ಸುಳ್ಯ: ಸೌಹಾರ್ದತೆ ಮತ್ತು ಸಹೋದರತ್ವದ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ (BMS) ಸಂಯೋಜಿತ ಸುಳ್ಯ ಘಟಕದ ವತಿಯಿಂದ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಹಳೆಗೇಟಿನಲ್ಲಿರುವ ಸಂಘದ ಕಚೇರಿ ‘ತಿಲಕ ಭವನ’ದಲ್ಲಿ ಈ ಕಾರ್ಯಕ್ರಮವು ಜರುಗಿತು. ಚಾಲಕರು ಪರಸ್ಪರ ರಾಖಿ ಕಟ್ಟಿ, ರಕ್ಷಾ ಬಂಧನದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸೌಹಾರ್ದತೆಯನ್ನು ಮೆರೆದರು.
ಇದನ್ನೂ ಓದಿ:ದೇಶ ಮತ್ತು ವಿದೇಶದಲ್ಲಿರುವ ಸಕಲ ಭಾರತೀಯರಿಗೆ ರಕ್ಷಾಬಂಧನ ಹಬ್ಬದ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್., ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್, ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ, ಜಂಟಿ ಕಾರ್ಯದರ್ಶಿಗಳಾದ ಸುರೇಂದ್ರ ಕಾಮತ್, ರಾಧಾಕೃಷ್ಣ ಬೈತಡ್ಕ, ಚಂದ್ರಶೇಖರ ಮರ್ಕಂಜ, ನಿರ್ದೇಶಕರಾದ ಲೋಕೇಶ್ ಬಸ್ ನಿಲ್ದಾಣ, ಹರೀಶ್ ನೆಕ್ರಾಜೆ, ಜಯರಾಮ ಜನಾರ್ದನ ಶ್ರೀರಾಮ್ ಪೇಟೆ, ಜಗದೀಶ್ ವಿಶ್ವನಾಥ ಪೈಚಾರ್, ಕಾರ್ತಿಕ್, ರೋಹಿತ್ ಗಾಂಧಿನಗರ, ಶಂಕರ, ವೇಣುಗೋಪಾಲ ಕುರುಂಜಿ ಭಾಗ್, ಪ್ರಸನ್ನ ರಥಬೀದಿ, ಚಾಮಯ್ಯ ಮಾರ್ಕೆಟ್ ರಸ್ತೆ ಹಾಗೂ ಸಂಘದ ಹಲವು ಸದಸ್ಯರು ಭಾಗವಹಿಸಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

