Breaking News

ಕರಾಟೆ ಸ್ಪರ್ಧೆಯಲ್ಲಿ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳ ಮಹತ್ವದ ಸಾಧನೆ: ರಾಜ್ಯ ಮಟ್ಟಕ್ಕೆ ಆಯ್ಕೆ

ಬಂಟ್ವಾಳ : ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯು ಪುಣಚದ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು. ಈ ಕ್ರೀಡಾಕೂಟದಲ್ಲಿ ಕಲ್ಲಡ್ಕದ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ವಿವರ:

19 ವರ್ಷದೊಳಗಿನ ಬಾಲಕರ ವಿಭಾಗ:

ವಿಖ್ಯಾತ್ ಆರ್ ಶೆಟ್ಟಿ: ಪ್ರಥಮ ಸ್ಥಾನ

ಕೌಶಿಕ್ ಶರ್ಮ: ಪ್ರಥಮ ಸ್ಥಾನ

ರಾಹುಲ್: ಪ್ರಥಮ ಸ್ಥಾನ

ಮಂಥನ್ ಪೂಜಾರಿ: ದ್ವಿತೀಯ ಸ್ಥಾನ

ವರ್ಷಿತ್ ಪೂಜಾರಿ: ದ್ವಿತೀಯ ಸ್ಥಾನ

ಸಂಪತ್: ತೃತೀಯ ಸ್ಥಾನ

ಇದನ್ನೂ ಓದಿ: ಕಲ್ಲಡ್ಕ ಶ್ರೀರಾಮ ಮಹಾವಿದ್ಯಾಲಯದಲ್ಲಿ ಭವಿಷ್ ಘಟಕ ಉದ್ಘಾಟನೆ: ಶಿಕ್ಷಕ ವೃತ್ತಿ ಸರ್ವಶ್ರೇಷ್ಠ ಎಂದ ಡಾ. ಪ್ರಭಾಕರ ಭಟ್

ವಿದ್ಯಾಲಯದ ವಿದ್ಯಾರ್ಥಿಗಳ ಈ ಸಮಗ್ರ ಮತ್ತು ಅತ್ಯುತ್ತಮ ಸಾಧನೆಯ ಫಲವಾಗಿ 19 ವರ್ಷದೊಳಗಿನ ಬಾಲಕರ ತರುಣ ವಿಭಾಗದಲ್ಲಿ ‘ದ್ವಿತೀಯ ಸಮಗ್ರ ಪ್ರಶಸ್ತಿ’ (Runner-up Overall Trophy) ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಮುಡಿಗೆೇರಿದೆ.

ಸಾಧನೆಗೈದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ತರಬೇತುದಾರರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *