Breaking News

ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರಕೃತಿ ವಿಕೋಪ: 160ಕ್ಕೂ ಹೆಚ್ಚು ಬಲಿ, 133ಕ್ಕೂ ಹೆಚ್ಚು ಭಾರತೀಯ ಯಾತ್ರಿಕರು ನಾಪತ್ತೆ

ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಕ್ಷಿಪ್ರ ಪ್ರವಾಹ ಹಾಗೂ ಭೂಕುಸಿತದಿಂದಾಗಿ ನೇಪಾಳಾದ್ಯಂತ ಭಾರೀ ವಿನಾಶ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ಈವರೆಗೆ 160ಕ್ಕೂ ಹೆಚ್ಚು ಜನರು ಸಾಗಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ. ಈ ಪ್ರವಾಹವು ಭಾರತದ ಗಡಿ ರಾಜ್ಯವಾದ ಬಿಹಾರಕ್ಕೂ ಆತಂಕ ತಂದೊಡ್ಡಿದ್ದು, ಗಂಡಕ್ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಈ ಭೀಕರ ಭೂಕುಸಿತವು 5.2 ತೀವ್ರತೆಯ ಭೂಕಂಪದಂತೆಯೇ ಕಂಪನವನ್ನು ಸೃಷ್ಟಿಸಿದೆ. ಗ್ಲೇಷಿಯರ್ (ಹಿಮನದಿ) ಕುಸಿತದಿಂದಾಗಿ ಭಾರಿ ಪ್ರಮಾಣದ ಮಂಜುಗಡ್ಡೆ, ಕಲ್ಲು, ಮಣ್ಣು ಮತ್ತು ನೀರು ‘ಲ್ಹೆಂಡೆ ಖೋಲಾ’ (ಲಂದೆ ನದಿ) ಮುಖಾಂತರ ಭೋಟೆ ಕೋಶಿ ನದಿಯನ್ನು ಸೇರಿದೆ.

ರಸುವಾ ಮತ್ತು ಧಾಡಿಂಗ್ ಜಿಲ್ಲೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಈ ಪ್ರವಾಹವು ತ್ರಿಶೂಲಿ ನದಿಯ ಮೂಲಕ ನುವಾಕೋಟ್, ಚಿಟ್ವಾನ್, ಗೋರ್ಖಾ, ತನಾಹು ಮತ್ತು ನವಲಪರಾಸಿ ಪೂರ್ವ ಜಿಲ್ಲೆಗಳಿಗೆ ವ್ಯಾಪಿಸಿದೆ. ಕಾಠ್ಮಂಡುವಿನಿಂದ 70 ಕಿ.ಮೀ ನಿಂದ 200 ಕಿ.ಮೀ ವ್ಯಾಪ್ತಿಯ ಪ್ರದೇಶಗಳು ಜಲಾವೃತಗೊಂಡಿವೆ. ಸುಮಾರು 19 ಮೋಟಾರು ಸೇತುವೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಬೆತ್ರಾವತಿಯಿಂದ ರಸುವಾಗಧಿ ಸಂಪರ್ಕಿಸುವ 42 ಕಿ.ಮೀ ರಸ್ತೆ ಸಂಪೂರ್ಣ ಧ್ವಂಸಗೊಂಡಿದೆ.

ನೇಪಾಳದ ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ ಕನಿಷ್ಠ 133 ಭಾರತೀಯ ಯಾತ್ರಿಕರು ನಾಪತ್ತೆಯಾಗಿದ್ದಾರೆ. ಸಂಪರ್ಕ ಸಾಧಿಸಲು ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುರ್ತು ಸಹಾಯವಾಣಿಗಳನ್ನು ಆರಂಭಿಸಿದೆ. ಈಶಾ ಫೌಂಡೇಶನ್‌ನ 77 ಸದಸ್ಯರು ವಲಸೆ ಕೇಂದ್ರದಲ್ಲಿ (Immigration centre) ಇದ್ದಾಗ ಪ್ರವಾಹಕ್ಕೆ ಸಿಲುಕಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸದ್ಗುರು ತಿಳಿಸಿದ್ದಾರೆ. ಮಹಾರಾಷ್ಟ್ರ (ಟೋಲ್-ಫ್ರೀ: 1070 / +91-9321587143), ಉತ್ತರ ಪ್ರದೇಶ (1070) ಸೇರಿದಂತೆ ವಿವಿಧ ರಾಜ್ಯಗಳು ಸಹಾಯವಾಣಿ ತೆರೆದಿವೆ. ತಮಿಳುನಾಡಿನ 37 ಪ್ರವಾಸಿಗರು ನಾಪತ್ತೆಯಾಗಿದ್ದು, ಕೇರಳದ 36 ಜನರ ಗುಂಪು ಸುರಕ್ಷಿತವಾಗಿದೆ.

ಇದನ್ನೂ ಓದಿ: ನೇಪಾಳ ಪ್ರವಾಹಕ್ಕೆ ಧ್ವಂಸವಾಯ್ತು ಚೀನಾ ಗಡಿಯ ಸೇತುವೆ: ಒಂದು ಕ್ಷಣದಲ್ಲಿ ಎಲ್ಲವೂ ನಾಶ

ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಬಾಳೇಂದ್ರ ಶಾ ಅವರೊಂದಿಗೆ ಮಾತನಾಡಿ ಎಲ್ಲಾ ರೀತಿಯ ನೆರವಿನ ಭರವಸೆ ನೀಡಿದ್ದಾರೆ. C-130J ವಿಮಾನದ ಮೂಲಕ 10 ಟನ್ ತುರ್ತು ಪರಿಹಾರ ಸಾಮಗ್ರಿಗಳು (ಮದ್ದುಗಳು, ತಾತ್ಕಾಲಿಕ ಶರಮಧಾಮಗಳು, ಕಂಬಳಿಗಳು, ಸೋಲಾರ್ ದೀಪಗಳು) ಕಾಠ್ಮಂಡುವಿಗೆ ತಲುಪಿವೆ. ಹೆಚ್ಚುವರಿಯಾಗಿ C-17 ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ಕಾಯ್ದಿರಿಸಲಾಗಿದೆ.

354 MW ಸಾಮರ್ಥ್ಯದ 8 ಕಾರ್ಯನಿರತ ಜಲವಿದ್ಯುತ್ ಯೋಜನೆಗಳು (ರಸುವಾಗಧಿ 111MW, ಸಂಜೇನ್ ಖೋಲಾ 78MW, ಅಪ್ಪರ್ ತ್ರಿಶೂಲಿ 3A 60MW) ಮತ್ತು ನಿರ್ಮಾಣ ಹಂತದಲ್ಲಿದ್ದ 5 ಯೋಜನೆಗಳು ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾಗಿವೆ. ನೇಪಾಳದ ನೀರು ಗಂಡಕ್ ನದಿಗೆ ಹರಿದುಬಂದಿದ್ದರಿಂದ ವಾಲ್ಮೀಕಿನಗರದಲ್ಲಿರುವ ಗಂಡಕ್ ಬ್ಯಾರೇಜ್‌ನ ಎಲ್ಲಾ 36 ಗೇಟ್‌ಗಳನ್ನು ತೆರೆಯಲಾಗಿದೆ. ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಮುಜಾಫರ್‌ಪುರ ಸೇರಿದಂತೆ 8 ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *