ಆಪಲ್ (ಸೇಬು) ಹಣ್ಣನ್ನು ಕತ್ತರಿಸಿ ಕೆಲವೇ ನಿಮಿಷಗಳಲ್ಲಿ ಅದರ ಬಿಳಿ ಬಣ್ಣ ಬದಲಾಗಿ ಕಂದು ಅಥವಾ ಕಪ್ಪಾಗುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಸಾಮಾನ್ಯವಾಗಿ ಹಣ್ಣು ಹಾಳಾಗಿದೆ ಎಂದು ಭಾವಿಸಿ ಎಸೆಯುವುದುಂಟು, ಆದರೆ ಇದು ಹಣ್ಣು ಕೆಡುವುದಲ್ಲ; ಬದಲಿಗೆ ಗಾಳಿಯೊಂದಿಗೆ ನಡೆಯುವ ಒಂದು ನೈಸರ್ಗಿಕ ರಾಸಾಯನಿಕ ಕ್ರಿಯೆಯಾಗಿದೆ.
ಆಪಲ್ ಬಣ್ಣ ಬದಲಾಗಲು ಕಾರಣವೇನು?
ಆಪಲ್ ಕತ್ತರಿಸಿದಾಗ ಅದರ ಕೋಶಗಳು (Cells) ಹಾನಿಗೊಳಗಾಗಿ, ಒಳಗಿನ ಭಾಗವು ಗಾಳಿಯಲ್ಲಿರುವ ಆಮ್ಲಜನಕದ (Oxygen) ಸಂಪರ್ಕಕ್ಕೆ ಬರುತ್ತದೆ. ಈ ವೇಳೆ ಆಪಲ್ನಲ್ಲಿರುವ ಪಾಲಿಫಿನಾಲ್ ಆಕ್ಸಿಡೇಸ್ (PPO) ಎಂಬ ಕಿಣ್ವವು (Enzyme) ಆಕ್ಸಿಡೀಕರಣಗೊಂಡು (Oxidation) ಹಣ್ಣಿನ ಮೇಲೆ ಕಂದು ಬಣ್ಣದ ಪಿಗ್ಮೆಂಟ್ ಉಂಟುಮಾಡುತ್ತದೆ.
ಖಾದ್ಯ ಯೋಗ್ಯವೇ?: ಯುಎಸ್ಡಿಎ (USDA) ಮಾರ್ಗದರ್ಶನದಂತೆ, ಬಣ್ಣ ಬದಲಾದ ಆಪಲ್ ತುಂಡುಗಳು ತಿನ್ನಲು ಸುರಕ್ಷಿತವಾಗಿರುತ್ತವೆ. ಆದರೆ ಅವುಗಳ ರುಚಿ ಮತ್ತು ವಿನ್ಯಾಸದಲ್ಲಿ (Texture) ಸ್ವಲ್ಪ ವ್ಯತ್ಯಾಸವಿರಬಹುದು.
ಇದನ್ನೂ ಓದಿ: ಏಮ್ಸ್ ವೈದ್ಯರ ಅದ್ಭುತ ಸಾಧನೆ: 209 ಕೆಜಿ ತೂಕವಿದ್ದ ವ್ಯಕ್ತಿಗೆ ಯಶಸ್ವಿ ಬೆರಿಯಾಟ್ರಿಕ್ ಸರ್ಜರಿ, 49 ಕೆಜಿ ತೂಕ ಇಳಿತ
ಆಪಲ್ ಕಪ್ಪಾಗದಂತೆ ತಡೆಯಲು 4 ಸರಳ ಉಪಾಯಗಳು:
ನಿಂಬೆ ರಸದ ನೀರು: ನಿಂಬೆ ರಸದಲ್ಲಿರುವ ಆಮ್ಲೀಯತೆ ಮತ್ತು ವಿಟಮಿನ್ ಸಿ ಕಿಣ್ವಗಳ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. 1 ಲೀಟರ್ ನೀರಿಗೆ 3 ಚಮಚ ನಿಂಬೆ ರಸ ಬೆರೆಸಿ, ಆಪಲ್ ತುಂಡುಗಳನ್ನು 3-5 ನಿಮಿಷ ನೆನೆಸಿ ತೆಗೆಯಿರಿ.
ಉಪ್ಪು ನೀರಿನ ಸ್ನಾನ: ಅರ್ಧ ಚಮಚ ಉಪ್ಪನ್ನು 1 ಕಪ್ ನೀರಿನಲ್ಲಿ ಕರಗಿಸಿ, ಆಪಲ್ ತುಂಡುಗಳನ್ನು 5 ನಿಮಿಷ ನೆನೆಸಿ, ನಂತರ ತೊಳೆದು ಬಳಸಿ. ಇದು ಆಕ್ಸಿಡೀಕರಣವನ್ನು ತಡೆಯುತ್ತದೆ.
ಗಾಳಿ ತಗದಂತೆ ಇಡುವುದು: ಕತ್ತರಿಸಿದ ಆಪಲ್ ತುಂಡುಗಳನ್ನು ಏರ್ಟೈಟ್ (Airtight) ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್ನಲ್ಲಿಟ್ಟರೆ ಗಾಳಿಯ ಸಂಪರ್ಕ ತಪ್ಪಿ ಬಣ್ಣ ಬದಲಾಗುವುದಿಲ್ಲ.
ಬ್ರಾಂಚಿಂಗ್ (ಬಿಸಿ ನೀರಿನಲ್ಲಿ ಬೇಯಿಸುವುದು): ಸ್ವೀಟ್ಸ್ ಅಥವಾ ಬೇಕರಿ ತಿನಿಸುಗಳಿಗೆ ಆಪಲ್ ಬಳಸುವುದಾದರೆ, ನೀರಿಗೆ ಹಾಕಿ ಲಘುವಾಗಿ ಕುದಿಸುವುದರಿಂದ (Blanching) ಕಿಣ್ವಗಳು ನಿಷ್ಕ್ರಿಯಗೊಳ್ಳುತ್ತವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

