “ನಾನು ಒಳಗೆ ಓದಿಕೊಳ್ಳುತ್ತಿದ್ದೆ” ಎಂದು ಹೆತ್ತವರಿಗೆ ಉತ್ತರಿಸಿದ್ದಾಳೆ. ಅದೇ ಕ್ಷಣದಲ್ಲಿ ಓಡೋಡಿ ಬಂದ ನೆರೆಹೊರೆಯವರು, “ನಿಮ್ಮ ರೂಮ್ ಹಿಂಭಾಗದ ಕಿಟಿಕಿಯಿಂದ ಯುವಕನೊಬ್ಬ ಕೆಳಗೆ ಜಿಗಿದಿದ್ದು, ಆತನ ತಲೆಯಿಂದ ತೀವ್ರ ರಕ್ತಸ್ರಾವವಾಗುತ್ತಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಡಿನ ರಸ್ತೆಯಲ್ಲಿ ಆನೆಗೆ ನಿರಂತರ ಹಾರ್ನ್ ಹಾಕಿ ಮುನ್ನುಗ್ಗಿದ ಕಾರು ಚಾಲಕಿ: ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ಪಾರು

ಈ ಮಾತು ಕೇಳಿದ ತಕ್ಷಣ ಆ ವಿದ್ಯಾರ್ಥಿನಿ “ನನಗೇನೂ ಗೊತ್ತಿಲ್ಲ, ನಾನು ರೂಮ್‌ನಲ್ಲಿ ಓದಿಕೊಳ್ಳುತ್ತಿದ್ದೆ ಅಷ್ಟೇ” ಎಂದು ಹಾರಿಕೆ ಉತ್ತರ ನೀಡಿದ್ದಾಳೆ. ಕೈಯಲ್ಲಿ ಬರ್ತ್‌ಡೇ ಕೇಕ್ ಹಿಡಿದು ನಿಂತಿದ್ದ ಹೆತ್ತವರು, ಮಗಳ ವರ್ತನೆ ಹಾಗೂ ಕಣ್ಣಮುಂದೆ ನಡೆದ ಘಟನೆಯನ್ನು ಕಂಡು ಕಂಗಾಲಾಗಿದ್ದಾರೆ. ಓದಿನ ಹೆಸರಿನಲ್ಲಿ ಪೋಷಕರ ಹಣವನ್ನು ದುರ್ಬಳಕೆ ಮಾಡಿಕೊಂಡು, ಕುಟುಂಬಕ್ಕೆ ವಂಚಿಸುವ ಇಂತಹ ನಡವಳಿಕೆಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *