Breaking News

ಮೀನಿನ ಖಾದ್ಯಕ್ಕೆ 100 ರೂಪಾಯಿ ಜಟಾಪಟಿ: ಹೋಟೆಲ್ ಸಿಬ್ಬಂದಿ-ಗ್ರಾಹಕರ ನಡುವೆ ಭಾರಿ ಗಲಾಟೆ

ಮಲಪ್ಪುರಂ: ಆಹಾರದ ದರದ ವಿಚಾರವಾಗಿ ಗ್ರಾಹಕರು ಹಾಗೂ ಹೋಟೆಲ್ ಸಿಬ್ಬಂದಿಯ ನಡುವೆ ಉಂಟಾದ ಸಣ್ಣ ಮಾತಿನ ಚಕಮಕಿ ಬಳಿಕ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಕೇರಳದ ಮಲಪ್ಪುರಂನಲ್ಲಿರುವ ‘ಚೋರುಂ ಮೀನುಂ’ (Chorum Meenum) ಹೋಟೆಲ್‌ನಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಗ್ರಾಹಕರು ಆರ್ಡರ್ ಮಾಡಿದ ಮೀನಿನ ಖಾದ್ಯದ ಬೆಲೆಯನ್ನು ಮೆನು ಕಾರ್ಡ್‌ನಲ್ಲಿ ₹200 ಎಂದು ನಮೂದಿಸಲಾಗಿತ್ತು. ಆದರೆ, ಊಟ ಮುಗಿಸಿ ಬಿಲ್ ನೀಡಿದಾಗ ಅದರಲ್ಲಿ ₹300 ಎಂದು ನಮೂದಿಸಲಾಗಿತ್ತು. ಮೆನು ಕಾರ್ಡ್‌ನ ದರಕ್ಕೂ ಮತ್ತು ಅಂತಿಮ ಬಿಲ್‌ನ ದರಕ್ಕೂ ವ್ಯತ್ಯಾಸವಿದ್ದುದನ್ನು ಕಂಡ ಗ್ರಾಹಕರು ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ಹಾಗೂ ಮಾತಿನ ಚಕಮಕಿ ಏರ್ಪಟ್ಟಿದೆ.

ಇದನ್ನೂ ಓದಿ: ಡ್ಯಾನ್ಸ್ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣಗೆ ಅಪರೂಪದ ಹಿಪ್ ಇಂಜುರಿ! ರಣಬಾಳಿ ಅಥವಾ ಮೈಸಾ ಶೂಟಿಂಗ್‌ ವಿಳಂಬ

ಇಲ್ಲಿದೆ ನೋಡಿ ವಿಡಿಯೋ:

ವಾಗ್ವಾದ ವಿಕೋಪಕ್ಕೆ ತಿರುಗಿ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿ ಪರಸ್ಪರ ಹಲ್ಲೆ ನಡೆಸುವ ಮಟ್ಟಕ್ಕೆ ತಲುಪಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಹಾಗೂ ಪೊಲೀಸ್ ದೂರು ದಾಖಲಾಗಿರುವ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *