Belthangady: ಶಾಲೆಗೆ ಹೊರಟ ಬಾಲಕನಿಗೆ ಎದುರಾದ ಚಿರತೆ!

Belthangady: ಶಾಲೆಗೆ ಹೊರಟ ಬಾಲಕನಿಗೆ ಚಿರತೆ ಎದುರಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ತಾಲೂಕಿನ ಮುಂಡಾಜೆ ಗ್ರಾಮದ ಶೀಟು ಕಾಯರ್ತೋಡಿ ರಸ್ತೆಯಲ್ಲಿ ಶಾಲೆಗೆ ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಚಿರತೆಯೊಂದು ಎದುರಾಗಿದ್ದು, ಬಾಲಕ ಭಯಗೊಂಡು ತನ್ನ ಸೈಕಲನ್ನು ಹಿಂದಕ್ಕೆ ತಿರುಗಿಸಿ ವೇಗವಾಗಿ ಓಡಿಸಿ ತನ್ನ ಮನೆಗೆ ಸೇರಿದ ಘಟನೆ ಜ.16 ರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ.

Advertisement

ಕಲ್ಮಂಜ ಗ್ರಾಮದ ವಿದ್ಯಾರ್ಥಿ, ಮುಂಡಾಜೆ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ಜೀವಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: Sankranthi : ಸಂಕ್ರಾಂತಿಗೆ ಮನೆಗೆ ಬಂದ ಅಳಿಯನಿಗೆ 290 ವಿಧದ ಭಕ್ಷ್ಯ ಉಣಬಡಿಸಿದ ಅತ್ತೆ

Advertisement

ಮುಂಡಾಜೆ ಗ್ರಾಮದ ಶೀಟು ಕಾರ್ಯತೋಡಿ ರಸ್ತೆಯಲ್ಲಿ ಮೂರು ಮಾರ್ಗ ಎಂಬಲ್ಲಿ ಇಂದು ಬೆಳಿಗ್ಗೆ 7.30 ರ ಸಮಯ ಶಾಲಾ ಬಾಲಕ ಶಾಲೆಗೆ ಸೈಕಲ್‌ನಲ್ಲಿ ಬರುತ್ತಿದ್ದ ವೇಳೆ ಕಾಡಿನಿಂದ ರಸ್ತೆಗೆ ಚಿರತೆ ಬಂದಿದ್ದು, ಇದನ್ನು ಕಂಡು ಹೆದರಿ ಸೈಕಲನ್ನು ಹಿಂದೆ ತಿರುಗಿಸಿ ವೇಗವಾಗಿ ಬಂದು ಮನೆಗೆ ತಲುಪಿ, ಅಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.

ಇಂದು ಬೆಳಿಗ್ಗೆ ಕಡಿರುದ್ಯಾವರ ಗ್ರಾಮದಲ್ಲಿ ನಾಲ್ಕು ಚಿರತೆಗಳು ಕಂಡು ಬಂದ ಕುರಿತು ವರದಿಯಾಗಿದೆ. ಕಡಿರುದ್ಯಾವರ ಗ್ರಾಮದ ಕಾರ್ನಪ ಎಂಬಲ್ಲಿನಾಲ್ಕು ಚಿರತೆಗಳು ಸ್ಥಳೀಯರಿಗೆ ಕಂಡು ಬಂದಿರುವ ಕುರಿತು ವರದಿಯಾಗಿದ್ದು, ಇದು ಸ್ಥಳೀಯ ನಾಗರಿಕರಲ್ಲಿ ಆತಂಕ ಸೃಷ್ಟಿ ಉಂಟು ಮಾಡಿದೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು