ಮಕರ ಸಂಕ್ರಾಂತಿ: ಎಳ್ಳು-ಬೆಲ್ಲ ಹಂಚಿ ಸಂಭ್ರಮಿಸಿದ ಕಲ್ಲಡ್ಕ ಶ್ರೀರಾಮ ಹಿ. ಪ್ರಾ. ಶಾಲಾ ವಿದ್ಯಾರ್ಥಿಗಳು

Bantwal News Makar Sankrama celebration at Kalladka Sri Rama Higher Primary School

ಬಂಟ್ವಾಳ: ತಾಲೂಕಿನ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.15 ರಂದು ಮಕರ ಸಂಕ್ರಮಣ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳು ಎಳ್ಳು-ಬೆಲ್ಲ ಹಂಚಿ ಸಂಭ್ರಮಿಸಿದರು.

ಮಕರ ಸಂಕ್ರಮಣ ಪ್ರಯುಕ್ತ ಆಯೋಜಿಸಲಾದ ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಸಹಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

Advertisement

ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಸಹಕಾರ್ಯದರ್ಶಿ ಲತೇಶ್ ಬಾಕ್ರಬೈಲ್, ಭಾರತದಲ್ಲಿ ಎಲ್ಲಾ ಹಬ್ಬಗಳಿಗೆ ಅದರದ್ದೇ ಆದ ವೈಶಿಷ್ಟ್ಯತೆ ಇದೆ. ಸಂಕ್ರಮಣ ಎಂದರೆ ಹೊಸ ಬದಲಾವಣೆ. ಹೊಸದಾದ ಸಂಗತಿಗಳು ಸಂಕ್ರಮಣದ ನಂತರ ಬರುತ್ತದೆ. ಈ ಸಂಕ್ರಮಣದ ಕಾಲದಲ್ಲಿ ಸರ‍್ಯನು ದಕ್ಷಿಣಾಯನದಿಂದ ಉತ್ತರರಾಯಣಕ್ಕೆ  ತನ್ನ ಪಥವನ್ನು ಬದಲಿಸುತ್ತದೆ. ಈ ಬದಲಾವಣೆಯು ಇಡೀ ಭೂಮಂಡಲದಲ್ಲಿ ಆಗುತ್ತದೆ. ಆ ಸೂರ್ಯನ ಚಲನೆಯ ಜೊತೆಗೆ ನಾವು ಕೂಡ ಬದಲಾವಣೆ ಆಗಬೇಕು ಎಂದರು.

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ

Advertisement

ಇನ್ನು ಮುಂದಕ್ಕೆ ಬೆಳಕು ಹೆಚ್ಚು ಇದ್ದು ರಾತ್ರಿ ಕಡಿಮೆಯಿರುತ್ತದೆ. ಅದರಂತೆ  ನಾವು ಕೂಡ ಹೆಚ್ಚೆಚ್ಚು ಜಾಗೃತರಾಗಬೇಕು. ಈ ಸಂಕ್ರಮಣದ ಕಾಲದಲ್ಲಿ ಒಂದಷ್ಟು ಬದಲಾವಣೆಗಳ ದೃಢಸಂಕಲ್ಪ ಮಾಡಬೇಕು. ಭಾರತದ ಪರಂಪರೆಯು ಭವ್ಯವಾಗಿದ್ದು, ಅದರ ಬಗ್ಗೆ ತಿಳಿದುಕೊಳ್ಳುವ ಸಣ್ಣ ಬದಲಾವಣೆ, ನಮ್ಮ ದೈನಂದಿನ ಚಟುವಟಿಕೆಯಲ್ಲಿ ಬದಲಾವಣೆ, ಭೂಮಿ ಹಾಗೂ ತಾಯಿಯ ಆತ್ಮಗೌರವ ಉಳಿಸುವ ಪ್ರಯತ್ನ ಹೀಗೆ ಸಂಕ್ರಮಣಕ್ಕೆ ‘ಸಮ್ಯಕ್ ಕ್ರಾಂತಿ’ (ಹೊಸ ಕ್ರಾಂತಿ) ಮಾಡೋಣ ಎಂದರು.

ಇದನ್ನೂ ಓದಿ: ಕಲ್ಲಡ್ಕ ಶ್ರೀರಾಮ ಪ.ಪೂ. ಕಾಲೇಜಿನಲ್ಲಿ ವಿವೇಕ ಜಯಂತಿ ಕಾರ್ಯಕ್ರಮ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರೂ ಆಗಿರುವ ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಂತರ 7ನೇ ತರಗತಿಯ ಅಪ್ರಮೇಯ ತೋಳ್ಪಾಡಿ ಅವರು ವೈಯಕ್ತಿಕ ಗೀತೆ ಹಾಡಿದರು. ತಬಲದ ಮೂಲಕ 7ನೇ ತರಗತಿಯ ಪ್ರನ್ವಿತ್, ತಾಳದ ಮೂಲಕ 7ನೇ ತರಗತಿಯ ತನೀಷ್ ಸಹಕರಿಸಿದರು.

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ

ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಧನ್ವ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿ, ತನ್ವಿ ಜೆ ಶೆಟ್ಟಿ ಸ್ವಾಗತಿಸಿ, ಬ್ರಾಹ್ಮೀಕೃಪಾ ವಂದಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

(ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com)

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು