Breaking News

ಮತ್ತೆ ಒಂದಾದ ಸೆಹ್ವಾಗ್-ದ್ರಾವಿಡ್ ಜೋಡಿ: ಅಂಡರ್-19 ಭಾರತ ತಂಡಕ್ಕೆ ಆಯ್ಕೆಯಾದ ಆರ್ಯವೀರ್ ಮತ್ತು ಅನ್ವಯ್

ಕೋಲ್ಕತ್ತಾ: ಭಾರತೀಯ ಕ್ರಿಕೆಟ್‌ನಲ್ಲಿ ಸೆಹ್ವಾಗ್ ಮತ್ತು ದ್ರಾವಿಡ್ ಎಂಬ ಎರಡು ಹೆಸರುಗಳು ದೈತ್ಯ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಇದೀಗ ಸುಮಾರು ಒಂದು ದಶಕದ ನಂತರ, ಈ ಐಕಾನಿಕ್ ಹೆಸರುಗಳು ಮತ್ತೆ ಭಾರತೀಯ ಕ್ರಿಕೆಟ್‌ನಲ್ಲಿ ಒಂದಾಗಿವೆ – ಆದರೆ ವೀರೆಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ರೂಪದಲ್ಲಲ್ಲ, ಬದಲಿಗೆ ಅವರ ಪುತ್ರರಾದ ಆರ್ಯವೀರ್ ಸೆಹ್ವಾಗ್ (Aaryavir Sehwag) ಮತ್ತು ಅನ್ವಯ್ ದ್ರಾವಿಡ್ (Anvay Dravid) ರೂಪದಲ್ಲಿ

ಆಸ್ಟ್ರೇಲಿಯಾ ಅಂಡರ್-19 ವಿರುದ್ಧ ಸೆಪ್ಟೆಂಬರ್ 18ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ (One-Day) ಸರಣಿಗಾಗಿ ಬಿಸಿಸಿಐ ಪ್ರಕಟಿಸಿರುವ ಭಾರತದ ಅಂಡರ್-19 ತಂಡಕ್ಕೆ ಆರ್ಯವೀರ್ ಹಾಗೂ ಅನ್ವಯ್ ಇಬ್ಬರೂ ಆಯ್ಕೆಯಾಗಿದ್ದಾರೆ. ಮಲ್ಟಿ-ಡೇ (Multi-Day) ತಂಡದಲ್ಲಿ ಇವರಿಬ್ಬರಿಗೆ ಜಾಗ ಸಿಗದಿದ್ದರೂ, ಆಸ್ಟ್ರೇಲಿಯಾ ವಿರುದ್ಧವೇ ಈ ಇಬ್ಬರು ದಿಗ್ಗಜರ ಪುತ್ರರು ಪದಾರ್ಪಣೆ ಮಾಡುತ್ತಿರುವುದು ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

ಹಿರಿಯ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ವೀರೆಂದ್ರ ಸೆಹ್ವಾಗ್ ಕೊನೆಯ ಬಾರಿಗೆ ಒಟ್ಟಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದು ಜನವರಿ 2012 ರ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ. 024 ರ ವಿನೂ ಮಾಂಕಡ್ ಟ್ರೋಫಿಯಲ್ಲಿ ದೆಹಲಿ ಯು-19 ಪರ ಪಾದಾರ್ಪಣೆ ಮಾಡಿದ್ದ ಆರ್ಯವೀರ್, ಕೂಚ್ ಬೆಹಾರ್ ಟ್ರೋಫಿಯಲ್ಲಿ ಮೇಘಾಲಯ ವಿರುದ್ಧ ಬಾರಿಸಿದ ಭರ್ಜರಿ 297 ರನ್ (309 ಎಸೆತಗಳಲ್ಲಿ) ಪ್ರದರ್ಶನದಿಂದ ದೇಶದ ಗಮನ ಸೆಳೆದಿದ್ದರು.

ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ (DPL) ವೆಸ್ಟ್ ಡೆಲ್ಲಿ ಲಯನ್ಸ್ ಪರ ಓಪನರ್ ಆಗಿ ಕಣಕ್ಕಿಳಿದಿದ್ದ ಆರ್ಯವೀರ್ ಬಾರಿಸಿದ ಸ್ಕ್ವೇರ್ ಡ್ರೈವ್ ಮತ್ತು ಕವರ್ ಡ್ರೈವ್‌ಗಳು, ಅಚ್ಚುಮೆಚ್ಚಿನ ತಂದೆ ವೀರೆಂದ್ರ ಸೆಹ್ವಾಗ್ ಅವರ ಆಟದ ಶೈಲಿಯನ್ನೇ ನೆನಪಿಸುವಂತಿವೆ.ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್, ವಿಕೆಟ್ ಕೀಪರ್-ಬ್ಯಾಟರ್ ಆಗಿ ತಮ್ಮದೇ ಆದ ಹಾದಿ ಕಂಡುಕೊಳ್ಳುತ್ತಿದ್ದಾರೆ.

ಕರ್ನಾಟಕ ಯು-19 ತಂಡವನ್ನು ಮುನ್ನಡೆಸಿದ್ದ ಅನ್ವಯ್, ವಿನೂ ಮಾಂಕಡ್ ಟ್ರೋಫಿಯ 6 ಪಂದ್ಯಗಳಲ್ಲಿ 55 ರ ಸರಾಸರಿಯಲ್ಲಿ 220 ರನ್ ಗಳಿಸಿದ್ದರು. ಹಿಮಾಚಲ ಪ್ರದೇಶ ವಿರುದ್ಧ ಅಜೇಯ 82 ರನ್ ಗಳಿಸಿ ಪಂದ್ಯ ಗೆಲ್ಲಿಸಿದ್ದರು. ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಪಾದಾರ್ಪಣೆ ಪಂದ್ಯದಲ್ಲೇ ಅನ್ವಯ್ 67 ಎಸೆತಗಳಲ್ಲಿ 87 ರನ್ ಚಚ್ಚಿ, ಭಾರತ ತಂಡ 81/4ಕ್ಕೆ ಸಂಕಷ್ಟದಲ್ಲಿದ್ದಾಗ ಅರ್ಜುನ್ ರಾಜ್‌ಪುತ್ ಜೊತೆಗೂಡಿ 145 ರನ್‌ಗಳ ಮಹತ್ವದ ಭಾಗಿದಾರಿ ಪ್ರದರ್ಶಿಸಿ ತಂಡವನ್ನು ದಡ ಸೇರಿಸಿದ್ದರು.

ಇದನ್ನೂ ಓದಿ: ಪುರುಷರ ಹಾಕಿ ವಿಶ್ವಕಪ್ 2026: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಇಂದು ‘ಮಾಡು ಇಲ್ಲವೇ ಮಡಿ’ ಪಂದ್ಯ

2001 ರ ಈಡನ್ ಗಾರ್ಡನ್ಸ್ ಟೆಸ್ಟ್‌ನಲ್ಲಿ 180 ರನ್ ಹಾಗೂ 2003-04 ರ ಅಡಿಲೇಡ್ ಟೆಸ್ಟ್‌ನಲ್ಲಿ ಬಾರಿಸಿದ ಅಜೇಯ ದ್ವಿಶತಕ (233) ಕಂಗಾರೂ ಪಡೆಗೆ ಸಿಂಹಸ್ವಪ್ನವಾಗಿತ್ತು. ಆ ಸರಣಿಯಲ್ಲಿ ದ್ರಾವಿಡ್ 619 ರನ್ ಬಾರಿಸಿ ಪ್ಲೇಯರ್ ಆಫ್ ದ ಸರಣಿ ಪಡೆದಿದ್ದರು.2003 ರ ಮೆಲ್ಬೋರ್ನ್ (MCG) ಟೆಸ್ಟ್‌ನಲ್ಲಿ ಕೇವಲ ಎರಡೇ ಸೆಷನ್‌ಗಳಲ್ಲಿ 195 ರನ್ ಚಚ್ಚಿ ಆಸ್ಟ್ರೇಲಿಯನ್ ಬೌಲರ್‌ಗಳನ್ನು ಧೂಳೀಪಟ ಮಾಡಿದ್ದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *