Breaking News

ಕಲ್ಲಡ್ಕ ಶ್ರೀರಾಮ ಮಹಾವಿದ್ಯಾಲಯದಲ್ಲಿ ಭವಿಷ್ ಘಟಕ ಉದ್ಘಾಟನೆ: ಶಿಕ್ಷಕ ವೃತ್ತಿ ಸರ್ವಶ್ರೇಷ್ಠ ಎಂದ ಡಾ. ಪ್ರಭಾಕರ ಭಟ್

ಕಲ್ಲಡ್ಕ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಭವಿಷ್ಯದಲ್ಲಿ ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳಲು ಆಸಕ್ತಿ ಹೊಂದಿರುವ ಪದವಿ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ಭವಿಷ್ ಘಟಕದ ಉದ್ಘಾಟನಾ ಕಾರ್ಯಕ್ರಮವು ಆಗಸ್ಟ್ 07ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು, “ಎಲ್ಲಾ ಪ್ರದೇಶಗಳಲ್ಲೂ ಮತ್ತು ಸರ್ವ ಕಾಲದಲ್ಲೂ ಗೌರವಿಸಲ್ಪಡುವ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ವೃತ್ತಿಯೇ ಶಿಕ್ಷಕ ವೃತ್ತಿ” ಎಂದು ಅಭಿಪ್ರಾಯಪಟ್ಟರು.

ಸುರತ್ಕಲ್‌ನ “ಅರಳು” ಆಪ್ತ ಸಮಾಲೋಚನಾ ಕೇಂದ್ರದ ಖ್ಯಾತ ಆಪ್ತ ಸಮಾಲೋಚಕಿ ತೇಜಾಕ್ಷಿ ವಿ. ಶೆಟ್ಟಿ ಅವರು ಗ್ರಂಥಪೂಜನ ನೆರವೇರಿಸುವ ಮೂಲಕ ‘ಭವಿಷ್’ ಘಟಕವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರತಿಯೊಬ್ಬ ಶಿಕ್ಷಕರು ಪ್ರಮುಖವಾಗಿ ಪ್ರೀತಿಸಬೇಕಾದ ಸೇವೆಯಿಂದ , ವಿಷಯದಿಂದ , ಶಾಲೆಯಿಂದ ಮತ್ತು ವಿದ್ಯಾರ್ಥಿಗಳಿಂದ ಎಂಬ 4 S ಗಳ ಪ್ರಾಮುಖ್ಯತೆಯನ್ನು ಅವರು ವಿವರಿಸಿದರು.

ಇದನ್ನೂ ಓದಿ: ಕಲ್ಲಡ್ಕ ಶ್ರೀರಾಮ ಕಾಲೇಜು ಅಭಿವೃದ್ಧಿ ಸಮಿತಿಯ ನೂತನ‌‌ ಪದಾಧಿಕಾರಿಗಳ‌ ಆಯ್ಕೆ, ಅಧ್ಯಕ್ಷರಾಗಿ ಉಮೇಶ್ ಸಾಲಿಯಾನ್ ಆಯ್ಕೆ

ವಿದ್ಯಾರ್ಥಿಗಳಲ್ಲಿ ಧನಾತ್ಮಕ ಹಾಗೂ ಉತ್ತಮ ಪರಿವರ್ತನೆಯನ್ನು ತರುವ ಮೂಲಕ ದೇಶವನ್ನು ಮತ್ತೆ ‘ವಿಶ್ವಗುರು’ ಸ್ಥಾನದಲ್ಲಿ ನಿಲ್ಲಿಸುವುದೇ ಶಿಕ್ಷಕ ವೃತ್ತಿಯ ಮೂಲ ಉದ್ದೇಶವಾಗಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಪದವಿ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾಯರಕಟ್ಟೆ ಹಾಗೂ ಭವಿಷ್ ಘಟಕದ ನಿರ್ದೇಶಕಿ ಆಶಾಲತಾ ಉಪಸ್ಥಿತರಿದ್ದರು. ಭವಿಷ್ ಸಹ ನಿರ್ದೇಶಕಿ ಬಬಿತಾ ಸ್ವಾಗತಿಸಿ, ಸಂಸ್ಕೃತ ಉಪನ್ಯಾಸಕಿ ಪ್ರಸನ್ನಾ ವಂದಿಸಿದರು, ಬಿ.ಎ. ವಿದ್ಯಾರ್ಥಿನಿ ಸ್ತುತಿ ಕಾರ್ಯಕ್ರಮ ನಿರೂಪಣೆ ಮಾಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *