Breaking News

ಮೈಮೇಲೆ ಮೂಡಿದ ಜರ್ಸಿ ನಂಬರ್: ಕೇವಲ ಶ್ರಮಕ್ಕೆ ಸಿಕ್ಕ ‘ಪರ್ಮನೆಂಟ್ ಜೆರ್ಸಿ ಇಂಪ್ರಿಂಟ್’ ಎಂದ ದೇವದತ್ ಪಡಿಕ್ಕಲ್

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಬಳಿಕ ಕನ್ನಡಿಗ ಹಾಗೂ ಭಾರತೀಯ ಕ್ರಿಕೆಟರ್ ದೇವದತ್ ಪಡಿಕ್ಕಲ್ (Devdutt Padikkal) ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರರು ಪಡುವ ಶ್ರಮ, ಮೈಬೆವರು ಹರಿಸುವ ಪರಿ ಮತ್ತು ಬಿಸಿಲಿನಲ್ಲಿ ಅನುಭವಿಸುವ ಕಷ್ಟಕ್ಕೆ ನಿದರ್ಶನವಾಗಿ ಪಡಿಕ್ಕಲ್ ತಮ್ಮ ಬೆನ್ನಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಕಠಿಣ ಟೆಸ್ಟ್ ಪಂದ್ಯದ ನಂತರ ದೇವದತ್ ಪಡಿಕ್ಕಲ್ ತಮ್ಮ ಬೆನ್ನಿನ ಮೇಲಿದ್ದ ಬಿಸಿಲಿನ ಕಲೆ (Sun Tan) ಹಾಗೂ ಜರ್ಸಿ ನಂಬರ್‌ನಂತೆ ಕಾಣುತ್ತಿದ್ದ ಗುರುತನ್ನು ಫೋಟೋ ತೆಗೆದು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್;

ಈ ಫೋಟೋಗೆ “ಪ್ರಕೃತಿಯೇ ನೀಡಿದ ಖಾಯಂ ಜರ್ಸಿ ಇಂಪ್ರಿಂಟ್ (Nature’s way of gifting a permanent jersey imprint)” ಎಂದು ಆಕರ್ಷಕ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ ‘: ಮತ್ತೆ ಒಂದಾದ ಸೆಹ್ವಾಗ್-ದ್ರಾವಿಡ್ ಜೋಡಿ: ಅಂಡರ್-19 ಭಾರತ ತಂಡಕ್ಕೆ ಆಯ್ಕೆಯಾದ ಆರ್ಯವೀರ್ ಮತ್ತು ಅನ್ವಯ್

ದೀರ್ಘಾವಧಿಯ ಟೆಸ್ಟ್ ಪಂದ್ಯಗಳಲ್ಲಿ ಮೈದಾನದಲ್ಲಿ ಗಂಟೆಗಟ್ಟಲೆ ಬಿಸಿಲಿನಲ್ಲಿ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಮಾಡುವುದರಿಂದ ಉಂಟಾದ ಈ ‘ಟ್ಯಾನ್ ಮಾಸ್ಕ್’ ರೆಡ್-ಬಾಲ್ ಕ್ರಿಕೆಟ್‌ನ ತೀವ್ರತೆ ಹಾಗೂ ಆಟಗಾರರ ಸಮರ್ಪಣಾ ಭಾವಕ್ಕೆ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *