Breaking News

ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿಜೃಂಭಣೆಯ “ಸಂಸ್ಕೃತ ಛಾತ್ರ ಸಮ್ಮೇಳನ”: ಸಂಸ್ಕೃತ ರಕ್ಷಣೆಗೆ ವಸಂತ ಮಾಧವ ಕರೆ

ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದ ಸಂಸ್ಕೃತ ವಿಭಾಗದ ವತಿಯಿಂದ ಸಂಸ್ಕೃತ ಸಪ್ತಾಹ 2026ರ ಪ್ರಯುಕ್ತ ವಿದ್ಯಾಕೇಂದ್ರದ ಸಂಸ್ಕೃತ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ “ಸಂಸ್ಕೃತ ಛಾತ್ರ ಸಮ್ಮೇಳನ”ವು ಮಂಗಳವಾರ (ಆಗಸ್ಟ್ 25, 2026) ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ವೈಭವದಿಂದ ನಡೆಯಿತು.

ಪ್ರಗತಿಪರ ಕೃಷಿಕ, ಕಜೆ ವೃಕ್ಷಾಲಯದ ಸ್ಥಾಪಕ ಹಾಗೂ ಸಂಸ್ಕೃತಾಭಿಮಾನಿ ಶ್ರೀ ವಸಂತ ಕಜೆ ಅವರು ದೀಪ ಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಿ ಶುಭಾಶಯ ಕೋರಿದರು. ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಶ್ರೀಮಾನ್ ಮಾತನಾಡಿ, “ಸಂಸ್ಕೃತವು ಎಲ್ಲಾ ಭಾಷೆಗಳ ಜನನಿ. ಹಿಂದೆ ಪ್ರತಿಯೊಬ್ಬರ ಮಾತೃಭಾಷೆಯಾಗಿದ್ದ ಸಂಸ್ಕೃತದಿಂದ ಕಾಲಕ್ರಮೇಣ ಇತರ ಭಾಷೆಗಳು ಜನ್ಮತಾಳಿದವು. ಸಂಸ್ಕೃತವು ಕೇವಲ ಭಾಷೆಯಲ್ಲ, ಅದನ್ನು ರಕ್ಷಿಸಿದರೆ ಅಪಾರ ಜ್ಞಾನ ಭಂಡಾರವನ್ನು ರಕ್ಷಿಸಿದಂತೆ” ಎಂದು ಹೇಳುತ್ತಾ ಸಂಸ್ಕೃತ ಮಾತೆಯ ರಕ್ಷಣೆಗೆ ಕರೆ ನೀಡಿದರು.

ಪರ್ಯಾವರಣ ಗತಿವಿಧಿಯ ಪ್ರಾಂತ ಸಂಯೋಜಕ ಶ್ರೀ ವೆಂಕಟೇಶ್, ತ್ಯಾಜ್ಯ ನಿರ್ವಹಣಾ ವಿಭಾಗ ಪ್ರಮುಖ ಶ್ರೀ ಕೇಶವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ಜಯರಾಮ್ ಶ್ರೀಮಾನ್ ಕಾರ್ಯಕ್ರಮ ನಿರ್ವಹಿಸಿದರು. ಕು. ಭೂಮಿಕಾ ಸ್ವಾಗತಿಸಿ, ಕು. ರಾಜೇಶ್ವರಿ ಧನ್ಯವಾದ ಸಮರ್ಪಿಸಿದರು.

ಸಮ್ಮೇಳನದಲ್ಲಿ ವಿದ್ಯಾಕೇಂದ್ರದ ವಿವಿಧ ವಿಭಾಗಗಳ ಸಂಸ್ಕೃತ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಸರಳ ಸಂಸ್ಕೃತ ಸಂಭಾಷಣೆ ಹಾಗೂ ವಿವಿಧ ಮನೋರಂಜನಾತ್ಮಕ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ‘ರಾಕಿಂಗ್ ಸ್ಟಾರ್’ ಯಶ್: ಮಂಜುನಾಥ ಸ್ವಾಮಿಯ ದರ್ಶನ ಪಡೆದು ‘ಟಾಕ್ಸಿಕ್’ ಯಶಸ್ಸಿಗೆ ವಿಶೇಷ ಪೂಜೆ

ಮೈತ್ರೇಯೀ ಗುರುಕುಲ ಮೂರುಕಜೆ ಇಲ್ಲಿನ ನಾಲ್ವರು ಛಾತ್ರೆಯರು ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಶ್ರೀರಾಮ ಪದವಿ ವಿಭಾಗದ ಪ್ರಾಚಾರ್ಯ ಕೃಷ್ಣ ಪ್ರಸಾದ್ ಕಾಯರಕಟ್ಟೆ ಮತ್ತು ಸಂಸ್ಕೃತ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಪದವಿ ವಿಭಾಗದ ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ಪ್ರಸನ್ನಾ ಸಮಾರೋಪ ಕಾರ್ಯಕ್ರಮ ನಡೆಸಿಕೊಟ್ಟರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *