ಖಾಂಡ್ವಾ : ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗುತ್ತಿರುವುದನ್ನು ಖಂಡಿಸಿ ಸಾರ್ವಜನಿಕರೊಬ್ಬರು ನಡೆಸಿದ ವಿಶಿಷ್ಟ ಮಾದರಿಯ ಪ್ರತಿಭಟನೆ ಸದ್ಯ ದೇಶಾದ್ಯಂತ ಸುದ್ದಿಯಾಗಿದೆ.
ಜಿಲ್ಲಾಧಿಕಾರಿಗಳ (District Collector) ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಗೆ ವ್ಯಕ್ತಿಯೊಬ್ಬರು ನಾಯಿಯ ವೇಷ ಧರಿಸಿ (Dog Costume) ಆಗಮಿಸುವ ಮೂಲಕ ಅಧಿಕಾರಿಗಳು ಹಾಗೂ ಸ್ಥಳೀಯರ ಗಮನ ಸೆಳೆದಿದ್ದಾರೆ.
A unique protest in Khandwa, Madhya Pradesh 😂
A man wore a dog costume and reached the Collectorate to protest against the growing problem of stray dogs in the city pic.twitter.com/XorSLrjUuu
— Prayag (@theprayagtiwari) August 19, 2026
ಖಾಂಡ್ವಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ದಾಳಿ ಮತ್ತು ಭಯದ ವಾತಾವರಣದ ವಿರುದ್ಧ ಆಡಳಿತದ ಗಮನ ಸೆಳೆಯಲು ಈ ಪ್ರತಿಭಟನೆ ನಡೆಸಲಾಯಿತು.
ಕುಂದುಕೊರತೆ ಸಭೆಗೆ ನಾಯಿಯ ಕಾಸ್ಟ್ಯೂಮ್ ಧರಿಸಿ ಬಂದ ಪ್ರತಿಭಟನಾಕಾರನನ್ನು ಕಂಡು ಆಡಳಿತಾಧಿಕಾರಿಗಳು ಹಾಗೂ ಸಾರ್ವಜನಿಕರು ಆಶ್ಚರ್ಯಚಕಿತರಾದರು.ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರ ಜೀವನ ನೆಮ್ಮದಿಯಿಂದಿರಲು ಸಾಧ್ಯವಿಲ್ಲ ಎಂಬುದನ್ನು ಸಾಂಕೇತಿಕವಾಗಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಈ ಹಾದಿ ತುಳಿದಿದ್ದಾಗಿ ತಿಳಿಸಲಾಗಿದೆ.

