Breaking News

ಉಡುಪಿಯಲ್ಲಿ ಭಾರಿ ರೇಡ್: 10,000 ಕೆಜಿ ರಾಸಾಯನಿಕಯುಕ್ತ ಬಾಳೆಹಣ್ಣು ವಶ, ಅಧಿಕಾರಿಗಳಿಂದ ನಾಶ

ಉಡುಪಿ : ಆಹಾರ ಕಲಬೆರಕೆ ಹಾಗೂ ಕೃತಕ ಬಣ್ಣ ಬಳಕೆಯ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಆಹಾರ ಸುರಕ್ಷತೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ಉಡುಪಿಯ ವಿವಿಧೆಡೆ ದಿಢೀರ್ ದಾಳಿ ನಡೆಸಿ ರಾಸಾಯನಿಕ ಬಳಸಿ ಹಣ್ಣು ಮಾಡಲಾಗಿದ್ದ ಸುಮಾರು 11 ಟನ್ (10,890 ಕೆಜಿ) ಗೂ ಅಧಿಕ ಬಾಳೆಹಣ್ಣುಗಳನ್ನು ವಶಪಡಿಸಿಕೊಂಡು ಸಂಪೂರ್ಣವಾಗಿ ನಾಶಪಡಿಸಿದ್ದಾರೆ.

ಪಕ್ಕಾ ಸುಳಿವು ಆಧರಿಸಿ ಅಲೆವೂರು, ಕೆಮ್ತೂರು ಮತ್ತು ದುಗ್ಲಿಪದವು ಗ್ರಾಮಗಳಲ್ಲಿರುವ ಬಾಳೆಹಣ್ಣು ದಾಸ್ತಾನು ಕೇಂದ್ರಗಳು ಹಾಗೂ ಕೃತಕವಾಗಿ ಹಣ್ಣು ಮಾಡುವ ಗೋದಾಮುಗಳ ಮೇಲೆ ಜಂಟಿ ದಾಳಿ ನಡೆಸಲಾಯಿತು. ತಪಾಸಣೆ ವೇಳೆ ಹಸಿ ಬಾಳೆಕಾಯಿಗಳನ್ನು ವೇಗವಾಗಿ ಹಣ್ಣು ಮಾಡಲು ಹಾಗೂ ಆಕರ್ಷಕ ಬಣ್ಣ ನೀಡಲು ಅಪಾಯಕಾರಿ ಕೆಮಿಕಲ್‌ಗಳು, ಕೃತಕ ಬಣ್ಣ ಮತ್ತು ಸ್ಪ್ರೇ ಬಾಟಲಿಗಳನ್ನು ಬಳಸುತ್ತಿದ್ದುದು ಪತ್ತೆಯಾಗಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುತ್ತಿದೆಯೇ ವಸಡಿನ ರಕ್ತಸ್ರಾವ, ಬಾಯಿ ದುರ್ವಾಸನೆ?: ಕಾರಣ ನಿಮ್ಮ ಈ ಹವ್ಯಾಸಗಳೇ ಇರಬಹುದು

ಅಂದಾಜು ₹8,71,200 ಮೌಲ್ಯದ 10,890 ಕೆಜಿ ಹಾನಿಕಾರಕ ಬಾಳೆಹಣ್ಣಿನ ದಾಸ್ತಾನನ್ನು ಸ್ಥಳದಲ್ಲೇ ಜಪ್ತಿ ಮಾಡಲಾಯಿತು. ನಂತರ ಅದನ್ನು ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ, ಸುರಕ್ಷತಾ ನಿಯಮಗಳಂತೆ ನಾಶಪಡಿಸಲಾಯಿತು. ಈ ಸಂಪೂರ್ಣ ಕಾರ್ಯಾಚರಣೆಯು ಕುಂದಾಪುರ ಸಹಾಯಕ ಕಮಿಷನರ್ ಮತ್ತು ಆಹಾರ ಸುರಕ್ಷತಾ ನಿಯೋಜಿತ ಅಧಿಕಾರಿಯಾದ ಶ್ರೀಮತಿ ರಶ್ಮಿ ಎಸ್.ಆರ್., ಉಡುಪಿ ತಹಶೀಲ್ದಾರ್ ಗುರುರಾಜ್, ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ತ್ರಿಮಲ್ಲೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳ ನೇತೃತ್ವದಲ್ಲಿ ಜರುಗಿತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *