ದೆಹಲಿ : ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲಾಗಿದೆ. ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯ (Chenab Bridge) ಮೇಲೆ ಮೊದಲ ಬಾರಿಗೆ ವಂದೇ ಭಾರತ್ ರೈಲು ಸುಮಾರು ಗಂಟೆಗೆ 100 ಕಿ.ಮೀ ವೇಗದಲ್ಲಿ ಯಶಸ್ವಿಯಾಗಿ ಚಲಿಸಿ ದಾಖಲೆ ನಿರ್ಮಿಸಿದೆ.
111 ಕಿಲೋಮೀಟರ್ ಉದ್ದದ ಕತ್ರಾ–ಬನಿಹಾಲ್ (Katra–Banihal) ರೈಲು ಮಾರ್ಗದಲ್ಲಿ ರೈಲುಗಳ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 100 ಕಿ.ಮೀಗೆ ಹೆಚ್ಚಿಸಲು ರೈಲ್ವೆ ಸಚಿವಾಲಯ ಅಧಿಕೃತ ಅನುಮೋದನೆ ನೀಡಿದೆ.
ವಿಡಿಯೋ:
🚨 BIG MILESTONE
Vande Bharat runs at nearly 100 kmph for the FIRST TIME on the world’s HIGHEST Chenab Bridge.
The Railway Ministry has APPROVED raising the speed limit to 100 kmph on the 111-km Katra–Banihal rail section. 🔥 pic.twitter.com/uyytv04OKC
— Megh Updates 🚨™ (@MeghUpdates) August 20, 2026
ಜಮ್ಮು-ಕಾಶ್ಮೀರದ ಕತ್ರಾ ಮತ್ತು ಬನಿಹಾಲ್ ವಿಭಾಗವನ್ನು ಸಂಪರ್ಕಿಸುವ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಬೃಹತ್ ಸೇತುವೆಯ ಮೇಲೆ ವಂದೇ ಭಾರತ್ ಎಕ್ಸ್ಪ್ರೆಸ್ ಯಶಸ್ವಿಯಾಗಿ ನೂರರ ವೇಗದಲ್ಲಿ ಚಲಿಸುವ ಮೂಲಕ ಪ್ರಾಯೋಗಿಕ ಪರೀಕ್ಷೆಯನ್ನು ಪೂರ್ಣಗೊಳಿಸಿದೆ.
ಇದನ್ನೂ ಓದಿ: ಖಾಂಡ್ವಾದಲ್ಲಿ ವಿನೂತನ ಪ್ರತಿಭಟನೆ: ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಲಿಂಕ್ (USBRL) ಯೋಜನೆಯ ಭಾಗವಾಗಿರುವ ಈ ವಿಭಾಗದಲ್ಲಿ ವೇಗ ಹೆಚ್ಚಳದಿಂದಾಗಿ ಜಮ್ಮುವಿನಿಂದ ಶ್ರೀನಗರ ಹಾಗೂ ಕಾಶ್ಮೀರ ಕಣಿವೆ ನಡುವಿನ ಪ್ರಯಾಣದ ಸಮಯ ಇನ್ನುಮುಂದೆ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ.

