Breaking News

ಪುತ್ತೂರು ವಿಜ್ಞಾನ ಮೇಳದಲ್ಲಿ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ: ಇಬ್ಬರು ರಾಜ್ಯ ಮಟ್ಟಕ್ಕೆ ಆಯ್ಕೆ

ಕಲ್ಲಡ್ಕ : ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನಲ್ಲಿ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಗಣಿತ-ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ’ದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ದಿನಾಂಕ 13.08.2026ರಂದು ನಡೆದ ಈ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದುಕೊಂಡಿದ್ದು, ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.ಗಣಿತ ಮಾದರಿ ಪ್ರದರ್ಶನ ವಿಭಾಗದ ‘ಸಮ ಬಹುಭುಜಾಕೃತಿ ಗುಣಧರ್ಮಗಳ ಆಧಾರಿತ ಪ್ರದರ್ಶನ’ ವಿಷಯದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜ್ಞಾನ ವಿಭಾಗದ ‘ಸ್ವಚ್ಛ ಭಾರತ ಅಭಿಯಾನ ಮತ್ತು ತ್ಯಾಜ್ಯ ನಿರ್ವಹಣೆ ಆಧಾರಿತ ಮಾದರಿ’ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ. ಗಣಿತ ಮಾದರಿಯಲ್ಲಿ ‘ಸರ್ವಸಮೀಕಾ ಆಧಾರಿತ’ ವಿಷಯದಲ್ಲಿ 7ನೇ ತರಗತಿಯ ಅನ್ವೇಷ್ ಪ್ರಭು, ‘ಸೃಜನಾತ್ಮಕ ಗಣಿತ ಮಾದರಿ’ ವಿಷಯದಲ್ಲಿ 7ನೇ ತರಗತಿಯ ಹರ್ಷಿತಾ ಹಾಗೂ ವಿಜ್ಞಾನ ವಿಭಾಗದ ‘ಘರ್ಷಣೆ ಆಧಾರಿತ ಮಾದರಿ’ಯಲ್ಲಿ 6ನೇ ತರಗತಿಯ ವಿಖ್ಯಾತ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವೈಭವದ ‘ಆಟಿದ ಕೂಟ’: ಹಿರಿಯರ ನಂಬಿಕೆ, ಪರಂಪರೆಯರಿತ ವಿದ್ಯಾರ್ಥಿಗಳು

ಸಂಸ್ಕೃತಿ ಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ 7ನೇ ತರಗತಿಯ ಸ್ಕಂದತೇಜ, ಭೂಮಿಕ ಹಾಗೂ 6ನೇ ತರಗತಿಯ ಶ್ರಾವಣಿ ದೀಪ ಅವರ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ. ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿವೃಂದದವರು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *