ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 39 ರಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಭದ್ರತಾ ಸಿಬ್ಬಂದಿಯೊಬ್ಬ (ಸೆಕ್ಯುರಿಟಿ ಗಾರ್ಡ್) ರೋಗಿಗಳಿಗೆ ನೀಡುವ ಇಂಜೆಕ್ಷನ್ಗಳಿಗೆ ಔಷಧ ಭರ್ತಿ ಮಾಡುತ್ತಿದ್ದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಗಸ್ಟ್ 14ರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಪ್ಪಿತಸ್ಥ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.
ಆಸ್ಪತ್ರೆಯ ಯೂನಿಫಾರ್ಮ್ನಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬ ಸಿರಿಂಜ್ಗಳಿಗೆ (Syringes) ಔಷಧಗಳನ್ನು ತುಂಬಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿತ್ತು. ಆಸ್ಪತ್ರೆಯ ಕರ್ತವ್ಯದಲ್ಲಿದ್ದ ನರ್ಸ್ ರಿಚಾ ಕುಮಾರಿ ಎಂಬುವವರು ಖಾಲಿ ಸಿರಿಂಜ್ಗಳನ್ನು ಭದ್ರತಾ ಸಿಬ್ಬಂದಿ ಸುನಿಲ್ಗೆ ನೀಡಿ, ಔಷಧ ಭರ್ತಿ ಮಾಡುವಂತೆ ಸೂಚಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿದೆ ನೋಡಿ ವಿಡಿಯೋ:
This video is believed to be from a hospital in Noida’s Sector 39, where a security guard was seen preparing syringes with medicines. The incident allegedly took place on the night of August 14.
One of the nurses, later identified as Richa Kumari, is said to have handed empty… pic.twitter.com/ncna85dQeT
— Vani Mehrotra (@vani_mehrotra) August 18, 2026
ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡಿದ ಈ ಘಟನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಆಸ್ಪತ್ರೆಯ ಆಡಳಿತ ಮಂಡಳಿಯು ನರ್ಸ್ ರಿಚಾ ಕುಮಾರಿ ಹಾಗೂ ಸೆಕ್ಯುರಿಟಿ ಗಾರ್ಡ್ ಸುನಿಲ್ ಇಬ್ಬರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದೆ.

