Breaking News

ಕ್ರೇನ್‌ನಲ್ಲಿ ತೂಗಾಡುತ್ತಾ ಸಚಿವ ಬಿ. ನಾಗೇಂದ್ರಗೆ ‘ಹನುಮ ಗದೆ’ ನೀಡಿ ಅದ್ಧೂರಿ ಸ್ವಾಗತ ಕೋರಿದ ಅಭಿಮಾನಿ

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ತಮ್ಮ ಸ್ವಕ್ಷೇತ್ರಕ್ಕೆ ಆಗಮಿಸಿದ ಬಿ. ನಾಗೇಂದ್ರ ಅವರಿಗೆ ಅಭಿಮಾನಿಗಳು ಮತ್ತು ಬೆಂಬಲಿಗರು ಅಭೂತಪೂರ್ವ ಹಾಗೂ ವಿನೂತನ ರೀತಿಯಲ್ಲಿ ಅದ್ಧೂರಿ ಸ್ವಾಗತ ಕೋರಿದ್ದಾರೆ. ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು ಕಣ್ತುಂಬಿಕೊಳ್ಳಲು ಹಾಗೂ ಶುಭಾಶಯ ಕೋರಲು ಸಾವಿರಾರು ಬೆಂಬಲಿಗರು ನೆರೆದಿದ್ದರು. ಈ ವೇಳೆ ಸಚಿವರ ಮೇಲಿದ್ದ ಅಭಿಮಾನದ ಭರದಲ್ಲಿ ಅಭಿಮಾನಿಯೊಬ್ಬರು ಸಾಹಸಮಯ ರೀತಿಯಲ್ಲಿ ಸ್ವಾಗತ ಕೋರಿ ಎಲ್ಲರ ಗಮನ ಸೆಳೆದಿದ್ದಾರೆ.

ಬಳ್ಳಾರಿಯಲ್ಲಿ ಸಚಿವರ ಮೆರವಣಿಗೆ ಸಾಗುತ್ತಿದ್ದಾಗ, ಸಚಿವರ ಕಟ್ಟಾ ಅಭಿಮಾನಿಯೊಬ್ಬರು ಬೃಹತ್ ಕ್ರೇನ್‌ಗೆ (Crane) ಹಗ್ಗದ ಮೂಲಕ ಸುರಕ್ಷಿತವಾಗಿ ತೂಗಾಡುತ್ತಾ ಬೃಹತ್ ಗಾತ್ರದ ‘ಹನುಮ ಗದೆ’ಯನ್ನು (Hanuman Gadha) ಸಚಿವ ಬಿ. ನಾಗೇಂದ್ರ ಅವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.

ಇಲ್ಲಿದೆ ನೋಡಿ ವಿಡಿಯೋ:

ಕ್ರೇನ್‌ನಲ್ಲಿ ತೂಗಾಡುತ್ತಲೇ ಸಚಿವರಿಗೆ ಬೃಹತ್ ಹಾರವನ್ನು ಹಾಕಲು ಯತ್ನಿಸಿದ ಅಭಿಮಾನಿ, ಸಚಿವರ ಪರವಾಗಿ ಜೈಕಾರಗಳನ್ನು ಕೂಗಿದರು. ಈ ದೃಶ್ಯವನ್ನು ಕಂಡ ಸಚಿವರು ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಆಶ್ಚರ್ಯಚಕಿತರಾದರು.

ಇದನ್ನೂ ಓದಿ:  “ಆಡಳಿತ ಪಕ್ಷದ ಸಾಲು ಬೇಡ, ವಿಪಕ್ಷ ಸಾಲಿನಲ್ಲಿ ಸೀಟು ಕೊಡಿ”: ಸ್ಪೀಕರ್‌ಗೆ ಪತ್ರ ಬರೆಯಲು ಶಾಸಕ ಟಿ.ಬಿ. ಜಯಚಂದ್ರ ಸಿದ್ಧತೆ

ಸಚಿವರಾಗಿ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಬಿ. ನಾಗೇಂದ್ರ ಅವರಿಗೆ ನೀಡಲಾದ ಈ ಕ್ರೇನ್ ಸತ್ಕಾರ ಹಾಗೂ ಹನುಮ ಗದೆ ಹಸ್ತಾಂತರದ ವೀಡಿಯೊ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *