ಶ್ರೀಕೃಷ್ಣನೆಂದರೆ ತಕ್ಷಣ ನೆನಪಾಗುವುದು ಆತನ ಮುಡಿಯ ಮೇಲಿರುವ ನವಿಲುಗರಿ (Peacock Feather). ನಿಸರ್ಗ, ಸೌಂದರ್ಯ, ಪ್ರೀತಿ ಮತ್ತು ದಿವ್ಯತೆಯ ಸಂಕೇತವಾಗಿರುವ ನವಿಲುಗರಿಯು ಕೃಷ್ಣನ ಅಲಂಕಾರದ ಪ್ರಮುಖ ಭಾಗವಾಗಿದೆ. ಕೃಷ್ಣನ ನೃತ್ಯಕ್ಕೆ ಮನಸೋತ ನವಿಲುಗಳು ತಮ್ಮ ಗರಿಗಳನ್ನು ಆತನಿಗೆ ಉಡುಗೊರೆಯಾಗಿ ನೀಡಿದವು, ಕೃಷ್ಣನು ಅವುಗಳನ್ನು ಗೌರವಿಸಿ ತನ್ನ ಮುಡಿಯಲ್ಲಿ ಧರಿಸಿದ ಎಂಬ ಸುಂದರ ಕಥೆಯಿದೆ.
ಈ ವರ್ಷ ಸೆಪ್ಟೆಂಬರ್ 4 ರಂದು ಕೃಷ್ಣ ಜನ್ಮಾಷ್ಟಮಿ (Janmashtami 2026) ಹಬ್ಬವಿದ್ದು, ಹಬ್ಬದ ಆಚರಣೆಗೆ ನವಿಲುಗರಿಯ ಶೈಲಿಯ ಉಡುಪುಗಳನ್ನು ಧರಿಸುವುದು ಪ್ರಸ್ತುತ ಫ್ಯಾಷನ್ ಟ್ರೆಂಡ್ ಆಗಿದೆ. ಸಾಂಪ್ರದಾಯಿಕ ಉಡುಪುಗಳಿಗೆ ಆಧುನಿಕ ಟಚ್ ನೀಡಿ ಸಿದ್ಧಪಡಿಸಲಾದ 5 ಅತ್ಯಾಕರ್ಷಕ ನವಿಲುಗರಿ ವಿನ್ಯಾಸದ ಸೀರೆಗಳ ವಿವರ ಇಲ್ಲಿದೆ:
ಜನ್ಮಾಷ್ಟಮಿಗೆ ನವಿಲುಗರಿ ವಿನ್ಯಾಸದ 5 ಆಕರ್ಷಕ ಸೀರೆಗಳು
1. ಕಾಟನ್ ನವಿಲುಗರಿ ಸೀರೆ (Cotton Peacock Feather Saree):
ಸರಳ ಹಾಗೂ ಅತ್ಯಂತ ಕಂಫರ್ಟಬಲ್ ಲುಕ್ ಬಯಸುವವರಿಗೆ ಕೆರಳ ಕಾಟನ್ ಶೈಲಿಯ ಬಿಳಿ ಬಣ್ಣದ ಸೀರೆ ಸೂಕ್ತವಾಗಿದೆ. ಹಸಿರು ಬಾರ್ಡರ್, ಜರಿ ಮತ್ತು ಎದ್ದು ಕಾಣುವ ನವಿಲುಗರಿಯ ಮೋಟಿಫ್‌ಗಳು ಈ ಸೀರೆಗೆ ಸಾಂಪ್ರದಾಯಿಕ ಸ್ಪರ್ಶ ನೀಡುತ್ತವೆ.
2. ಹ್ಯಾಂಡ್ ಪೇಂಟೆಡ್ ನವಿಲು ಸೀರೆ (Hand-painted Peacock Saree):
ಫ್ಲೋರಲ್ ವಿನ್ಯಾಸ ಹಾಗೂ ಕಲಾತ್ಮಕ ಸೀರೆಗಳನ್ನು ಇಷ್ಟಪಡುವವರಿಗೆ ಕೈಯಿಂದ ಬಿಡಿಸಿದ (Hand-painted) ನವಿಲು ಸೀರೆ ಅತ್ಯುತ್ತಮ. ಬಿಳಿ ಮತ್ತು ಕಂಚಿನ ವರ್ಣದ ಜರಿ ಬಾರ್ಡರ್ ಜೊತೆಗೆ ಪಲ್ಲು ಭಾಗದಲ್ಲಿ ವರ್ಣರಂಜಿತವಾಗಿ ಬಿಡಿಸಲಾದ ನವಿಲು ಹಾಗೂ ಗುಲಾಬಿ ಹೂವುಗಳ ಚಿತ್ರಗಳು ಈ ಸೀರೆಯ ಅಂದವನ್ನು ಹೆಚ್ಚಿಸುತ್ತವೆ.
3. ಓಪನ್ ನವಿಲುಗರಿ ಸೀರೆ (Open Peacock Feather Saree):
ಹಬ್ಬದ ದಿನ ರಿಚ್ ಹಾಗೂ ವೈಭವೋಪೇತ ಲುಕ್ ಪಡೆಯಲು ಐವರಿ-ವೈಟ್ (Ivory-white) ಶೀರ್ ಬಟ್ಟೆಯ ಸೀರೆ ಧರಿಸಬಹುದು. ಅಗಲವಾದ ಚಿನ್ನದ ಬ್ರೊಕೇಡ್ ಬಾರ್ಡರ್ ಮತ್ತು ಪಲ್ಲು ಭಾಗದಲ್ಲಿರುವ ವಿಶಾಲವಾದ ನವಿಲು ಮುದ್ರಣವು (Peacock Print) ಈ ಸೀರೆಗೆ ರಾಯಲ್ ಲುಕ್ ನೀಡುತ್ತದೆ.
4. ನವಿಲು ಪಲ್ಲು ಸೀರೆ (Peacock Pallu Saree):
ಗಾಢ ನೀಲಿ (Deep Blue) ಬಣ್ಣದ ಸೀರೆಯ ಮೇಲೆ ಗೋಲ್ಡನ್ ಎಥ್ನಿಕ್ ವಿನ್ಯಾಸವಿದ್ದು, ಪಲ್ಲು ಭಾಗದಲ್ಲಿ ನಿಸರ್ಗದ ಮಡಿಲಲ್ಲಿರುವ ನವಿಲಿನ ಕಲಾಕೃತಿ ಹಾಗೂ ನೀಲಿ ಬಣ್ಣದ ಕುಚ್ಚುಗಳನ್ನು (Tassels) ನೀಡಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

