ಅರಣ್ಯ ಪ್ರದೇಶದ ರಸ್ತೆಯಲ್ಲಿ ಆನೆಯೊಂದರ ಎದುರು ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ಸಿಲುಕಿಕೊಂಡ ವೇಳೆ, ಆಕೆಯಿಂದ ಸಂಭವಿಸಿದ ಒಂದು ಸಣ್ಣ ತಪ್ಪು ಜೀವಕ್ಕೆ ಭಾರಿ ಕಂಟಕ ತರುವಂತಿದ್ದ ಭೀಕರ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಕಳವಳಕ್ಕೆ ಕಾರಣವಾಗಿದೆ.
ಕಾಡಿನ ರಸ್ತೆಯಲ್ಲಿ ಆಲ್ಟೋ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಎದುರಿಗೆ ದಿಢೀರನೆ ದೈತ್ಯ ಆನೆಯೊಂದು ಪ್ರತ್ಯಕ್ಷವಾಗಿದೆ. ಈ ವೇಳೆ ಕಾರನ್ನು ತಕ್ಷಣವೇ ನಿಲ್ಲಿಸಿ ಹಿಂದಕ್ಕೆ ತೆಗೆದುಕೊಳ್ಳುವ (Reverse) ಬದಲಾಗಿ, ಆಕೆ ಅತ್ಯಂತ ವೇಗವಾಗಿ ಆನೆಯ ಕಡೆಗೇ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾಳೆ.
ಆನೆಯ ಸನಿಹಕ್ಕೆ ಬಂದ ಮೇಲೂ ಮಹಿಳೆ ತನ್ನ ಕಾರಿನ ಹಾರ್ನ್ (Honk) ಅನ್ನು ನಿರಂತರವಾಗಿ ಬಾರಿಸುತ್ತಾ ಮುನ್ನುಗ್ಗಿದ್ದಾಳೆ. ಕಾರನ್ನು ಹಾಗೂ ಹಾರ್ನ್ ಶಬ್ದವನ್ನು ಕೇಳಿ ಆನೆ ಹೆದರಿ ಓಡಿಹೋಗುತ್ತದೆ ಎಂಬ ತಪ್ಪು ಗ್ರಹಿಕೆ ಈ ಚಾಲಕಿಯದ್ದಾಗಿತ್ತು.
ಇಲ್ಲಿದೆ ನೋಡಿ ವಿಡಿಯೋ:
In this video, a woman is driving an Alto car through a forest road when a huge elephant appears in front of her.
Instead of stopping the car or reversing, she drives straight toward the elephant at high speed while continuously honking. Even after getting close to the elephant,… pic.twitter.com/mV5ob7MTVz
— Saffron Chargers (@SaffronChargers) August 7, 2026
ಕಾಡುಪ್ರಾಣಿಗಳ, ವಿಶೇಷವಾಗಿ ಆನೆಗಳ ಎದುರು ಈ ರೀತಿ ಕಾರನ್ನು ವೇಗವಾಗಿ ತರುವುದು ಹಾಗೂ ಕರ್ಕಶ ಶಬ್ದ ಮಾಡುವುದು ಅವುಗಳನ್ನು ತೀವ್ರವಾಗಿ ಕೆರಳಿಸುತ್ತದೆ (Aggressive). ಆನೆ ಕೋಪಗೊಂಡರೆ ಕ್ಷಣಮಾತ್ರದಲ್ಲಿ ಇಡೀ ಕಾರನ್ನೇ ಜಜ್ಜಿನುಜ್ಜು ಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಕ್ರೇಜ್: ಪೋಲ್ ಮೇಲೆ ಅಪಾಯಕಾರಿ ಕಸರತ್ತು, ಇದು ಸಾಧನೆಯೇ? ಅಥವಾ ಲೈಕ್ಸ್-ವ್ಯೂಸ್ಗಾಗಿ ಸಾಹಸವೇ?
ಆನೆ ಕೋಪಗೊಳ್ಳದೆ ರಸ್ತೆಯ ಪಕ್ಕಕ್ಕೆ ನಡೆದುಕೊಂಡು ಹೋದ ಕಾರಣ ಮಹಿಳೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಲ್ಲದಿದ್ದರೆ ಕ್ಷಣಾರ್ಧದಲ್ಲಿ ಭಾರಿ ದುರಂತವೇ ಸಂಭವಿಸುತ್ತಿತ್ತು.
ಅರಣ್ಯ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡುವಾಗ ಕಾಡುಪ್ರಾಣಿ ಕಂಡುಬಂದರೆ ಸೂಕ್ತ ಅಂತರ ಕಾಯ್ದುಕೊಳ್ಳುವುದು ಹಾಗೂ ಯಾವುದೇ ಕಾರಣಕ್ಕೂ ಶಬ್ದ ಮಾಡದೆ ಶಾಂತವಾಗಿರುವುದು ಅತ್ಯಗತ್ಯ ಎಂದು ವನ್ಯಜೀವಿ ತಜ್ಞರು ಎಚ್ಚರಿಸಿದ್ದಾರೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

