ಗುಣ : ಇಂದೋರ್‌ನಿಂದ ಮಂಡಿದೀಪ್‌ಗೆ ಸಂಚರಿಸುತ್ತಿದ್ದ ಪಾಮ್ ಆಯಿಲ್ (ಸಂಸ್ಕರಿಸಿದ ತಾಳೆ ಎಣ್ಣೆ) ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಟೋಡಿ ರಸ್ತೆಯ ಟ್ರೆಂಚಿಂಗ್ ಗ್ರೌಂಡ್ ಬಳಿ ಪಲ್ಟಿಯಾಗಿದೆ. ಅಪಘಾತದಿಂದಾಗಿ ಸಾವಿರಾರು ಲೀಟರ್ ಎಣ್ಣೆ ರಸ್ತೆ ಹಾಗೂ ಪಕ್ಕದ ಚರಂಡಿಗಳಿಗೆ ಹರಿದು ಹೋಗಿದ್ದು, ಈ ವೇಳೆ ಸಾರ್ವಜನಿಕರು ಬಕೆಟ್, ಪಾತ್ರೆ ಹಾಗೂ ಕ್ಯಾನ್‌ಗಳನ್ನು ಹಿಡಿದು ಎಣ್ಣೆ ಸಂಗ್ರಹಿಸಲು ಮುಗಿಬಿದ್ದ ಘಟನೆ ನಡದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಈ ವರ್ತನೆಯ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ಎಣ್ಣೆ ಸೋರಿಕೆಯಾಗುತ್ತಿದ್ದಂತೆ ವಿಷಯ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಬಕೆಟ್, ಬೋಣಿ ಹಾಗೂ ಪ್ಲಾಸ್ಟಿಕ್ ಡಬ್ಬಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಎಣ್ಣೆ ತುಂಬಿಕೊಳ್ಳಲು ಸ್ಪರ್ಧೆಗೆ ಬಿದ್ದರು.
ಇದನ್ನೂ ಓದಿ: ಆರ್‌ಆರ್‌ಬಿ ಜೆಇ ಹುದ್ದೆಗಳ ಸಂಖ್ಯೆ ಹೆಚ್ಚಳ: 4,029 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ
ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆ ಜಾರುವ ಅಪಾಯ ಮತ್ತು ಬೆಂಕಿ ಅವಘಡದ ಮುನ್ನೆಚ್ಚರಿಕೆ ನೀಡಿ ಜನರನ್ನು ತಡೆಯಲು ಪ್ರಯತ್ನಿಸಿದರೂ, ಸಾರ್ವಜನಿಕರು ಪೊಲೀಸರ ಮಾತು ಆಲಿಸದೆ ಎಣ್ಣೆ ಸಂಗ್ರಹಿಸುವುದನ್ನು ಮುಂದುವರಿಸಿದರು.ವಿಡಿಯೋ Inshorts ಹಾಗೂ Navbharat Times ನಂತಹ ವೇದಿಕೆಗಳಲ್ಲಿ ಹಂಚಿಕೆಯಾಗಿದ್ದು, “ಕೆಲವು ನೂರು ರೂಪಾಯಿ ಉಚಿತವಾಗಿ ಪಡೆಯಲು ಜೀವವನ್ನೇ ಅಪಾಯಕ್ಕೆ ಒಡ್ಡುತ್ತಿದ್ದಾರೆ” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

