Breaking News

ಗಂಡನಿಗೆ ತಿಳಿಯದೇ ಇಟ್ಟಿದ್ದ 12 ಲಕ್ಷ ರೂ. ಹಣವನ್ನು ತಿಂದ ಇಲಿಗಳು: ನೋಟುಗಳ ಚೂರುಗಳನ್ನು ಎಣಿಸುತ್ತಿರುವ ಪತಿ

ಉತ್ತರ ಪ್ರದೇಶ: ಪತಿಗೆ ತಿಳಿಯದಂತೆ ಸೀಕ್ರೆಟ್ ಆಗಿ ತಾಯಂದಿರು ಹಣ ಕೂಡಿಡುವುದು ಸಮಾಜದಲ್ಲಿ ಹೊಸದೇನಲ್ಲ. ಆದರೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಮಹಿಳೆಯೊಬ್ಬರ ವರ್ಷಗಳ ಶ್ರಮ, ಇಲಿಗಳ ಉಪಟಳದಿಂದಾಗಿ ಬೂದಿಯಲ್ಲಿ ಮುಚ್ಚಿದ ಕೆಂಡದಂತಾಗಿದೆ.

ಚಿನ್ನಾಭರಣ ಖರೀದಿಸಲು ಕಳೆದ 8 ವರ್ಷಗಳಿಂದ ಪೆಟ್ಟಿಗೆಯಲ್ಲಿ ರಹಸ್ಯವಾಗಿ ಕೂಡಿಟ್ಟಿದ್ದ 12 ಲಕ್ಷ ರೂ. ಮೌಲ್ಯದ ನೋಟುಗಳನ್ನು ಇಲಿಗಳು ಕಡಿದು ಚೂರು ಚೂರು ಮಾಡಿರುವ ವಿಚಿತ್ರ ಹಾಗೂ ದಾರುಣ ಘಟನೆ ಬೆಳಕಿಗೆ ಬಂದಿದೆ.

ಗೊಂಡಾ ಜಿಲ್ಲೆಯ ಮಹಿಳೆ ಕಳೆದ 8 ವರ್ಷಗಳಿಂದ ಪತಿಗೆ ಗೊತ್ತಾಗದಂತೆ ನಗದು ಹಣವನ್ನು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರವಾಗಿ ಬಾಂಚಿಕುಟ್ಟಿಯಂತೆ ಇಟ್ಟುಕೊಂಡು ಬಂದಿದ್ದರು. ನಿನ್ನೆ (ಆಗಸ್ಟ್ 21) ಒಡವೆ ಖರೀದಿಸಲು ಪೆಟ್ಟಿಗೆ ತೆರೆದು ನೋಡಿದಾಗ ಅವರಿಗೆ ತೀವ್ರ ಆಘಾತವಾಗಿದೆ. ಪೆಟ್ಟಿಗೆಯಲ್ಲಿದ್ದ 12 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನೆಲ್ಲಾ ಇಲಿಗಳು ಪೂರ್ತಿಯಾಗಿ ಕಡಿದು ಚೂರು ಚೂರು ಮಾಡಿದ್ದವು.

ಇದನ್ನೂ ಓದಿ: ನಾಯಿಗೆ ಹೆದರಿ 50 ಅಡಿ ಆಳದ ಪಾಳುಬಿದ್ದ ಬಾವಿಗೆ ಬಿದ್ದ ಬಾಲಕಿ: ಆಕ್ಸಿಜನ್ ಮಾಸ್ಕ್ ಧರಿಸಿ ರಕ್ಷಿಸಿದ ರಕ್ಷಣಾ ಪಡೆ

ಕಣ್ಣೆದುರೇ ಇಷ್ಟೊಂದು ದೊಡ್ಡ ಮೊತ್ತ ನಾಶವಾಗಿದ್ದನ್ನು ಕಂಡು ಕಂಗಾಲಾದ ಮಹಿಳೆ, ಕೊನೆಗೆ ವಿಷಯವನ್ನು ಪತಿಗೆ ತಿಳಿಸಿದ್ದಾರೆ. ಸದ್ಯ ಆಕೆಯ ಪತಿ ನೋಟುಗಳ ಸಣ್ಣ ಸಣ್ಣ ಚೂರುಗಳನ್ನು ಒಟ್ಟುಗೂಡಿಸಿ ಎಣಿಸಲು ಹರಸಾಹಸ ಪಡುತ್ತಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *